HOME » NEWS » State » A MAN ARREST FOR KILLING HIS FRIED RH ANLM

ಸಲಿಂಗಕಾಮಕ್ಕೆ ಒಲ್ಲೆ ಎಂದ ಸ್ನೇಹಿತನನ್ನೇ ಕೊಲೆಗೈದ ಕಾಮುಕನ ಬಂಧನ

ಅನುಮಾನಗೊಂಡು ಸುನೀಲ್ ಪಾಂಡೆ ಬೆನ್ನು ಬಿದ್ದಾಗ ಆರೋಪಿ ಸುನೀಲ್ ಪಾಂಡೆ ಆಂಧ್ರಪ್ರದೇಶದ ತಿರುಪತಿ ಬಳಿಯಿರುವ ರೇಣಿಗುಂಟಾ ಕೈಗಾರಿಕಾ ಪ್ರದೇಶದಲ್ಲಿ ತಲೆ ಮರೆಸಿಕೊಂಡಿರುವುದು ಗೊತ್ತಾಗಿದೆ. ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

news18-kannada
Updated:November 28, 2020, 6:16 PM IST
ಸಲಿಂಗಕಾಮಕ್ಕೆ ಒಲ್ಲೆ ಎಂದ ಸ್ನೇಹಿತನನ್ನೇ ಕೊಲೆಗೈದ ಕಾಮುಕನ ಬಂಧನ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು; ಸಲಿಂಗಕಾಮಕ್ಕೆ ಒಲ್ಲೆ ಎಂದಿದ್ದಕ್ಕೆ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಕ್ರಾಸ್ ಬಳಿಯ ಖಾಸಗಿ ಸ್ಟೀಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ಸಿಕಂದರ್‌ನನ್ನು ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಕಂದರ್‌ನ ಸ್ನೇಹಿತನೇ ಆದ 35 ವರ್ಷದ ಸುನೀಲ್ ಪಾಂಡೆ ಕೊಲೆ ಮಾಡಿ, ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದರು. ಅಕ್ಟೋಬರ್ 29 ರಾತ್ರಿ ಇಬ್ಬರು ಸ್ನೇಹಿತರು ಜೊತೆಯಲ್ಲಿ ಮದ್ಯ ಸೇವಿಸಿ ಊಟ ಮಾಡಿ ನಂತರ ಫ್ಯಾಕ್ಟರಿ ಬಳಿಯೇ ಇದ್ದ ರೂಮಿನಲ್ಲಿ ಜೊತೆಯಲ್ಲಿ ಮಲಗಿಕೊಂಡಿದ್ದಾರೆ. ಈ ವೇಳೆ  ಆರೋಪಿ ಸುನೀಲ್ ಪಾಂಡೆ ಸಿಖಂದರ್​ನನ್ನು ಸಂಲಿಂಗಕಾಮಕ್ಕೆ ಪ್ರಚೋದನೆ ನೀಡಿದ್ದಾನೆ. ಸಿಖಂದರ್ ಒಲ್ಲೆ ಎಂದಿದ್ದಕ್ಕೆ ಪಕ್ಕದಲ್ಲೆ ಇದ್ದ ಮದ್ಯದ ಬಾಟಲಿ ಹಾಗೂ ಇಟ್ಟಿಗೆಯಿಂದ ಮುಖವನ್ನು ಜಜ್ಜಿ ಪರಾರಿಯಾಗಿದ್ದಾನೆ.‌

ಇದನ್ನು ಓದಿ: ಸಿಲಿಕಾನ್ ಸಿಟಿ ಜನರ ಸಮಸ್ಯೆ ಆಲಿಸಲು ಮುಂದಾದ ಖಾಕಿ; ಪ್ರತಿ ಶನಿವಾರ ಮಾಸಿಕ ಜನ ಸಂಪರ್ಕ ದಿವಸ ಆಯೋಜನೆ‌‌

ಮುಂಜಾನೆ ಮತ್ತೋರ್ವ ಕೆಲಸದವರು ಬಂದು ರಕ್ತಸಿಕ್ತನಾದ ಸಿಖಂದರ್‌ನನ್ನು ಕಂಡು ಮಾಲೀಕರಿಗೆ ಫೋನ್ ಮಾಡಿದ್ದಾನೆ. ಕೂಡಲೇ ಮಾಲೀಕರು ಆತನನ್ನು ಆಸ್ಪತ್ರೆಗೆ ಸೇರಿಸಿ ಮಾದನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ತನಿಖೆ ಆರಂಭಿಸುವಷ್ಟರಲ್ಲಿ ಅಕ್ಟೋಬರ್ 31ರ ಮುಂಜಾಮೆ ಗಾಯಾಳು ಸಿಖಂದರ್ ಸಾವನ್ನಪ್ಪಿದ್ದಾರೆ.
Youtube Video

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿದ್ದ ಬಿಹಾರ ಮೂಲದ ಕಾರ್ಮಿಕರನ್ನೆಲ್ಲ ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಮೃತ ಸಿಖಂದರ್‌ನೊಂದಿಗೆ ಹೆಚ್ಚಿಗೆ ಫೋನ್ ಸಂಭಾಷಣೆ ನಡೆಸಿದ್ದ ಆರೋಪಿ ಸುನೀಲ್ ಪಾಂಡೆ ಮಾತ್ರ ಪತ್ತೆಯಾಗಿಲ್ಲ. ಅನುಮಾನಗೊಂಡು ಸುನೀಲ್ ಪಾಂಡೆ ಬೆನ್ನು ಬಿದ್ದಾಗ ಆರೋಪಿ ಸುನೀಲ್ ಪಾಂಡೆ ಆಂಧ್ರಪ್ರದೇಶದ ತಿರುಪತಿ ಬಳಿಯಿರುವ ರೇಣಿಗುಂಟಾ ಕೈಗಾರಿಕಾ ಪ್ರದೇಶದಲ್ಲಿ ತಲೆ ಮರೆಸಿಕೊಂಡಿರುವುದು ಗೊತ್ತಾಗಿದೆ. ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Published by: HR Ramesh
First published: November 28, 2020, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories