ಬಚ್ಚಲು ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಹೆಣ್ಮಕ್ಕಳ ಬೆತ್ತಲೆ ವಿಡಿಯೋ ಮಾಡುತ್ತಿದ್ದ ಕಾಮುಕ ಅರೆಸ್ಟ್


Updated:March 1, 2018, 10:13 PM IST
ಬಚ್ಚಲು ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಹೆಣ್ಮಕ್ಕಳ ಬೆತ್ತಲೆ ವಿಡಿಯೋ ಮಾಡುತ್ತಿದ್ದ ಕಾಮುಕ ಅರೆಸ್ಟ್
ಬಚ್ಚಲುಮನೆಯಲ್ಲಿ ಕ್ಯಾಮೆರಾ ಇಟ್ಟು ಚಿತ್ರೀಕರಣ

Updated: March 1, 2018, 10:13 PM IST
-ಗಂಗಾಧರ್, ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.01): ಬೆಂಗಳೂರಿನ ಮಹಿಳೆಯರೇ ಹುಷಾರ್.. ನಗರಕ್ಕೆ ಒಬ್ಬ ಒಬ್ಬ ಸೈಕೋ ಟೆಕ್ಕಿ ಬಂದಿದ್ದಾನೆ. ಸ್ವಲ್ಪ ಯಾಮಾರಿದರೆ ಬಚ್ಚಲು ಮನೆಯಲ್ಲಿ ಕ್ಯಾಮರಾ ಇಟ್ಟು ಬೆತ್ತಲೆ ಮಾಡಿ ಮಾನ ಹರಾಜಿಗೆ ಇಟ್ಟು ಬಿಡುತ್ತಾನೆ.

ಮೂಲತಃ ಉತ್ತರಪ್ರದೇಶದವನಾದ ಸಂಜೀವ್ ಎಂಬಾತ ಮಾನಗೇಡಿ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಬನ್ನೇರುಘಟ್ಟ ರಸ್ತೆಯ ಬಿಳೆಕಲ್ಲಳ್ಳಿಯ ವಿಜಯಬ್ಯಾಂಕ್ ಲೇಔಟ್​ನಲ್ಲಿ ವಾಸವಾಗಿರುವ ಈತ ಮನೆಯ ತಾರಸಿಯ ಮೇಲೆ ಪಾಟನ್ನ ಇಟ್ಟು ಅದಕ್ಕೆ ಹಿಡನ್ ಕ್ಯಾಮರಾವನ್ನ ಫಿಟ್ ಮಾಡಿಕೊಂಡಿದ್ದ. ಕಾರಣ ಈತನ ಮನೆಯ ಎದುರಿಗೇ ಸ್ಲಂ ಇದ್ದು ಅಲ್ಲಿರುವ ಎಲ್ಲರೂ ಪ್ಲಾಸ್ಟಿಕ್ ಟಾರ್ಪಲ್​ನಲ್ಲಿ ಬಚ್ಚಲುಮನೆ ರೆಡಿಮಾಡಿಕೊಂಡಿರುತ್ತಾರೆ.

ಮೇಲೆ ಓಪನ್ ಆಗಿರುವ ಬಚ್ಚಲು ಮನೆಯಲ್ಲಿ ಸ್ನಾನ‌ಮಾಡುವ ಹೆಣ್ಮಕ್ಕಳ ದೇಹವನ್ನ ನೋಡೋದಕ್ಕಾಗಿ ಈ ಪಾಪಿ ಸಿಸಿ ಟಿವಿ ಅಳವಡಿಸಿಕೊಂಡಿದ್ದನಂತೆ.
.
ಕಳೆದ ಒಂದು ತಿಂಗಳಿನಿಂದ ಹಿಡನ್ ಕ್ಯಾಮರಾದ ದೃಶ್ಯಾವಳಿಗಳನ್ನ ನೋಡಿಕೊಂಡು ವಿಕೃತವಾಗಿ ಎಂಜಾಯ್​ ಮಾಡುತ್ತಿದ್ದ ಈತನ ಅಸಲಿ ಮುಖ ಫೆಬ್ರವರಿ ೨೨ರಂದು ಬಯಲಾಗಿದೆ. ಲಕ್ಷ್ಮಮ್ಮ ಎಂಬ ಮಹಿಳೆ ಸ್ನಾನಕ್ಕೆ ಹೋಗಿದ್ದಾಗ ಹೂವಿನ ಕುಂಡವನ್ನ ಗಮನಿಸಿದ್ದಾರೆ. ಆಗ ಹೂಕುಂಡದ ಮಧ್ಯ ಗಾಜಿನ ರೀತಿಯ ವಸ್ತು ಪತ್ತೆಯಾಗಿದೆ. ತಕ್ಷಣ ಅಕ್ಕಪಕ್ಕದವರನ್ನ ಕರೆದು ಕೇಳಿದಾಗ ಹಿಡನ್ ಕ್ಯಾಮರಾ ಎನ್ನುವುದು ಪಕ್ಕಾ ಆಗಿದೆ.

ಲಕ್ಷ್ಮಮ್ಮಮ್ಮಗೆ ಸಂಜೀವನ ವಿಕೃತ ಕೃತ್ಯದ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕ ತಕ್ಷಣ, ಅವರು ಮೈಕೋಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರನ್ನ ನೀಡಿದ್ದಾರೆ. ಸದ್ಯ, ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Loading...

 
First published:March 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...