Wife Escape: ನನ್ ಹೆಂಡ್ತಿ ಯಾರೊಟ್ಟಿಗೋ ಓಡಿ ಹೋಗಿದ್ದಾಳೆ, ಹುಡ್ಕಿ ಕೊಡಿ ಪ್ಲೀಸ್! ಪೊಲೀಸರಿಗೆ ನೊಂದ ಗಂಡನ ಮನವಿ

ದೆಹಲಿಯ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಮಗುವನ್ನು ತೊರೆದು, ಬೆಂಗಳೂರು ಮೂಲದ ಮಧ್ಯ ವಯಸ್ಕ ವ್ಯಕ್ತಿಯೊಂದಿಗೆ ಓಡಿ ಬಂದಿದ್ದಾಳೆ. ಇದೀಗ ಕಂಗೆಟ್ಟಿರುವ ಪತಿ, ತನ್ನ ಪತ್ನಿಯನ್ನು ಹುಡುಕಿ, ಕರೆತರುವಂತೆ ಬೆಂಗಳೂರು ಪೊಲೀಸರಿಗೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಅವರಿಬ್ಬರದ್ದು ಪುಟ್ಟ ಸಂಸಾರ. ಗಂಡ (Husband), ಹೆಂಡತಿ (Wife) ಹಾಗೂ ಪುಟ್ಟ ಮಗು (Child) ಇರುವ ಸಂಸಾರ. ಊಟಕ್ಕೆ (Meals), ತಿಂಡಿಗೆ ಬಡತನವಿದ್ದರೂ (Poverty) ಪ್ರೀತಿಗೆ (Love) ಕೊರತೆ ಇರಲಿಲ್ಲ. ಆದರೆ ಅವರ ಪ್ರೀತಿ ಮೇಲೆ, ಸಂಸಾರದ ಮೇಲೆ ಯಾರ ಕನಸು ಬಿತ್ತೋ ಏನೋ. ಆಕೆ ಮಾಡಬಾರದ್ದು ಮಾಡಿ ಬಿಟ್ಟಿದ್ದಾಳೆ. ಗಂಡ, ಮಗುವನ್ನು ಬಿಟ್ಟು ಬೇರೆ ವ್ಯಕ್ತಿಯೊಂದಿಗೆ (another person) ಓಡಿ ಹೋಗಿದ್ದಾಳಂತೆ. ಇದೀಗ ಕಂಗಾಲಾದ ಗಂಡ, ತನ್ನ ಹೆಂಡತಿಯನ್ನು ಹುಡುಕಿಕೊಡಿ ಅಂತ ಟ್ವಿಟರ್‌ನಲ್ಲೇ (Twitter) ಬೆಂಗಳೂರು ಪೊಲೀಸರ (Bengaluru Police) ಮೊರೆ ಹೋಗಿದ್ದಾನೆ. ಹೆಂಡತಿ, ಮಗುವಿನೊಂದಿಗೆ ತಾನು ಇರುವ ಫೋಟೋ (Photo) ಹಾಗೂ ಹೆಂಡತಿಯನ್ನು ಓಡಿಸಿಕೊಂಡು ಹೋಗಿರುವ (Delhi) ಮೂಲದ ವ್ಯಕ್ತಿಯ ಫೋಟೋ ಟ್ವಿಟರ್‌ನಲ್ಲಿ ಹಾಕಿದ್ದಾನೆ.

 ಗಂಡ, ಮಗುವನ್ನು ಬಿಟ್ಟು ಹೋದ ಹೆಂಡತಿ

ದೆಹಲಿಯ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಮಗುವನ್ನು ತೊರೆದು, ಬೆಂಗಳೂರು ಮೂಲದ ಮಧ್ಯ ವಯಸ್ಕ ವ್ಯಕ್ತಿಯೊಂದಿಗೆ ಓಡಿ ಬಂದಿದ್ದಾಳೆ. ಇದೀಗ ಕಂಗೆಟ್ಟಿರುವ ಪತಿ, ತನ್ನ ಪತ್ನಿಯನ್ನು ಹುಡುಕಿ, ಕರೆತರುವಂತೆ ಬೆಂಗಳೂರು ಪೊಲೀಸರಿಗೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾನೆ.

ಬೆಂಗಳೂರು ಮೂಲದ ವ್ಯಕ್ತಿಯೊಂದಿಗೆ ಪತ್ನಿ ಪರಾರಿ

ದೆಹಲಿ ಮೂಲದ ಅರವಿಂದ್ ಎಂಬ ವ್ಯಕ್ತಿ ಪತ್ನಿ ಓಡಿ ಹೋದ ಬಗ್ಗೆ ಟ್ವೀಟ್​ ಮಾಡಿ, ಅದನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದಾನೆ. ನನ್ನ ಹೆಂಡ್ತಿ ಮತ್ತೊಬ್ಬನ ಜೊತೆ ಇರುತ್ತಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ದೆಹಲಿಯಿಂದ ಬೆಂಗಳೂರಿಗೆ ಬಂದು ಬಿಟ್ಟಿದ್ದಾಳೆ. ಬಲವಂತವಾಗಿ ಇಟ್ಟುಕೊಳ್ಳಲಾಗಿದೆ. ಈಗ ಎಲ್ಲಿದ್ದಾಳೋ ಗೊತ್ತಿಲ್ಲ. ಪತ್ನಿಯನ್ನು ಹುಡುಕಲು ನಿಮ್ಮ ಸಹಾಯಬೇಕೆಂದು ಟ್ವಿಟರ್‌ನಲ್ಲೇ ಆತ ಮನವಿ ಮಾಡಿದ್ದಾನೆ.

ಇದನ್ನೂ ಓದಿ: Wife's Head Cut: ಹೆಂಡತಿ ತಲೆ ಕಡಿದ ಗಂಡ, ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಬಂದ!

 ಟ್ವಿಟರ್‌ನಲ್ಲಿ ಫೋಟೋ ಶೇರ್ ಮಾಡಿದ ನೊಂದ ಪತಿ

ನೊಂದ ಪತಿ ಟ್ವಿಟರ್‌ನಲ್ಲೇ ಫೋಟೋ ಶೇರ್ ಮಾಡಿದ್ದಾನೆ. ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ತಾನು ಇರುವ ಫೋಟೋ ಹಾಕಿದ್ದಾನೆ. ಜೊತೆಗೆ ಆಕೆ ಓಡಿ ಬಂದಿದ್ದಾಳೆ ಎನ್ನಲಾದ ಬೆಂಗಳೂರು ಮೂಲದ ವ್ಯಕ್ತಿಯ ಫೋಟೋವನ್ನೂ ಶೇರ್ ಮಾಡಿದ್ದಾನೆ.

ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ಎಂದ ಬೆಂಗಳೂರು ಪೊಲೀಸರು

ಇನ್ನು ದೆಹಲಿ ಮೂಲದ ವ್ಯಕ್ತಿಯ ಈ ಟ್ವಿಟ್‌ಗೆ ಬೆಂಗಳೂರು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಹತ್ತಿರದ ಪೊಲೀಸ್​ ಠಾಣೆಗೆ ವಿವಿರಗಳ ಸಮೇತ ದೂರು ಸಲ್ಲಿಸಿ. ನಿಮಗೆ ಅವರು ನೆರವು ಮಾಡುತ್ತಾರೆ ಎಂದು ಬೆಂಗಳೂರು ನಗರ ಪೊಲೀಸ್​ ಟ್ವಿಟರ್​ ಖಾತೆಯಿಂದ ರಿಟ್ವೀಟ್ ಮಾಡಲಾಗಿದೆ.

ಆಸ್ತಿಗಾಗಿ ಇಬ್ಬರು ಹೆಂಡತಿಯರ ರೇಸ್!

ಅತ್ತ ತೆಲಂಗಾಣದಲ್ಲಿ ಗಂಡನ ಆಸ್ತಿಗಾಗಿ ಇಬ್ಬರು ಹೆಂಡತಿಯರು ಗಂಡನ ಶವ ಬಿಟ್ಟು, ತಹಶೀಲ್ದಾರ್ ಕಚೇರಿಗೆ ಓಡಿ ಹೋದ ಘಟನೆ ನಡೆದಿತ್ತು.  ಈ ಕಥೆಯ ದುರಂತ ನಾಯಕನ ಹೆಸರು ನರಸಿಂಹಲು. ಇವರು ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಕೋರುಟ್ಲ ತಾಲೂಕಿನ ಐಲಾಪೂರ್​ ಗ್ರಾಮದ ನಿವಾಸಿ. ಇಬ್ಬರಿಗೆ ಇಬ್ಬರು ಹೆಂಡತಿಯರಿದ್ದು, ಮೊದಲ ಹೆಂಡತಿ ಬದುಕಿದ್ದಾಗಲೇ ಭಾರತೀ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದರು.

ಅನಾರೋಗ್ಯದಿಂದ ಮೃತಪಟ್ಟ ನರಸಿಂಹಲು

ನರಸಿಂಹಲು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೊದಲನೇ ಪತ್ನಿ ಹಾಗೂ ಮನೆಯವರು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಈ ವೇಳೆ ವಿಚಾರ ತಿಳಿದ ಅವರ ಎರಡನೇ ಹೆಂಡತಿ ದೌಡಾಯಿಸಿ ಬಂದಿದ್ದಾಳೆ. ಯಾವುದೇ ಕಾರಣಕ್ಕೂ ನನ್ನ ಗಂಡನ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಾಳೆ.

ಆಸ್ತಿಗಾಗಿ ಇಬ್ಬರು ಪತ್ನಿಯರ ಕಿತ್ತಾಟ

ನರಸಿಂಹಲು ಅವರು ತಮ್ಮ ಮೊದಲ ಪತ್ನಿಗೆ ಆಸ್ತಿ ನೀಡಿದ್ದ ವಿಚಾರ ತಿಳಿದಿದ್ದ 2ನೇ ಪತ್ನಿ ಭಾರತಿ, ತನಗೂ ಅದರಲ್ಲಿ ಪಾಲು ಬೇಕೆಂದು ಪಟ್ಟು ಹಿಡಿದಿದ್ದಾಳೆ. ಕೊನೆಗೆ ಹಿರಿಯರೆಲ್ಲ ಮುಂದಾಗಿ ಮಾತುಕತೆ ನಡೆಸಿ, 3 ಎಕರೆ ಭೂಮಿ ಅವಳ ಹೆಸರಿಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ

 ಗಂಡನ ಶವ ಮನೆಯಲ್ಲೇ ಬಿಟ್ಟು ಆಸ್ತಿ ಹಂಚಿಕೆಗೆ ಹೋದ ಪತ್ನಿಯರು

ಬಳಿಕ ಈಗಲೇ ಆಸ್ತಿ ತನ್ನ ಹೆಸರಿಗೆ ಮಾಡಿಸಿಕೊಡುವಂತೆ ಭಾರತಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅನ್ಯದಾರಿ ಕಾಣದೇ ಮೊದಲ ಪತ್ನಿಯು 2ನೇ ಪತ್ನಿ ಭಾರತಿಯನ್ನು ಕರೆದುಕೊಂಡು  ಕತ್ತಲಾಪುರ  ತಹಶೀಲ್ದಾರ್ ಕಚೇರಿಗೆ ತೆರಳಿದ್ದಾಳೆ. ಕೊಟ್ಟ ಮಾತಿನಂತೆ 3 ಎಕರೆ ಭೂಮಿ ಅವಳ ಹೆಸರಿಗೆ ವರ್ಗಾಯಿಸಿದ್ದಾಳೆ. ಆಸ್ತಿ ವರ್ಗಾವಣೆ ಆದ ಬಳಿಕ ಇಬ್ಬರು ಪತ್ನಿಯರು ಮರಳಿ ಮನೆಗೆ ಬಂದಿದ್ದಾರೆ. ಇಬ್ಬರೂ ಅಳುತ್ತಾ ಗಂಡನ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
Published by:Annappa Achari
First published: