HOME » NEWS » State » A MAN FALLS IN TO 15 FEET DEPTH HOLE AT NEAR UDUPI AND SAVED AFTER 6 HOURS RESCUE OPERATION LG

15 ಅಡಿ ಆಳಕ್ಕೆ ಸಿಲುಕಿ 6 ಗಂಟೆ ಸಾವಿನ ಮನೆ ಕದ ತಟ್ಟಿ ಬದುಕಿ ಬಂದ ಯುವಕ

ಈ ಘಟನೆ ಸಮುದ್ರ ತೀರ ಹಾಗೂ ಮರಳು ಮಿಶ್ರಿತ ಗದ್ದೆಯಲ್ಲಿ ಸಂಭವಿಸಿದ್ದರಿಂದ ಕಾರ್ಯಾಚರಣೆ ಸ್ವಲ್ಪ ನಿಧಾನಗತಿಯಲ್ಲೇ ಸಾಗಿತು.  ಆರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ರೋಹಿತ್​ ಸಾವಿನ ಹೊಂಡದಿಂದ ಹೊರಬಂದರು.

news18-kannada
Updated:February 16, 2020, 5:12 PM IST
15 ಅಡಿ ಆಳಕ್ಕೆ ಸಿಲುಕಿ 6 ಗಂಟೆ ಸಾವಿನ ಮನೆ ಕದ ತಟ್ಟಿ ಬದುಕಿ ಬಂದ ಯುವಕ
ರಕ್ಷಣಾ ಕಾರ್ಯಾಚರಣೆ
  • Share this:
ಉಡುಪಿ(ಫೆ.16): ಬೋರ್​ವೆಲ್​ ಕೊರೆಯುವ ವೇಳೆ ಮಣ್ಣು ಕುಸಿದು ಆಕಸ್ಮಿಕವಾಗಿ 15 ಅಡಿ ಆಳದಲ್ಲಿ ಸಿಲುಕಿದ್ದ ಯುವಕನನ್ನು ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಉಡುಪಿ ಜಿಲ್ಲೆ ಬೈಂದೂರಿನ ಮರವಂತೆಯಲ್ಲಿ ನಡೆದಿದೆ.

ರೋಹಿತ್​ ಖಾರ್ವಿ ಬೋರ್​ವೆಲ್​ನೊಳಗೆ ಬಿದ್ದಿದ್ದ ಯುವಕ. ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಬೋರ್​ವೆಲ್​ ಕೊರೆಯುವ ವೇಳೆ ಮಣ್ಣು ಕುಸಿದ ಪರಿಣಾಮ ರೋಹಿತ್​ 15 ಅಡಿ ಆಳ ಭೂಮಿಯೊಳಗೆ ಹೋಗಿದ್ದ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ವೈದ್ಯರ ತಂಡ ಆಗಮಿಸಿತ್ತು.

ಘಟನೆ ನಡೆದ ಸ್ಥಳ ಸಮುದ್ರದ ದಡ


ಕೊಳವೆ ಬಾವಿ ಪೈಪ್ ಸುತ್ತಲೂ ಭೂಮಿ ಕುಸಿದಿತ್ತು. ಯುವಕನನ್ನು ಮೇಲೆತ್ತಲು ಹರಸಾಹಸವನ್ನೇ ನಡೆಸಲಾಯಿತು. ಮೊದಲಿಗೆ ಮುಂಜಾಗ್ರತಾ ಕ್ರಮವಾಗಿ ಮಣ್ಣು ಕುಸಿಯದಂತೆ ಹೊಂಡದ ಸುತ್ತಲೂ ಡ್ರಮ್ ಅಳವಡಿಕೆ ಮಾಡಲಾಯಿತು. ಬಳಿಕ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ವಾರಣಾಸಿಯಲ್ಲಿ 63 ಅಡಿ ಎತ್ತರದ ದೀನ ದಯಾಳ್​ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ



ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಸ್ಥಳೀಯರು ಸಹ ರೋಹಿತ್​ನನ್ನು ರಕ್ಷಿಸಲು ಹರಸಾಹಸಪಟ್ಟರು. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಭೇಟಿ ನೀಡಿದ್ದರು. ಈ ಘಟನೆ ಸಮುದ್ರ ತೀರ ಹಾಗೂ ಮರಳು ಮಿಶ್ರಿತ ಗದ್ದೆಯಲ್ಲಿ ಸಂಭವಿಸಿದ್ದರಿಂದ ಕಾರ್ಯಾಚರಣೆ ಸ್ವಲ್ಪ ನಿಧಾನಗತಿಯಲ್ಲೇ ಸಾಗಿತು.  ಆರು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ರೋಹಿತ್​ ಸಾವಿನ ಹೊಂಡದಿಂದ ಹೊರಬಂದರು.ಅಗ್ನಿಶಾಮಕ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ, ಯುವಕನನ್ನು ಸುರಕ್ಷಿತವಾಗಿ ಮೇಲೆತ್ತಿದ್ದರು. ಬೆಳಗ್ಗೆ 9 ಗಂಟೆಗೆ ರೋಹಿತ್ ಭೂಮಿಯೊಳಗೆ ಕುಸಿದಿದ್ದಕ್ಕೆ ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆ ಪೂರ್ಣಗೊಂಡಿತು. ಬಳಿಕ ರೋಹಿತ್​ನನ್ನು ಆ್ಯಂಬುಲೆನ್ಸ್​ ಮೂಲಕ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ತೀವ್ರ ನಿಗಾ ಘಟಕದಲ್ಲಿರಿಸಿ ರೋಹಿತ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ತಜ್ಞ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಮರಳಿನಲ್ಲಿ ಸಿಲುಕಿದ್ದ ಯುವಕ


ಬೆಂಗಳೂರಲ್ಲಿ ಬಸವಧರ್ಮ ಅಲೆ; ಅಸಂಖ್ಯ ಪ್ರಮಥರ ಗಣಮೇಳದಲ್ಲಿ ಹೊಸ ದಾಖಲೆ

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ತಾ 25 ಸಾವಿರ ನಗದು ಬಹುಮಾನ ನೀಡಿ ಸನ್ಮಾನ ಮಾಡುವುದಾಗಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ. ರೋಹಿತ್​​​ಗೆ ಗಾಯವಾಗದಂತೆ ರಕ್ಷಿಸಿದ್ದಾರೆ. ಅಗ್ನಿಶಾಮಕ, ಜಿಲ್ಲಾಡಳಿತದ ಕಾರ್ಯ ಯಶಸ್ವಿಯಾಗಿ ನಡೆದಿದೆ. ಸ್ಥಳೀಯರು ಹಾಗೂ ಮಾಧ್ಯಮಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
Youtube Video
First published: February 16, 2020, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories