ಬೈಕ್​ಗೆ ಸ್ಪರ್ಶಿಸಿದ ವಿದ್ಯುತ್ ತಂತಿ; ಸ್ಥಳದಲ್ಲೇ ಸವಾರ ಸಜೀವ ದಹನ

ಮಳೆ-ಗಾಳಿಗೆ ಜಿಲ್ಲೆಯಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು, ತಂತಿಗಳು ಮುರಿಯುವುದು‌ ಸಹಜವಾಗಿದ್ದು,ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

news18-kannada
Updated:August 11, 2020, 10:32 AM IST
ಬೈಕ್​ಗೆ ಸ್ಪರ್ಶಿಸಿದ ವಿದ್ಯುತ್ ತಂತಿ; ಸ್ಥಳದಲ್ಲೇ ಸವಾರ ಸಜೀವ ದಹನ
ಪ್ರಾತಿನಿಧಿಕ ಚಿತ್ರ
  • Share this:
ದಕ್ಷಿಣ ಕನ್ನಡ(ಆ.11): ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸವಾರನೊಬ್ಬ ಸಜೀವ ದಹನಗೊಂಡಿರುವ ಘಟನೆ ದಕ್ಷಿಣಕನ್ನಡ ಕಡಬ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. 

ಸಜೀವವಾಗಿ ದಹನಗೊಂಡ ಬೈಕ್ ಸವಾರ ಸುಳ್ಯ  ತಾಲೂಕಿನ ಮಂಡೆಕೋಲು ನಿವಾಸಿ ಎಂದು ಗುರುತಿಸಲಾಗಿದೆ. ಈತ ‌ ಬಳ್ಪದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಇಂದು ಮುಂಜಾನೆ ಎದ್ದು ಮನೆಯ ಕಡೆ ಬೈಕ್ ಮೂಲಕ ತೆರಳಿದ್ದ ಎನ್ನಲಾಗಿದೆ.

ನಿಂತಿಕಲ್ಲು ಎಂಬಲ್ಲಿ ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಬೈಕ್ ಗೆ ಸ್ಪರ್ಶಿಸಿದ ಹಿನ್ನಲೆಯಲ್ಲಿ ಬೈಕ್ ಗೆ  ಬೆಂಕಿ ತಗುಲಿದೆ. ಇದರಿಂದಾಗಿ ಯುವಕ ಬೆಂಕಿಗೆ ಆಹುತಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Shri Krishna Janmashtami 2020: ಬೆಂಗಳೂರಿನ ಇಸ್ಕಾನ್​ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

ಮಳೆ-ಗಾಳಿಗೆ ಜಿಲ್ಲೆಯಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು, ತಂತಿಗಳು ಮುರಿಯುವುದು‌ ಸಹಜವಾಗಿದ್ದು, ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ರಸ್ತೆ ಇನ್ನಿತರ ಕಾಮಗಾರಿಗಾಗಿ ರಸ್ತೆ‌ ಬದಿಯಲ್ಲಿರುವ ಮರಗಳ ಬುಡದಿಂದಲೇ ಮಣ್ಣು ಕೊರೆದು‌ ಹಾಕುವ ಕಾರಣಕ್ಕಾಗಿ ಈ ಮರಗಳು ಮಳೆಗಾಲದ ಸಂದರ್ಭದಲ್ಲಿ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಅಲ್ಲದೆ ಮೆಸ್ಕಾಂ ಇಲಾಖೆಯು ಇಂಥಹ ಮರಗಳ ಮಧ್ಯದಿಂದಲೇ ವಿದ್ಯುತ್ ತಂತಿಗಳನ್ನು ಜೋಡಿಸುವ ಕೆಲಸವನ್ನೂ ಮಾಡುತ್ತಿವೆ. ಇದರಿಂದಾಗಿ ಇಂಥ ಘಟನೆಗಳು ನಡೆಯುತ್ತಿದೆ ಎನ್ನುವ ಆರೋಪಗಳೂ ಇವೆ.
ಬೈಕ್ ನಲ್ಲಿ ಸಜೀವವಾಗಿ ಮೃತಪಟ್ಟ ಯುವಕನ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನಗಳು ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by: Latha CG
First published: August 11, 2020, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading