HOME » NEWS » State » A MAN FELL IN TO LIFT WHOLE VIDEO CAPTURED IN CCTV AT DODDABALLAPUR HOTEL LG

ಲಿಫ್ಟ್ ಗುಂಡಿ​​ ಒಳಗೆ ಬಿದ್ದು ವೃದ್ಧ ಸಾವನ್ನಪ್ಪಿದ ಘಟನೆ: ಮೈಜುಂ ಎನಿಸುವ ವಿಡಿಯೋ ನ್ಯೂಸ್ 18ಗೆ ಲಭ್ಯ

ಲಿಫ್ಟ್  ಬಳಿ ತಡೆಗೋಡೆ ಇಲ್ಲದೆ ಇರುವುದರಿಂದ  ವ್ಯಕ್ತಿ  ಲಿಫ್ಟ್  ಇದೆ ಎಂಬ ನಂಬಿಕೆಯಲ್ಲಿ ಲಿಫ್ಟ್  ಒಳಗೆ ಬಂದು  ಅಲ್ಲಿಂದ  ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

news18-kannada
Updated:December 12, 2020, 3:53 PM IST
ಲಿಫ್ಟ್ ಗುಂಡಿ​​ ಒಳಗೆ ಬಿದ್ದು ವೃದ್ಧ ಸಾವನ್ನಪ್ಪಿದ ಘಟನೆ: ಮೈಜುಂ ಎನಿಸುವ ವಿಡಿಯೋ ನ್ಯೂಸ್ 18ಗೆ ಲಭ್ಯ
ವ್ಯಕ್ತಿಯು ಲಿಫ್ಟ್​ ಒಳಗೆ ಹೋಗುತ್ತಿರುವ ದೃಶ್ಯ
  • Share this:
ದೊಡ್ಡಬಳ್ಳಾಪುರ(ಡಿ.12):  ಕೆಲವು ದಿನಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಕಾಮಗಾರಿ ಹಂತದಲ್ಲಿದ್ದ  ಲಿಫ್ಟ್ ನೊಳಗೆ  ವೃದ್ದನೊಬ್ಬ  ಬಿದ್ದು ಸಾವನ್ನಪ್ಪಿದ್ದ. ಆ ವೃದ್ಧ ಲಿಫ್ಟ್​ನೊಳಗೆ ಬಿದ್ದಿರುವ ಭಯಾನಕ ದೃಶ್ಯ  ಸಿಸಿಟಿವೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ನ್ಯೂಸ್​18ಗೆ ಲಭ್ಯವಾಗಿದೆ. ಹೋಟೆಲ್  ಮಾಲೀಕರ ನಿರ್ಲಕ್ಷ್ಯತೆಯಿಂದ  ವೃದ್ಧ  ತನ್ನ  ಮಗನ ನಿಶ್ಚಿತಾರ್ಥ  ದಿನವೇ ಲಿಫ್ಟ್  ಒಳಗೆ  ಬಿದ್ದು  ಸಾವನ್ನಪ್ಪಿದ್ದ. ಮೈಜುಂ‌ ಎನಿಸುವ ಲಿಫ್ಟ್ ಗುಂಡಿಯಲ್ಲಿ ವೃದ್ದ ಬೀಳುವ ದೃಶ್ಯ ನ್ಯೂಸ್18 ಗೆ ಲಭ್ಯವಾಗಿದೆ. ದೊಡ್ಡಬಳ್ಳಾಪುರ  ತಾಲೂಕಿನ ಗ್ರಾಮಾಂತರ  ಪೊಲೀಸ್  ಠಾಣೆಯ ಪಕ್ಕದ ಸಮೃದ್ಧಿ  ಗ್ರ್ಯಾಂಡ್ ಹೋಟೆಲ್​​ನ ಪಾರ್ಟಿ ಹಾಲ್ ನಲ್ಲಿ ಈ ಘಟನೆ ನಡೆದಿತ್ತು.  ಘಟನೆಯಲ್ಲಿ ವೃದ್ಧ ಮಂಜುನಾಥ್  (65)  ಮೃತನಾಗಿದ್ದ. ಮೃತ  ವ್ಯಕ್ತಿ   ಬೆಂಗಳೂರು  ನಗರ ಜಿಲ್ಲೆ  ಬೆಂಗಳೂರು  ದಕ್ಷಿಣ  ತಾಲೂಕಿನ  ಎಲೇಕೊಡಿಗೇನಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.

ಘಟನೆ ವಿವರ :

ಡಿಸೆಂಬರ್  6ರಂದು  ಮೃತ ವ್ಯಕ್ತಿ  ಮಂಜುನಾಥ್ ರವರ ಮಗ ದರ್ಶನ್ ರವರ  ನಿಶ್ಚಿತಾರ್ಥವನ್ನು  ದೊಡ್ಡಬಳ್ಳಾಪುರ  ತಾಲೂಕಿನ  ಕಂಟನಕುಂಟೆಯ  ಶಿಲ್ಪಾ ಎಂಬುವರ ಜೊತೆ ನಿಶ್ಚಯ ಮಾಡಲಾಗಿತ್ತು  ಸಮೃದ್ಧಿ  ಗ್ರ್ಯಾಂಡ್  ಹೊಟೇಲ್ ನ ಮೂರನೇ ಮಹಡಿಯಲ್ಲಿ  ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧ್ಯಾಹ್ನ  12:09 ಸಮಯದಲ್ಲಿ   ಗಂಟೆಯ ಸಮಯದಲ್ಲಿ  ಮಂಜುನಾಥ್  ಲಿಫ್ಟ್ ಬಳಿ ಬಂದಿದ್ದಾರೆ. ಲಿಫ್ಟ್  ಕಾರ್ಯ ನಿರ್ವಹಿಸುತ್ತಿದೆ ಎಂಬ ನಂಬಿಕೆಯಲ್ಲಿ ಲಿಫ್ಟ್  ಒಳಗೆ ಹೋಗಿದ್ದಾರೆ.

ಮುಷ್ಕರ ನಿಲ್ಲಿಸುವಂತೆ ಬಿಎಂಟಿಸಿ ಎಂಡಿ ಶಿಖಾ ಮನವಿ; ಸಾರಿಗೆ ನೌಕರರ ಜೊತೆ ಮಾತುಕತೆಗೆ ಸವದಿಗೆ ಸಿಎಂ ಸೂಚನೆ

ಆದರೆ ಲಿಫ್ಟ್  ಅನ್ನು  ಅಳವಡಿಸುವ ಕಾಮಗಾರಿಯನ್ನ ಹೊಟೇಲ್  ಮಾಲೀಕರು ಮಾಡುತ್ತಿದ್ದರು. ಇದನ್ನು ಅರಿಯದ ವೃದ್ಧ ಮಂಜುನಾಥ್ ಲಿಫ್ಟ್  ಒಳಗೆ  ಹೋಗಿ  ಲಿಫ್ಟ್  ಗುಂಡಿಗೆ  ಬಿದ್ದು ಗಂಭೀರವಾಗಿ  ಗಾಯಗೊಂಡಿದ್ದರು. ಲಿಫ್ಟ್  ಒಳಗೆ ಹೋಗಿ ಬೀಳುವ  ದೃಶ್ಯ ಈಗ  ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಾಳು ಮಂಜುನಾಥ್​ ಅವರನ್ನು ಬೆಂಗಳೂರಿನ  ಖಾಸಗಿ  ಆಸ್ಪತ್ರೆಗೆ  ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ  ಫಲಕಾರಿಯಾಗದೆ ಮಂಜುನಾಥ್ ಸಾವನ್ನಪ್ಪಿದ್ದರು. ಸಮೃದ್ಧಿ  ಗ್ರ್ಯಾಂಡ್  ಹೊಟೇಲ್  ಮಾಲೀಕರ ನಿರ್ಲಕ್ಷ್ಯತೆಯೇ  ಮಂಜುನಾಥ್  ಸಾವಿಗೆ ಕಾರಣವಾಗಿದೆ. ಲಿಫ್ಟ್  ಕಾಮಗಾರಿಯ ವೇಳೆ ಲಿಫ್ಟ್  ಬಾಗಿಲ ಮುಂದೆ ತಡೆಗೋಡೆ ಇಡಬೇಕಿತ್ತು.
ಆದರೆ ಲಿಫ್ಟ್  ಬಳಿ ತಡೆಗೋಡೆ ಇಲ್ಲದೆ ಇರುವುದರಿಂದ  ವ್ಯಕ್ತಿ  ಲಿಫ್ಟ್  ಇದೆ ಎಂಬ ನಂಬಿಕೆಯಲ್ಲಿ ಲಿಫ್ಟ್  ಒಳಗೆ ಬಂದು  ಅಲ್ಲಿಂದ  ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by: Latha CG
First published: December 12, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories