ವೈರಲ್ ವಿಡಿಯೋ: ದಾಳಿ ಮಾಡಿದ ಚಿರತೆಯನ್ನು ಬರಿಗೈಯಲ್ಲಿ ಕೊಂದು ಹೆಂಡತಿ-ಮಗನ ಪ್ರಾಣ ಉಳಿಸಿದ..!

ಅತ್ಯಂತ ಧೈರ್ಯದಿಂದ ಸುಮಾರು ಹೊತ್ತು ಕಾದಾಡಿದ ರಾಜಗೋಪಾಲ್ ಚಿರತೆಯ ಕುತ್ತಿಗೆ ಹಿಡಿದು ಮೊಣಕೈಯಿಂದ ಅದರ ತಲೆಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಆದರೆ ಚಿರತೆ ತನ್ನ ಪಂಜುಗಳಿಂದ ರಾಜಗೋಪಾಲ್ ಅವರ ದೇಹದ ಮೇಲೆಲ್ಲಾ ಪರಚಿ ಗಾಯಗೊಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಾಸನ(ಫೆ.24): ಸಿನಿಮೀಯ ಮಾದರಿಯಲ್ಲಿ ವ್ಯಕ್ತಿಯೊಬ್ಬ ಚಿರತೆಯೊಂದಿಗೆ ಹೋರಾಡಿ, ಅದನ್ನು ಕೊಂದು ತನ್ನ ಕುಟುಂಬವನ್ನು ಉಳಿಸಿರುವ ಘಟನೆ ನಡೆದಿದೆ. ಸದ್ಯ ಚಿರತೆ ಕೊಂದಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.  ಹಾಸನ ಜಿಲ್ಲೆಯ ಅರಸಿಕೇರೆ ತಾಲೂಕಿನ ಬೆಂಡೆಕೆರೆ ತಾಂಡ್ಯ ಬಳಿ ಈ ಘಟನೆ ನಡೆದಿದೆ.

  ರಾಜಗೋಪಾಲ್ ನಾಯಕ್ ಎಂಬುವವರು ಚಿರತೆಯನ್ನು ಕೊಂದು ಪ್ರಾಣ ಉಳಿಸಿಕೊಂಡವರು. ಪತ್ನಿ ಚಂದ್ರಮ್ಮ ಹಾಗೂ ಪುತ್ರ ಕಿರಣ್ ಜೊತೆಗೆ ರಾಜಗೋಪಾಲ್ ಅವರು ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿತ್ತೆನ್ನಲಾದ ಚಿರತೆ ಏಕಾಏಕಿ ಮೇಲೆರಗಿ ದಾಳಿ ನಡೆಸಿದೆ.

  ಮೊದಲು ಕಿರಣ್ ಮೇಲೆ ದಾಳಿ ಮಾಡಿದ ಚಿರತೆ ಆತನ ಕಾಲಿಗೆ ಕಚ್ಚಿದೆ. ಬಳಿಕ ಚಂದ್ರಮ್ಮನ ಮೇಲೆ ಆಕ್ರಮಣ ಮಾಡಿದೆ. ಇದರಿಂದ ಹೆದರಿದ ಅವರು ಜೋರಾಗಿ ಕಿರುಚುತ್ತಿದ್ದರು. ಈ ವೇಳೆ ಹರಸಾಹಸ ಮಾಡಿದ ರಾಜಗೋಪಾಲ್ ತಮ್ಮ ಪತ್ನಿ ಮತ್ತು ಪುತ್ರನನ್ನು ಉಳಿಸಿಕೊಳ್ಳಲು ಚಿರತೆಯೊಂದಿಗೆ ಕಾದಾಟಕ್ಕಿಳಿದಿದ್ದಾರೆ.

  9 ಕಾಲೇಜುಗಳ ಸ್ವಾಯತ್ತತೆ ಮುಂದುವರಿಕೆಗೆ ಮೈಸೂರು ವಿವಿ ಸಿಂಡಿಕೇಟ್ ಸಭೆ ಅನುಮೋದನೆ

  ಅತ್ಯಂತ ಧೈರ್ಯದಿಂದ ಸುಮಾರು ಹೊತ್ತು ಕಾದಾಡಿದ ರಾಜಗೋಪಾಲ್ ಚಿರತೆಯ ಕುತ್ತಿಗೆ ಹಿಡಿದು ಮೊಣಕೈಯಿಂದ ಅದರ ತಲೆಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಆದರೆ ಚಿರತೆ ತನ್ನ ಪಂಜುಗಳಿಂದ ರಾಜಗೋಪಾಲ್ ಅವರ ದೇಹದ ಮೇಲೆಲ್ಲಾ ಪರಚಿ ಗಾಯಗೊಳಿಸಿದೆ. ರಕ್ತ ಸೋರುತ್ತಿರುವುದನ್ನೂ ಲೆಕ್ಕಿಸದೆ ಚಿರತೆ ಜೊತೆ ಹಲವು ನಿಮಿಷಗಳ ಕಾಲ ಅವರು ಫೈಟ್ ಮಾಡಿದ್ದಾರೆ.

  ಚಿರತೆ ಸಾಕಷ್ಟು ಬಾರಿ ತನ್ನ ಪಂಜಿನಿಂದ ರಾಜಗೋಪಾಲ್ ಅವರಿಗೆ ಪರಚಿ ಗಾಯಗೊಳಿಸಿದೆ. ಚಿರತೆಯ ಕತ್ತನ್ನು ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅದು ಮತ್ತೆ ಮೇಲೇಳಲು ಸಾಧ್ಯವಾಗಿಲ್ಲ. ಚಿರತೆ ಸಾಯುವವರೆಗೂ ರಾಜಗೋಪಾಲ್ ಅವರು ತಮ್ಮ ಮೊಣಕೈನಿಂದ ಗುದ್ದಿದ್ದಾರೆ. ಸಾಕಷ್ಟು ಸಮಯದ ಹೋರಾಟದ ಬಳಿಕ ಚಿರತೆ ಪ್ರಾಣಬಿಟ್ಟಿದೆ. ಜೀವ ಉಳಿಸಿಕೊಳ್ಳಲು ಚಿರತೆ ಕೊಂದಿರುವುದಾಗಿ ರಾಜಗೋಪಾಲ್ ಹೇಳಿದ್ದಾರೆ.

  ಚಿರತೆ ಕೊಂದು ತಮ್ಮ ಜೀವ ಹಾಗೂ ಪತ್ನಿ ಹಾಗೂ ಪುತ್ರನನ್ನು ಉಳಿಸಿದ ರಾಜಗೋಪಾಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿರತೆ ತನ್ನ ಪಂಜಿನಿಂದ ರಾಜಗೋಪಾಲ್ ಮೈಮೇಲೆ ಹಾಗೂ ಮುಖದ ಮೇಲೆ ಪರಚಿದ್ದರಿಂದ ರಕ್ತ ಬರುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
  Published by:Latha CG
  First published: