ಚಿಕ್ಕಮಗಳೂರು(ಮಾ.01): ಪ್ರೀತಿಸಿದ ಹುಡುಗಿ ಬೇರೆ ಮದುವೆ ಮಾಡಿಕೊಳ್ಳಲು ಮುಂದಾದ ಹಿನ್ನೆಲೆ, ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ನಡೆದಿದೆ.
ಬಣಕಲ್ ನಿವಾಸಿ ರಾಘವೇಂದ್ರ ಮನನೊಂದು ಆತ್ಮಹತ್ಯೆ ಯತ್ನ ನಡೆಸಿರೋ ಪ್ರಿಯಕರ. ಕಳೆದ 6 ವರ್ಷಗಳಿಂದ ಅದೇ ಗ್ರಾಮದ ಯುವತಿ-ರಾಘವೇಂದ್ರ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಅದ್ಯಾಕೋ ಎಲ್ಲಾ ವಿಚಾರ ಗೊತ್ತಿದ್ದರೂ ತೀರಾ ಇತ್ತೀಚಿನವರೆಗೂ ಸುಮ್ಮನಿದ್ದ ಯುವತಿ ಪೋಷಕರು, ಇದೀಗ ಬೇರೆ ವರನೊಂದಿಗೆ ತಮ್ಮ ಮಗಳ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಈ ಬೆಳವಣಿಗೆಯೇ ಪ್ರಿಯಕರ ರಾಘವೇಂದ್ರನಿಗೆ ಬರಸಿಡಿಲು ಬಡಿದಂತಾಗಿದ್ದು, ತನ್ನ ಹುಡುಗಿ ಕೈ ಕೊಟ್ಟು ಬೇರೆ ವರನೊಂದಿಗೆ ಮದ್ವೆ ಆಗ್ತಿರೋದು ಸಹಜವಾಗಿಯೇ ಶಾಕ್ ಗೆ ಒಳಗಾಗುವಂತೆ ಮಾಡಿದೆ.
COVID-19 Vaccine: ಇಂದಿನಿಂದ ಮೂರನೇ ಹಂತದ ಲಸಿಕೆ ವಿತರಣೆ; ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನ್
ತನ್ನ ಅತ್ತೆ ಮಾವನವರ ಒತ್ತಡಕ್ಕೆ ಮಣಿದು ನಾನು ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನನ್ನನ್ನ ಕ್ಷಮಿಸು ಅಂತಾ ಮೆಸೇಜ್ ಕೂಡ ಮಾಡಿದ್ದಾಳೆ. ಆದ್ರೆ ತನ್ನ ಪ್ರೇಯಸಿಯ ಅಸಹಾಯಕತೆಯನ್ನ ಕೇಳಿ ಮರುಗಿದ ಪ್ರಿಯಕರ ನೀನಿರದೇ ನಾನು ಬದುಕಲು ಸಾಧ್ಯವಿಲ್ಲ. ನೀನು ಸಂತೋಷವಾಗಿರು, ಆದ್ರೆ ಆ ಸಂತೋಷವನ್ನ ನೋಡಲು ನಾನಿರಲ್ಲ ಅಂತಾ ಡೆತ್ನೋಟ್ ಬರೆದಿಟ್ಟು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾನೆ.
ಸುದೀರ್ಘವಾದ ಡೆತ್ನೋಟ್ ಬರೆದಿಟ್ಟಿರುವ ರಾಘವೇಂದ್ರ, ಇನ್ಮುಂದೆ ನಾನು ನಿನ್ನ ಬಾಳಲ್ಲಿ ಇರಲ್ಲ, ಸಂತೋಷದಿಂದ, ನೆಮ್ಮದಿಯಿಂದ ಜೀವನ ಮಾಡುವಂತೆ ಪ್ರೇಯಸಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ತನ್ನ ಪ್ರೀತಿಗೆ ಸಪೋರ್ಟ್ ಮಾಡಿದವರಿಗೆ ಕೂಡ ಥ್ಯಾಂಕ್ಸ್ ಹೇಳಿ, ಅಪ್ಪ-ಅಮ್ಮನಿಗೆ ಕ್ಷಮೆ ಕೇಳಿ ಮಾತ್ರೆ ಸೇವಿಸಿದ್ದಾನೆ. ಈ ನಡುವೆ ಮುಂದಿನ ತಿಂಗಳಲ್ಲಿ ಪೋಷಕರು ತಮ್ಮ ಮಗಳಿಗೆ ಬೇರೆ ಮದ್ವೆ ಮಾಡಲು ಹೊರಟಿದ್ದರು ಅಂತಾ ಗೊತ್ತಾಗಿದೆ. ಸದ್ಯ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಪ್ರಿಯಕರ ಸಾವಿನಿಂದ ಪಾರಾಗಿದ್ದಾನೆ ಅಂತಾ ವೈದ್ಯರು ತಿಳಿಸಿದ್ದಾರೆ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಪ್ರೀತಿ-ಪ್ರೇಮ ಅಂತಾ ಆರು ವರ್ಷ ಸುತ್ತಾಡಿದ ಜೋಡಿ ಇದೀಗ ಬೇರೆ-ಬೇರೆ ಜೀವನ ಪಯಣದಲ್ಲಿ ಸಾಗಬೇಕಾಗಿರೋದು ಇಬ್ಬರಿಗೂ ನೋವು ತರಿಸಿದೆ. ಒಂದೆಡೆ ಪೋಷಕರ ಬಲತ್ಕಾರದಿಂದ ಮದುವೆಗೆ ಒಪ್ಪಿಕೊಂಡು ಹುಡುಗಿ ಹಸೆಮಣೆ ಏರಲು ರೆಡಿಯಾಗಿದ್ರೆ, ಇನ್ನೊಂದೆಡೆ ತಾವು ಕಳೆದ ಮಧುರ ಕ್ಷಣಗಳನ್ನ ನೆನಪಿಸಿಕೊಂಡು ನನ್ನವಳು ನನಗೆ ಸಿಗೋದಿಲ್ಲ ಅಂತಾ ನೊಂದು ಪ್ರಿಯಕರ ಆತ್ಮಹತ್ಯೆಗೆ ಯತ್ನ ಮುಂದಾಗಿರೋದು ಮಾತ್ರ ನಿಜಕ್ಕೂ ದುರಂತವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ