Girl Murder: 11ರ ಬಾಲಕಿ ಪಾಲಿಗೆ ಯಮನಾದ 50ರ ಅಂಕಲ್! ಆಕೆಯನ್ನು ಕೊಂದು, ತಾನು ಸೂಸೈಡ್‌ ಮಾಡಿಕೊಂಡಿದ್ದೇಕೆ ಈ ಪಾಪಿ?

ಬಾಲಕಿಯ ಹೆಸರು ಖುಷಿ. ಹೆಸರಿನಂತೆ ಇಡೀ ಅಪಾರ್ಟ್​ಮೆಂಟ್​ನಲ್ಲಿ ಖುಷಿಯಿಂದ ಓಡಾಡಿಕೊಂಡಿದ್ದಳು. ಆದರೆ ಆಕೆಯ ಮೇಲೆ ಅದೇ ಅಪಾರ್ಟ್​ಮೆಂಟ್​ನ ಕಿರಾತಕನ ಕಣ್ಣು ಬಿದ್ದಿತ್ತು. ಇಂದು ಮೊಮ್ಮಗಳಷ್ಟು ಪ್ರಾಯದ ಬಾಲಕಿಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ನೇಣಿಗೆ ಶರಣಾಗಿದ್ದಾನೆ.

ಬಾಲಕಿಯ ಕೊಂದ ನಂದಕಿಶೋರ್

ಬಾಲಕಿಯ ಕೊಂದ ನಂದಕಿಶೋರ್

  • Share this:
ಆ ಪುಟ್ಟ ಬಾಲಕಿ (Girl) ಶಾಲೆಗೆ (School) ಹೋಗುತ್ತಾ ಆಟ ಪಾಠ ಅಂತಾ ಆಡಿಕೊಂಡಿದ್ದಳು. ತಾನಿದ್ದ ಅಪಾರ್ಟ್​ಮೆಂಟ್​ನಲ್ಲಿ (Apartment) ತುಂಟಿ ಎಂದು ಹೆಸರು ಮಾಡಿಕೊಂಡು ಚೆನ್ನಾಗಿ ಖುಷಿಯಾಗಿ ಇದ್ದಳು. ಆ ಬಾಲಕಿಗೆ 11 ವರ್ಷ. ಇನ್ನು ಅದೇ ಕ್ವಾಟ್ರಸ್‌ನಲ್ಲಿ ಒಬ್ಬ ಆಗಂತುಕನಿದ್ದ (Criminal) . ಆತನಿಗೆ 50 ವರ್ಷ. ಹೀಗಿದ್ದರೂ ಮೊಮ್ಮಗಳಂತ ಬಾಲಕಿಯ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದ. ಅದಕ್ಕೆ ಬಾಲಕಿ ವಿರೋಧಿಸಿ ತನ್ನ ಪೋಷಕರಲ್ಲಿ (Parents) ವಿಚಾರ ತಿಳಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ಬಾಲಕಿಗೆ ಇರಿದು ಕೊಂದಿದ್ದಾನೆ. (Murder) ನಂತರ ತಾನೂ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಅಂದಹಾಗೇ ಈ ಘಟನೆ ನಡೆದಿರೋದು ಬೆಂಗಳೂರು ಆಸುಪಾಸಿನ ನೆಲಮಂಗಲದ ಬಳಿ.

ಬಾಲಕಿಯ ಹೆಸರು ಖುಷಿ. ಹೆಸರಿನಂತೆ ಇಡೀ ಅಪಾರ್ಟ್​ಮೆಂಟ್​ನಲ್ಲಿ ಖುಷಿಯಿಂದ ಓಡಾಡಿಕೊಂಡಿದ್ದಳು. ಆದರೆ ಆಕೆಯ ಮೇಲೆ ಅದೇ ಅಪಾರ್ಟ್​ಮೆಂಟ್​ನ ಕಿರಾತಕನ ಕಣ್ಣು ಬಿದ್ದಿತ್ತು. ಕಿರುಕುಳ ಕೂಡ ಕೊಟ್ಟಿದ್ದ. ಆದರೆ ಇಂದು ಮೊಮ್ಮಗಳಷ್ಟು ಪ್ರಾಯದ ಬಾಲಕಿಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ನೇಣಿಗೆ ಶರಣಾಗಿದ್ದಾನೆ.

ಬಾಲಕಿಯ ಕೊಂದ ಆಗಂತುಕ!

ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಂದಾಲ್ ನಗರದಲ್ಲಿ ಭೀಕರ ಘಟನೆ ನಡೆದಿದೆ. ಜಿಂದಾಲ್ ಅಲ್ಯೂಮಿನಿಯಂ ಕಂಪನಿಯ ನೌಕರ ಕ್ವಾಟ್ರಸ್‌ನ ವಾಸಿ ಲಕ್ಷ್ಮಣ್ ಸಿಂಗ್ ಎಂಬುವವರ ಮಗಳು 11 ವರ್ಷದ ಬಾಲಕಿ ಖುಷಿಯನ್ನ ಇದೇ ಕ್ವಾಟ್ರಸ್‌ನ ನಿವಾಸಿ ನಂದಕಿಶೋರ್ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.‌

ಇದನ್ನೂ ಓದಿ: ಪಾತಕಿಗೆ ಪ್ರೇಯಸಿ ಜೊತೆ ಸರಸಕ್ಕೆ ಅವಕಾಶ, 4 ಪೊಲೀಸರು ಸಸ್ಪೆಂಡ್!

ಬಾಲಕಿಯ ತಂದೆ-ಆರೋಪಿ ಒಂದೇ ಕಡೆ ಕೆಲಸ

ಆರೋಪಿ ನಂದಕಿಶೋರ್ ಜಿಂದಾಲ್‌ನ ಡಾಬಸ್‌ಪೇಟೆ ಕ್ಯಾಂಪ್‌ನಲ್ಲಿ ಕೆಲಸ ಮಾಡಿತ್ತಿದ್ರೆ, ಮೃತ ಬಾಲಕಿ ಖುಷಿ ತಂದೆ ಲಕ್ಷ್ಮಣ್ ಸಿಂಗ್ ಚಿಕ್ಕಬಿದಿರಕಲ್ಲು ಕ್ಯಾಂಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಖುಷಿ ಆಕ್ಟೀವ್ ಆಗಿದ್ದ ಬಾಲಕಿಯಾಗಿದ್ದು ಕ್ವಾಟ್ರಸ್‌ನ ಎರಡನೇ ಮಹಡಿಯಲ್ಲಿ ವಾಸ ಮಾಡುತ್ತಿದ್ರು. ಆರೋಪಿ ನಂದಕಿಶೋರ್ ಮೊದಲ ಮಹಡಿಯ ಮೆಟ್ಟಿಲ ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿರುತ್ತಾನೆ.

ಕಿರುಕುಳದ ಬಗ್ಗೆ ತಂದೆ ಬಳಿ ಹೇಳಿದ್ದ ಖುಷಿ

ಬಾಲಕಿ ಖುಷಿ ಮನೆಯ ಮೇಲೆ ಕೆಳಗೆ ಓಡಾಡುತ್ತಿದ್ದಾಗ ನಂದಕಿಶೋರ್ ಅಸಭ್ಯವಾದ ನಡವಳಿಕೆ ತೋರುತ್ತಿದ್ದನಂತೆ. ಕೈಹಿಡಿದುಕೊಂಡು ಮನೆಗೆ ಹೋಗೋದು, ಆಟ ಆಡಬೇಡ ಅಂತಾ ಸೈಕೋ ರೀತಿ ನಡೆದುಕೊಳ್ಳುತ್ತಿದ್ದನಂತೆ. ಈತನ ವರ್ತನೆ ಬಗ್ಗೆ ಖುಷಿ ತನ್ನ ತಂದೆಯೊಂದಿಗೆ ಸಹ ಹೇಳಿದ್ದಳು.

ನಂದಕಿಶೋರ್​ ಜೊತೆ ಬಾಲಕಿ ತಂದೆ ಜಗಳ

ಈ ವಿಚಾರವಾಗಿ ಲಕ್ಷ್ಮಣ್ ಸಿಂಗ್ ಹಾಗೂ ಆರೋಪಿ ನಂದಕಿಶೋರ್‌ ನಡುವೆ ಗಲಾಟೆ ನಡೆದಿದೆ. ನಂತರ ಲಕ್ಷ್ಮಣ್ ಸಿಂಗ್ ಅಸೋಸಿಯೇಷನ್‌ಗೆ ಕಂಪ್ಲೆಂಟ್ ಕೊಟ್ಟು ಅಸೋಷಿಯೇಷನ್‌ನಿಂದ ಮನೆ ಖಾಲಿ ಮಾಡಿಸುವಂತೆ ಸೂಚನೆ ನೀಡಿದ್ದರಂತೆ. ಇದರಿಂದ ನಂದಕಿಶೋರ್ ಮತ್ತಷ್ಟು ಉಗ್ರನಾಗಿದ್ದ.

ಇದನ್ನೂ ಓದಿ: ಬಸ್​ನಲ್ಲಿ ಯುವತಿಯರನ್ನು ದಿಟ್ಟಿಸಿ ನೋಡಿದ್ರೆ ಅರೆಸ್ಟ್ ಆಗೋದು ಪಕ್ಕಾ

ಜಗಳಕ್ಕೆ ಬಾಲಕಿಯೇ ಕಾರಣ ಎಂದು ಕೊಲೆ

ಇಷ್ಟೆಲ್ಲಾ ಅವಘಡಕ್ಕೆ ಬಾಲಕಿಯೇ ಕಾರಣ ಎಂದು ಆರೋಪಿ ಇಂದು ಮಧ್ಯಾಹ್ನ ಬಾಲಕಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆಗೈದು, ನಂತರ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ವ್ಯಕ್ತಿಯ ಕೊಲೆ

ಇನ್ನು ಜುಲೈ 2ರಂದು ತುಮಕೂರಿನ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಕೊಲೆ ನಡೆದಿದ್ದು ಇಂದು ಆರೋಪಿಗಳನ್ನು ಬಂಧಿಸಲಾಗಿದೆ. ರಾಯಚೂರು ಮೂಲದ ದೊಡ್ಡಲಿಂಗಪ್ಪ ಎಂಬುವವರೇ ಕೊಲೆಯಾದ ವ್ಯಕ್ತಿ. ಲಕ್ಷ್ಮೀ(35) ಹಾಗೂ ಪ್ರಿಯಕರ ವೆಂಕಟೇಶ್(40)ಸೇರಿ ಕೊಲೆಗೈದಿದ್ದಾರೆ.

ಲಕ್ಷ್ಮಿ ಮನೆಗೆ ಮೃತ ದೊಡ್ಡಲಿಂಗಪ್ಪ ಬಂದಿದ್ದ ವೇಳೆ ತಲೆಮೇಲೆ ಕಲ್ಲು ಹಾಕಿ ಭೀಕರವಾಗಿ ಕೊಂದಿದ್ರು. ಬಳಿಕ ಮೃತದೇಹವನ್ನು ಬೈಕ್​ನಲ್ಲೇ ಸಾಗಿಸಿ ನೆಲಮಂಗಲದ ಕಳಲುಘಟ್ಟ ಬ್ರಿಡ್ಜ್ ಕೆಳಗೆ ಬಿಸಾಕಿ ಹೋಗಿದ್ರು. ಇಂದು ಆರೋಪಿಗಳನ್ನು ಬಂಧಿಸಿದ್ದಾರೆ.
Published by:Thara Kemmara
First published: