Murder: ಸಾಲಕೊಟ್ಟು ಪ್ರಾಣ ಕಳೆದುಕೊಂಡ ಸ್ನೇಹಿತ, ದುಡ್ಡು ವಾಪಸ್ ಕೇಳಿದ್ದಕ್ಕೆ ಡೆಡ್ಲಿ ಮರ್ಡರ್!

ದೊಡ್ಡವರು ಒಂದು ಮಾತು ಹೇಳ್ತಾರೆ ಸ್ನೇಹಿತರ ಮಧ್ಯೆ, ಸ್ನೇಹದಲ್ಲಿ ಹಣ ಬರಬಾರದು ಅಂತ. ಇಲ್ಲಾಗಿದ್ದೂ ಅದೇ, ಚೆನ್ನಾಗಿಯೇ ಇದ್ದ ಸ್ನೇಹಿತರ ಮಧ್ಯೆ ಹಣದ ವಿಚಾರ ಬಂದಿತ್ತು. ಕೊಟ್ಟ ಸಾಲ ವಾಪಸ್ ಕೇಳಿ ಸ್ನೇಹ ಕಳೆದುಕೊಂಡಿದ್ದೊಂದೇ ಅಲ್ಲ, ಈತ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಸ್ನೇಹಿತರನ್ನು (Friends) ರಕ್ತ ಸಂಬಂಧವನ್ನೂ (Blood Relationship) ಮೀರಿದವರು ಎನ್ನುತ್ತಾರೆ. ಒಳ್ಳೆ ಸ್ನೇಹಿತ ತನ್ನ ಪ್ರಾಣ ಒತ್ತೆ ಇಟ್ಟು ಮತ್ತೊಬ್ಬ ಸ್ನೇಹಿತನ ಪ್ರಾಣ ಕಾಪಾಡ್ತಾನೆ ಅಂತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ರಕ್ತ ಸಂಬಂಧನ ಮೀರಿದ ಬಂಧು ಎನಿಸಿಕೊಂಡವರು ರಕ್ತ ಹರಿಸಿದ್ದಾನೆ. ಪ್ರಾಣ ಕಾಪಾಡಬೇಕಾದವನೇ ಸ್ನೇಹಿತನ ಪ್ರಾಣ ತೆಗೆದಿದ್ದಾನೆ. ದೊಡ್ಡವರು ಒಂದು ಮಾತು ಹೇಳ್ತಾರೆ ಸ್ನೇಹಿತರ (Friends) ಮಧ್ಯೆ, ಸ್ನೇಹದಲ್ಲಿ (Friendship) ಹಣ (Money) ಬರಬಾರದು ಅಂತ. ಇಲ್ಲಾಗಿದ್ದೂ ಅದೇ, ಚೆನ್ನಾಗಿಯೇ ಇದ್ದ ಸ್ನೇಹಿತರ ಮಧ್ಯೆ ಹಣದ ವಿಚಾರ ಬಂದಿತ್ತು. ಸಾಲ ಕೇಳಿ ಸ್ನೇಹ ಕಳೆದುಕೊಂಡಿದ್ದೊಂದೇ ಅಲ್ಲ, ಈತ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.

ಘಟನೆ ನಡೆದಿದ್ದು ಎಲ್ಲಿ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನ ಹಳ್ಳಿ ವ್ಯಾಪ್ತಿಯ ದೇವಣ್ಣನ ಪಾಳ್ಯ ಎಂಬಲ್ಲಿ ಘಟನೆ ನಡೆದಿದೆ. ಅಲ್ಲಿ ಮಂಜುನಾಥ್ ಎಂಬ 28 ವರ್ಷ ವಯಸ್ಸಿನ ಯುವಕ ಹತ್ಯೆಯಾಗಿದ್ದಾನೆ. ಆಘಾತಕಾರಿ ವಿಚಾರ ಅಂದ್ರೆ ಇಲ್ಲಿ ಮಂಜುನಾಥ್ ಹತ್ಯೆಯಾಗಿದ್ದು ಬೇರೆ ಯಾರಿಂದಲೋ ಅಲ್ಲ, ತನ್ನ ಸ್ನೇಹಿತ ಸಂತೋಷ್ ಎಂಬಾತನಿಂದ.

ಸಾಲ ಕೊಟ್ಟು ಸ್ನೇಹ ಕಳೆದುಕೊಂಡಿದ್ದ ಮಂಜುನಾಥ್

ಮೃತ ಮಂಜುನಾಥ್ ಹಾಗೂ ಆರೋಪಿ ಸಂತೋಷ್ ಇಬ್ಬರೂ ಸ್ನೇಹಿತರಾಗಿದ್ದರು. ಮಂಜುನಾಥ್ ಹಾಲು ವ್ಯಾಪಾರ ಮಾಡ್ತಾ ಇದ್ದರೆ, ಸಂತೋಷ್ ಕೃಷಿಕನಾಗಿದ್ದ.  ಸಾಕಷ್ಟು ವರ್ಷಗಳ ಕಾಲ ಚೆನ್ನಾಗಿಯೇ ಇದ್ದರು. ಈಗ ಕೆಲದಿನಗಳ ಹಿಂದೆ ಸಂತೋಷ್‌ಗೆ ಆರ್ಥಿಕವಾಗಿ ಸಮಸ್ಯೆ ಶುರುವಾಗಿತ್ತು. ಅದನ್ನು ಸ್ನೇಹಿತ ಮಂಜುನಾಥ್ ಬಳಿ ಹೇಳಿಕೊಂಡಿದ್ದ. ಆಗ ಮಂಜುನಾಥ್ ಗೆಳೆಯನಿಗೆ ಧೈರ್ಯ ತುಂಬಿದ್ದ. ಅಲ್ಲದೇ ತನ್ನಲ್ಲಿದ್ದ 25 ಸಾವಿರ ರೂಪಾಯಿಗಳನ್ನು ಸಾಲವಾಗಿ ಗೆಳೆಯ ಸಂತೋಷ್‌ಗೆ ಮಂಜನಾಥ್ ಕೊಟ್ಟಿದ್ದ.

ಇದನ್ನೂ ಓದಿ: Accident: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಭೀಕರ ಕಾರು ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು

ಹಣದ ವಿಚಾರಕ್ಕೆ ಆಪ್ತ ಸ್ನೇಹಿತರ ಮಧ್ಯೆ ಗಲಾಟೆ

ಮಂಜುನಾಥ್ ನಿಂದ 25 ಸಾವಿರ ರೂಪಾಯಿ ಹಣ ಪಡೆದಿದ್ದ ಸಂತೋಷ್, ತನ್ನ ಸಮಸ್ಯೆಯನ್ನೇನೋ ಬಗೆಹರಿಸಿಕೊಂಡಿದ್ದ. ಆದರೆ ಸುಮಾರು ಟೈಮ್ ಆದರೂ ಮಂಜುನಾಥ್‌ಗೆ ಅದನ್ನು ವಾಪಸ್ ಮಾಡಿರಲಿಲ್ಲ. ಹಣ ವಾಪಸ್ ಬೇಕು ಅಂತ ಮಂಜುನಾಥ್‌ನೇ ಸಾಕಷ್ಟು ಸಲ ಕೇಳಿದ್ದ. ಇದೇ ವಿಚಾರಕ್ಕೆ ಸ್ನೇಹಿತರ ನಡುವೆ ಆಗಾಗ ಗಲಾಟೆ, ಜಗಳ ನಡೆಯುತ್ತಿತ್ತು.

ಪೆಟ್ರೋಲ್ ಬಂಕ್ ಬಳಿ ಮಂಜುನಾಥ್ ಮೇಲೆ ಹಲ್ಲೆ

ಕಳೆದ 10ನೇ ತಾರೀಖಿನಂದು ರಾತ್ರಿ ದೇವಣ್ಣನಪಾಳ್ಯದ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಮಂಜುನಾಥ್, ಸಂತೋಷ್ ಬಳಿ ಹಣ ವಾಪಸ್ ಕೊಡುವಂತೆ ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದೆ. ಆಗ ಬೈಕ್‌ನಲ್ಲಿದ್ದ ಮಂಜುನಾಥ್ ಮೇಲೆ ಸಂತೋಷ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ ಮಂಜುನಾಥ್

ಈ ಘಟನೆಯಲ್ಲಿ ಮಂಜುನಾಥ್ ತಲೆ ಮತ್ತು ಕುತ್ತಿಗೆಗೆ ತೀವ್ರವಾಗಿ ಗಾಯವಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಿದ ವೈದ್ಯರು ತಲೆ ಒಳಗೆ ಭಾರೀ ಹಾನಿಯಾಗಿದೆ ಅಂತ ಹೇಳಿದ್ದರು. ಮರುದಿನ ಬೆಳಿಗ್ಗೆ ಮಂಜುನಾಥ್ ಹಾಸಿಗೆಯಿಂದ ಕೆಳಗೆ ಬಿದ್ದು, ತೀವ್ರ ಗಾಯದಿಂದ ನರಳಿ ಪ್ರಜ್ಞೆ ಕಳೆದುಕೊಂಡರು. ಆದಾದ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿದ್ರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆಸ್ಪತ್ರೆಯಲ್ಲೇ ಮಂಜುನಾಥ್ ಕೊನೆಯುಸಿರೆಳೆದರು.

ಇದನ್ನೂ ಓದಿ: ಪ್ರೇಮವಿವಾಹಕ್ಕೆ ತಂದೆಯೇ ವಿಲನ್.. ಮಗಳು ಗರ್ಭಿಣಿ ಅನ್ನೋದನ್ನು ನೋಡದೆ ಅಳಿಯನ Murder..!?

ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಮಂಜುನಾಥ್ ಸಾವಿನಿಂದ ಬಡ ಕುಟುಂಬ ಕಂಗೆಟ್ಟಿದೆ. ಹಾಲು ಮಾರಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಈಗ ಆಧಾರ ಇಲ್ಲದಂತಾಗಿದೆ. ಮಗನನ್ನು ಕಳೆದುಕೊಂಡ ಹೆತ್ತವರು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇದೀಗ ಮಂಜುನಾಥ್ ತಂದೆ ಆರೋಪಿ ಸಂತೋಷ್ ವಿರುದ್ಧ ದೂರು ನೀಡಿದ್ದಾರೆ.
Published by:Annappa Achari
First published: