Suicide: ಮೊಬೈಲ್ ಕಳುವಾಗಿದ್ದಕ್ಕೆ 2 ವರ್ಷದ ಮುದ್ದಾದ ಮಗು ಬಿಟ್ಟು ವ್ಯಕ್ತಿ ಸೂಸೈಡ್!

ಮೊಬೈಲ್ ಕಳುವಾಗಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೊಬೈಲ್ ಕಳ್ಳತನವಾಗಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ನಂತರ ಪತಿ ನೇಣು ಬಿಗಿದು ಸೂಸೈಡ್​ ಮಾಡ್ಕೊಂಡಿದ್ದಾನೆ. ಆನೇಕಲ್ ಬಳಿ ಈ ಘಟನೆ ನಡೆದಿದೆ.

ಮೊಬೈಲ್ ಕಳುವಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್

ಮೊಬೈಲ್ ಕಳುವಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್

  • Share this:
ತಂತ್ರಜ್ಞಾನ (Technology) ಬೆಳೆದಂತೆಲ್ಲಾ ಮೊಬೈಲ್ (Mobile) ಮನುಷ್ಯನ ದಿನಚರಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಹೋದಲ್ಲಿ, ಬಂದಲ್ಲಿ, ಕೂತಲ್ಲಿ, ನಿಂತಲ್ಲಿ, ಮಲಗುವಾಗಲೂ ಮೊಬೈಲ್ ಬೇಕೇಬೇಕು ಎನ್ನುವಂತಾಗಿದೆ. ಅಂಗೈನಲ್ಲೇ ಜಗತ್ತು (World) ಕಾಣೋ ಮನುಷ್ಯನಿಗೆ ಈಗ ಮೊಬೈಲ್ ಬಿಟ್ಟಿರೋಕು ಕಷ್ಟ. ಮನುಷ್ಯ ಕ್ಷಣ ಕಾಲ ಸುಮ್ಮನಿದ್ದರು ಮೊಬೈಲ್​​ನಲ್ಲಿ ಮುಳುಗಿಬಿಡುತ್ತಾನೆ. ಮಕ್ಕಳು (Children) ಕೂಡ ಮೊಬೈಲ್ ಮೊಬೈಲ್ ಅಂತಿರುತ್ತಾರೆ. ಅಷ್ಟರಮಟ್ಟಿಗೆ ಮಾನವ ಮೊಬೈಲ್​ನ ದಾಸನಾಗಿದ್ದಾನೆ. ಅರೆಕ್ಷಣ ಮೊಬೈಲ್ ಬಿಟ್ಟಿರದ ಇವತ್ತಿನ ಕಾಲದಲ್ಲಿ ವ್ಯಕ್ತಿಯೊರ್ವ ಮೊಬೈಲ್ ಕಳುವಾಯಿತು (Theft) ಎಂದು ಮನನೊಂದು ನೇಣಿಗೆ (Suicide) ಶರಣಾಗಿದ್ದಾನೆ. ಮೊಬೈಲ್​ಗಾಗಿ ವ್ಯಕ್ತಿ ಮಸಣ ಸೇರಿದ ಘಟನೆ ನಡೆದಿದ್ದಾರೂ ಎಲ್ಲಿ ಅನ್ನೋದರ ವಿವರ ಇಲ್ಲಿದೆ.

ಮೊಬೈಲ್ ಕಳುವಾಗಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೊಬೈಲ್ ಕಳ್ಳತನವಾಗಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ನಂತರ ಪತಿ ನೇಣು ಬಿಗಿದು ಸೂಸೈಡ್​ ಮಾಡ್ಕೊಂಡಿದ್ದಾನೆ. ಆನೇಕಲ್ ಬಳಿ ಈ ಘಟನೆ ನಡೆದಿದೆ.

ಮೊಬೈಲ್ ಕಳ್ಳತನವಾಗಿದ್ದಕ್ಕೆ ಸೂಸೈಡ್​

ಮೊಬೈಲ್ ಕಳುವಾಯಿತು ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದು ವ್ಯಕ್ತಿ ಸೂಸೈಡ್ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಸೇಲಂ ವಾಸಿಯಾದ ಕಾರ್ತಿಕ್ ಆತ್ಮಹತ್ಯೆಗೆ ಶರಣಾಗಿರೋ ವ್ಯಕ್ತಿ. ಮೂಲತಃ ತಮಿಳುನಾಡಿನ ಸೇಲಂ ವಾಸಿಯಾದ ಕಾರ್ತಿಕ್​ 4 ವರ್ಷಗಳ ಹಿಂದೆ ಆನೇಕಲ್ ಬಳಿಯ ಡೆಂಕಣಿಕೋಟೆ ವಾಸಿ ದೇವಾಣಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಇವರ ಸಂಸಾರಕ್ಕೆ ಸಾಕ್ಷಿಯಾಗಿ ಎರಡು ವರ್ಷದ ಮುದ್ದಾದ ಹೆಣ್ಣು ಮಗು ಕೂಡ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫ್ಯಾಮಿಲಿ ಸೂಸೈಡ್​, ಅಂಬಿ ಅಭಿಮಾನಿಯ ಅಂತಿಮ ದರ್ಶನ ಪಡೆದ ಅಭಿಷೇಕ್​!

ಮದುವೆಯಾದ ಬಳಿಕ ಕಾರ್ತಿಕ್ ಬೆಂಗಳೂರಿನ ತಾವರೆಕೆರೆ ಬಳಿಯ ಕಾರ್ಖಾನೆಯಲ್ಲಿ ಬಟ್ಟೆಗಳಿಗೆ ಬಣ್ಣ ಕಟ್ಟುವ ಕೆಲಸ ಮಾಡುತ್ತಿದ್ದ. ಕಾರ್ತಿಕ್ 4 ತಿಂಗಳ ಹಿಂದೆ ಆನೇಕಲ್ ಬಳಿಕ ಮುತ್ತುಗಟ್ಟಿ ದಿಣ್ಣೆಯಲ್ಲಿ ಬಾಡಿಗೆ ಮನೆಗೆ ಪಡೆದು ಅಲ್ಲಿಗೆ ಶಿಫ್ಟ್​​ ಆಗಿದ್ದ.

10 ರೂಪಾಯಿ ಕೊಟ್ಟು ಮೊಬೈಲ್ ಕಳವು!

ನಿನ್ನೆ ಬೆಳಗ್ಗೆ ಮಗುವಿನ ಕೈಗೆ ನೀಡಿದ್ದ ಮೊಬೈಲ್ ಇದ್ದಕ್ಕಿದ್ದಂತೆ ಮಾಯವಾಗಿತ್ತು. ಯಾರೋ ಅಸಾಮಿಗಳು ಮಗುವಿನ ಕೈಗೆ ಹತ್ತು ರೂಪಾಯಿ ನೀಡಿ ಮೊಬೈಲ್ ಕದ್ದಿದ್ದರು. ಈ ವಿಚಾರ ಪತಿ ಮತ್ತು ಪತ್ನಿ ನಡುವೆ ಜಗಳಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಾರ್ತಿಕ್ ನೇಣಿಗೆ ಶರಣಾಗಿದ್ದಾನೆ.

ಕುಡಿತಕ್ಕೆ ದಾಸನಾಗಿದ್ದ ಕಾರ್ತಿಕ್

ಮೃತ ಕಾರ್ತಿಕ್ ಕುಡಿತಕ್ಕೂ ದಾಸನಾಗಿದ್ದ. ಇದೇ ವಿಚಾರ ಸಂಬಂಧ ಸಣ್ಣ ಸಣ್ಣ ವಿಚಾರಕ್ಕೂ ಪತಿ ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಕಾರ್ತಿಕ್ ಕುಡಿದರೆ ವಿಚಿತ್ರವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಸೈಕೋ ರೀತಿ ವರ್ತಿಸುತ್ತಿದ್ದ ಕಾರ್ತಿಕ್ ಮೊಬೈಲ್ ಕಳವು ಬಳಿಕ ಪೇಚಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಆರು ವರ್ಷದ ಪ್ರೀತಿ, ಮದುವೆ ಮನೆಗೆ ಬರಬೇಕಿದ್ದ ವರ ನಾಪತ್ತೆ, ಕಾರಣವೇನು ಗೊತ್ತಾ?

ಎರಡು ಮದುವೆಯಾಗಿದ್ದ ವ್ಯಕ್ತಿ

ಅಲ್ಲದೇ ಕಾರ್ತಿಕ್​ಗೆ ಎರಡು ಮದುವೆಯಾಗಿತ್ತು. ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳ ಬಗ್ಗೆ ಮಾಹಿತಿ ಮುಚ್ಚಿಟ್ಟು ದೇವಾಣಿಯನ್ನು ಮದುವೆಯಾಗಿದ್ದ. ಇನ್ನು ಮೊಬೈಲ್ ಕಳವು ವಿಚಾರ ಪೊಲೀಸರಿಗೆ ದೂರು ನೀಡಿದರೆ ಪತ್ತೆ ಹಚ್ಚುತ್ತಾರೆ ಎಂದು ತಿಳಿಸಿದರೂ ಕೂಡ ಕಾರ್ತಿಕ್ ಹುಚ್ಚನಂತೆ ವರ್ತಿಸುತ್ತಿದ್ದನಂತೆ. ಇಂದು ನೇಣಿಗೆ ಕೊರಳೋಡ್ಡಿದ್ದಾನೆ ಅಂತಾ ಪತ್ನಿ ತಿಳಿಸಿದ್ದಾರೆ.

ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಕಳುವಾಗಿದ್ದರೆ ಮತ್ತೊಂದು ಮೊಬೈಲ್ ಖರೀದಿಸಬಹುದಿತ್ತು. ಆದ್ರೆ ಹೋದ ಜೀವ ಮತ್ತೆ ಬರುತ್ತಾ? ಇತ್ತೀಚೆಗೆ ನಾಗರೀಕತೆ ಬೆಳೆದಂತೆ ಬದುಕಿನ ಮೌಲ್ಯಗಳು ಕಾಣೆಯಾಗುತ್ತಿದ್ದು, ಸಣ್ಣ ಪುಟ್ಟ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವುದು ಉತ್ತಮ ಬೆಳವಣಿಗೆಯಲ್ಲ. ಅದರಲ್ಲು ಮುದ್ದಾದ ಮಗು ಮತ್ತು ಮಡದಿಯನ್ನು ಒಂಟಿಯಾಗಿಸಿ ಮೊಬೈಲ್​ಗಾಗಿ ಕಾರ್ತಿಕ್ ಇಹಲೋಕ ತ್ಯಜಿಸಿದ್ದು ದುರಂತವೇ ಸರಿ.
Published by:Thara Kemmara
First published: