ಈ ವ್ಯಕ್ತಿ ಸೈಕಲ್​ ಬಿಟ್ಟು ಯಾವ ವಾಹನದಲ್ಲೂ ಪಯಣಿಸಿಲ್ಲವಂತೆ..!

ಈ ವಯಸ್ಸಿನಲ್ಲಿಯೂ ಸೈಕಲ್​​ ತುಳಿಯೋದನ್ನು ಕಂಡು ಗ್ರಾಮದ ಯುವಕರು ಈ ವ್ಯಕ್ತಿಗೆ ಫಿಧಾ ಆಗಿದ್ದಾರೆ. ಇವರ ಈ ಪ್ರೇರಣೆಯಿಂದ ತಾವು ಸೈಕಲ್ ತುಳಿಯುವ ಪ್ರಯತ್ನ ಮಾಡ್ತಿದ್ದಾರಂತೆ. ಇವರ ಈ ಸೈಕಲ್ ಹವ್ಯಾಸವೇ ಈ ವ್ಯಕ್ತಿಗೆ 'ಸೈಕಲ್ ಬೋರೇಗೌಡ' ಎಂತಲೇ ಸುತ್ತಮುತ್ತಲ ಗ್ರಾಮದಲ್ಲಿ ಪ್ರಸಿದ್ದಿ ಪಡೆದಿದ್ದಾರೆ‌.

Latha CG | news18
Updated:January 27, 2019, 2:40 PM IST
ಈ ವ್ಯಕ್ತಿ ಸೈಕಲ್​ ಬಿಟ್ಟು ಯಾವ ವಾಹನದಲ್ಲೂ ಪಯಣಿಸಿಲ್ಲವಂತೆ..!
ಸೈಕಲ್​ ಬೋರೇಗೌಡ
Latha CG | news18
Updated: January 27, 2019, 2:40 PM IST
-ರಾಘವೇಂದ್ರ ಗಂಜಾಮ್

ಮಂಡ್ಯ,(ಜ.27): ನಾವೆಲ್ಲಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಯಣಿಸಬೇಕು ಅಂದರೆ ಸಾಮಾನ್ಯವಾಗಿ ಬಸ್ಸು, ಕಾರು, ಬೈಕ್​, ರೈಲು ಹೀಗೆ ಯಾವುದಾದರೊಂದು ವಾಹನದಲ್ಲಿ ಹೋಗುತ್ತೇವೆ. ಇಂದಿನ ಆಧುನಿಕ ಯುಗದಲ್ಲಿ ಒಂದೆಜ್ಜೆ ಕೂಡ ನಡೆಯದೆ ಸೋಮಾರಿಗಳಾಗಿರುವ ನಾವು ಯಾಂತ್ರಿಕ ವಾಹನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಇನ್ನೂ ಸೈಕಲ್​ ಸವಾರಿಯಂತೂ ತೀರಾ ವಿರಳ. ಅದು ಹವ್ಯಾಸವಾಗಿಬಿಟ್ಟಿದೆ ಅಷ್ಟೇ. ಆದರೆ ಒಬ್ಬ ವ್ಯಕ್ತಿಗೆ ಸೈಕಲ್​ ಸವಾರಿ ಹವ್ಯಾಸ ಅಲ್ಲ. ಬದಲಾಗಿ ಜೀವನದ ಒಂದು ಭಾಗವಾಗಿದೆ. ಎಲ್ಲಿಗೆ ಹೋಗಬೇಕಾದರೂ ಸೈಕಲ್​ನಲ್ಲಿ ಮಾತ್ರವೇ ಹೋಗುತ್ತಾರೆ. ಈವರೆಗೆ ಬೇರಾವುದೇ ವಾಹನ ಏರಿಲ್ಲ ಅಂದ್ರೆ ಅಚ್ಚರಿಯೇ ಹೌದು.

ಮಂಡ್ಯ ತಾಲೂಕಿನ ಮಾರಗೌಡನಹಳ್ಳಿ ನಿವಾಸಿ ಬೋರೇಗೌಡ. ತಮ್ಮ ಸೈಕಲ್​ ಸವಾರಿಯಿಂದ 'ಸೈಕಲ್​  ಬೋರೇಗೌಡ; ಅಂತಲೇ ಖ್ಯಾತಿ ಪಡೆದಿದ್ದಾರೆ.  ಇವರಿಗೆ 50 ವರ್ಷ ವಯಸ್ಸಾಗಿದ್ದರೂ ಇನ್ನೂ ದಣಿವರಿಯದೇ ಸೈಕಲ್​ ತುಳಿಯುತ್ತಲೇ ಇದ್ದಾರೆ. ಅಂದ ಹಾಗೆ ಇವರು ಇದುವರೆಗೂ ಯಾವುದೇ ಯಾಂತ್ರಿಕ ವಾಹನದಲ್ಲಿ ಪಯಣಿಸಿಲ್ಲ ಎನ್ನುವುದು ವಿಶೇಷ. ಇವರು ಎಲ್ಲೇ ಹೋದರೂ ಪಯಣಿಸುವುದು ತನ್ನ ಸೈಕಲ್​ನಲ್ಲಿ ಮಾತ್ರ. ಅದು ಹತ್ತಿರವಿರಲಿ, ದೂರವಿರಲಿ ಸೈಕಲ್​ ಮೂಲಕವೇ ಹೋಗಿ ಬರುತ್ತಾರೆ. ಒಮ್ಮೆ ಸೈಕಲ್​ ಹತ್ತಿದರೆ ಮುಗಿಯಿತು, ಸೇರಬೇಕಾದ ಸ್ಥಳ ಸಿಗುವವರೆಗೂ ಆಯಾಸವಿಲ್ಲದೇ ಸೈಕಲ್​ ತುಳಿಯುತ್ತಲೇ ಇರುತ್ತಾರೆ.

ಇದನ್ನೂ ಓದಿ: ಹೆರಿಗೆಗಾಗಿ ಸೈಕಲ್​ ತುಳಿದು ಆಸ್ಪತ್ರೆಗೆ ಹೋದ ನ್ಯೂಜಿಲೆಂಡ್​ನ ಸಚಿವೆ..!

ಚಿಕ್ಕಂದಿನಲ್ಲಿ ಒಮ್ಮೆ ತನ್ನ ಪೋಷಕರ ಜೊತೆ ಊರಿಗೆ ಬರುವಾಗ ವಾಹನಗಳು ಸಿಗದೆ ಇದಿದ್ರಿಂದ, ಇವರು ಅಂದಿನಿಂದಲೂ ಕೂಡ ಇದುವರೆಗೂ ಯಾವುದೇ ವಾಹನವನ್ನು ಹತ್ತಿಲ್ಲವಂತೆ. ರೈತನಾಗಿರುವ ಇವರು ಸದ್ಯ ಮರದ ವ್ಯಾಪಾರಿಯಾಗಿದ್ದು ಎಲ್ಲೆ ಹೋಗಿ ಬರಬೇಕೆಂದರೂ, ಸೈಕಲ್ ಮೂಲಕ ಹೋಗಿ ಕೆಲಸ ಮುಗಿಸಿ ಬರ್ತಾರಂತೆ. ಬೆಂಗಳೂರು ಮೈಸೂರು ಸೇರಿದಂತೆ ಎಲ್ಲಾ ಕಡೆ ಇವರು ಸೈಕಲ್ ಮೂಲಕ ತೆರಳಿದ್ದನ್ನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ಈ ವಯಸ್ಸಿನಲ್ಲಿಯೂ ಸೈಕಲ್​​ ತುಳಿಯೋದನ್ನು ಕಂಡು ಗ್ರಾಮದ ಯುವಕರು ಈ ವ್ಯಕ್ತಿಗೆ ಫಿಧಾ ಆಗಿದ್ದಾರೆ. ಇವರ ಈ ಪ್ರೇರಣೆಯಿಂದ ತಾವು ಸೈಕಲ್ ತುಳಿಯುವ ಪ್ರಯತ್ನ ಮಾಡ್ತಿದ್ದಾರಂತೆ. ಇವರ ಈ ಸೈಕಲ್ ಹವ್ಯಾಸವೇ ಈ ವ್ಯಕ್ತಿಗೆ 'ಸೈಕಲ್ ಬೋರೇಗೌಡ' ಎಂತಲೇ ಸುತ್ತಮುತ್ತಲ ಗ್ರಾಮದಲ್ಲಿ ಪ್ರಸಿದ್ದಿ ಪಡೆದಿದ್ದಾರೆ‌.

ಒಟ್ಟಾರೆ ಆಧುನಿಕ ಯುಗದಲ್ಲೂ ಯಾವುದೇ ವಾಹನದಲ್ಲಿ ಪಯಣಿಸದ ಸೈಕಲ್ ಬೋರೇಗೌಡರ ಈ ಹವ್ಯಾಸ ನಿಜಕ್ಕೂ‌ಅಚ್ಚರಿ ಮೂಡಿಸಿದೆ. ಸೈಕಲ್ ತುಳಿಯುತ್ತಲೇ ಆರೋಗ್ಯದ ಗುಟ್ಟು ಕಾಪಾಡಿಕೊಂಡು ಬರುತ್ತಿರುವ ಇವರ ಈ ಸಾಧನೆ ನಿಜಕ್ಕೂ ಇತರರಿಗೆ ಮಾದರಿಯೇ‌ ಸರಿ.
Loading...

First published:January 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ