ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಅಧ್ಯಾಪಕನಿಗೆ ಬಿತ್ತು ಸಖತ್​ ಗೂಸಾ

ದ್ಯಾರ್ಥಿನಿಯರ ಪೋಷಕರು, ಸಂಬಂಧಿಕರು ಶನಿವಾರ ಕಾಲೇಜಿಗೆ ತೆರಳಿ ಅಲ್ಲಿಯೇ ಅಧ್ಯಾಪಕ ಬಸವರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

news18
Updated:May 27, 2019, 12:56 PM IST
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಅಧ್ಯಾಪಕನಿಗೆ ಬಿತ್ತು ಸಖತ್​ ಗೂಸಾ
ಪ್ರಾತಿನಿಧಿಕ ಚಿತ್ರ
  • News18
  • Last Updated: May 27, 2019, 12:56 PM IST
  • Share this:
ದಾವಣಗೆರೆ,(ಮೇ 27): ವಿದ್ಯಾರ್ಥಿನಿಯರಿಗೆ ಫೋನ್​  ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಪೋಷಕರು ಅಧ್ಯಾಪಕನಿಗೆ ಸಖತ್ ಗೂಸಾ ನೀಡಿದ್ದಾರೆ. ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಕನ್ನಡ ಅಧ್ಯಾಪಕ ಬಸವರಾಜ್ ಥಳಿತಕ್ಕೊಳಗಾದ ವ್ಯಕ್ತಿ. ಈತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರ ಫೋನ್​ ನಂಬರ್​ ಪಡೆದು ಅವರಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ. ಪ್ರತಿದಿನ ಫೋನ್​ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯವನ್ನು ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮೈತ್ರಿ ಸೋಲಿಗೆ​ 'ಝೀರೋ ಟ್ರಾಫಿಕ್' ಡಿಸಿಎಂ ಪರಮೇಶ್ವರ್ ಕಾರಣ​​: ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​.ರಾಜಣ್ಣ ಲೇವಡಿ

ಅಧ್ಯಾಪಕನ ವರ್ತನೆಯಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು ಹಾಗೂ ಪೋಷಕರು ಬುದ್ಧಿಕಲಿಸಲು ನಿರ್ಧರಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿನಿಯರ ಪೋಷಕರು, ಸಂಬಂಧಿಕರು ಶನಿವಾರ ಕಾಲೇಜಿಗೆ ತೆರಳಿ ಅಲ್ಲಿಯೇ ಅಧ್ಯಾಪಕ ಬಸವರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇಂತಹ ನೀಚ ಅಧ್ಯಾಪಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯರ ಪೋಷಕರು ಆಗ್ರಹಿಸಿದ್ದಾರೆ. ವಿದ್ಯಾನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಈವರೆಗೆ ಅಧ್ಯಾಪಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

First published:May 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ