ಡ್ರಾಪ್ ಕೇಳಿದ ಸೇಲ್ಸ್ ಗರ್ಲ್ ಕುತ್ತಿಗೆಗೆ ಕುಡುಗೋಲು ಇಟ್ಟು ಅತ್ಯಾಚಾರಕ್ಕೆ ಯತ್ನ

ಶಾರ್ಟ್​ಕಟ್ ರಸ್ತೆಯಲ್ಲಿ ಹೋಗುವುದಾಗಿ ಹೇಳಿ ತನ್ನ ತೋಟದ ಮನೆಗೆ ಕರೆದೊಯ್ದು ಯುವತಿಯ ಮೇಲೆ ಆರೋಪಿ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ.

news18
Updated:May 17, 2019, 9:47 PM IST
ಡ್ರಾಪ್ ಕೇಳಿದ ಸೇಲ್ಸ್ ಗರ್ಲ್ ಕುತ್ತಿಗೆಗೆ ಕುಡುಗೋಲು ಇಟ್ಟು ಅತ್ಯಾಚಾರಕ್ಕೆ ಯತ್ನ
ಅತ್ಯಾಚಾರ ಆರೋಪಿ ರಮೇಶ್ (ಎಡತುದಿ)
news18
Updated: May 17, 2019, 9:47 PM IST
ಹೊಸಕೋಟೆ(ಮೇ 17): ಸಂಜೆಯಾಗಿ ಮನೆಗೆ ಬೇಗ ಹೋಗುವ ಆತುರದಲ್ಲಿ ಅಪರಿಚಿತ ವ್ಯಕ್ತಿಯ ಬೈಕ್​ನಲ್ಲಿ ಡ್ರಾಪ್ ಕೇಳಿದ್ದಕ್ಕೆ ಯುವತಿಯೊಬ್ಬಳ ಮಾನಕ್ಕೆ ಕುತ್ತುಬಂದ ಘಟನೆ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಡೆದಿದೆ. ಡ್ರಾಪ್ ಕೊಡುವ ನೆವದಲ್ಲಿ ಆರೋಪಿ ರಮೇಶ್ ಎಂಬಾತ ಯುವತಿಯನ್ನು ತನ್ನ ತೋಟದ ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅದೃಷ್ಟಕ್ಕೆ ಯುವತಿ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾಳೆ. ಹೊಸಕೋಟೆ ತಾಲೂಕು ಬೈಲನರಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.

ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುವ ಸಂತ್ರಸ್ತೆಯು ಬೈಲನರಸಾಪುರದಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡಲು ಬಂದಿರುತ್ತಾಳೆ. ಸಂಜೆಯಾದ್ದರಿಂದ ಮನೆಗೆ ಹೊರಡಲು ಸಿದ್ಧವಾಗಿರುತ್ತಾಳೆ. ಎಷ್ಟು ಹೊತ್ತಾದರೂ ಬಸ್ ಬರುವುದಿಲ್ಲ. ಅದೇ ಸಮಯಕ್ಕೆ ಟಿವಿಎಸ್ ಬೈಕ್​ನಲ್ಲಿ ಆರೋಪಿ ರಮೇಶ್ ಅತ್ತ ಬರುತ್ತಾನೆ. ಆಗ ಮುಖ್ಯರಸ್ತೆಯವರೆಗೂ ಡ್ರಾಪ್ ಕೊಡುವಂತೆ ಯುವತಿ ಕೇಳುತ್ತಾಳೆ. ಅದಕ್ಕೆ ಒಪ್ಪಿದ ಆತ ಯುವತಿಯನ್ನು ಬೈಕ್​ಗೆ ಹತ್ತಿಸಿಕೊಳ್ಳುತ್ತಾನೆ. ಶಾರ್ಟ್​ಕಟ್ ರಸ್ತೆಯಲ್ಲಿ ಕರೆದುಕೊಂಡು ಹೋಗುವುದಾಗಿ ಯುವತಿಯನ್ನು ನಂಬಿಸಿ ಗಂಗಾಪುರದ ತನ್ನ ತೋಟದ ಮನೆಯತ್ತ ಕರೆದೊಯ್ಯುತ್ತಾನೆ. ಅಲ್ಲಿ ಬೈಕ್ ನಿಲ್ಲಿಸಿ ಆಕೆಯ ಕತ್ತಿನ ಮೇಲೆ ಕುಡುಗೋಲಿಟ್ಟು ಅತ್ಯಾಚಾರಕ್ಕೆ ಯತ್ನಿಸುತ್ತಾನೆ. ಆದರೆ, ಆತನ ಹಿಡಿತದಿಂದ ತಪ್ಪಿಸಿಕೊಂಡು ಯುವತಿ ಓಡಿಹೋಗುತ್ತಾಳೆ.

ಇದನ್ನೂ ಓದಿ: ವಿಜಯಪುರದ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಕೊಲೆ

ಬಳಿಕ ಸ್ಥಳೀಯರ ಸಹಾಯದಿಂದ ಯುವತಿ ಆಸ್ಪತ್ರೆಗೆ ದಾಖಲಾಗುತ್ತಾಳೆ. ಆ ನಂತರ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾಳೆ. ಯುವತಿ ನೀಡಿದ ದೂರು ಆಧರಿಸಿ ನಂದಗುಡಿ ಠಾಣೆ ಪೊಲೀಸರು ಆರೋಪಿ ರಮೇಶ್​ನನ್ನು ಬಂಧಿಸಿದ್ದಾರೆ.

(ವರದಿ: ಕಿರಣ್ ಕೆ.ಎನ್.)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...