ಪಾಠ ಕೇಳದೆ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿಗಳಿಗೆ ಸಿಕ್ಕ ಬಹುಮಾನ ಏನು ಗೊತ್ತೇ?

news18
Updated:August 29, 2018, 1:34 PM IST
ಪಾಠ ಕೇಳದೆ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿಗಳಿಗೆ ಸಿಕ್ಕ ಬಹುಮಾನ ಏನು ಗೊತ್ತೇ?
news18
Updated: August 29, 2018, 1:34 PM IST
-ರಘುರಾಜ್, ನ್ಯೂಸ್​ 18 ಕನ್ನಡ

ಕೋಲಾರ,(ಆ.29): ಪಾಠ ಕೇಳದೆ ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗಿದ್ದ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಪನ್ಯಾಸಕರೊಬ್ಬರು ಪೂರ್ಣ ಪ್ರಮಾಣದ ದಂಡನೆ  ಶಿಕ್ಷೆ ವಿಧಿಸಿದ ಘಟನೆ ಕೋಲಾರ ಜಿಲ್ಲಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಪ್ರಥಮ ಕಾಲೇಜಿನ ಲಾರೆನ್ಸ್ ಪ್ರಸ‌ನ್ನ ಎಂಬುವರು ಎನ್ ಸಿ ಸಿ ತರಬೇತಿ ಉಪನ್ಯಾಸಕರಾಗಿದ್ದು, ಎನ್ ಸಿ ಸಿ ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ ಮಾಡುತ್ತಿದ್ದನ್ನು ಕಂಡ ಎನ್ ಸಿ ಸಿ ಶಿಕ್ಷಕ ಲಾರೆನ್ಸ್ ಪ್ರಸನ್ನ ಎಲ್ಲರಿಗೂ ದಂಡನೆ ಶಿಕ್ಷೆ ವಿಧಿಸಿದ್ದಾರೆ.ಪ್ರಥಮ ದರ್ಜೆ ಕಾಲೇಜಿನ ಎನ್ ಸಿ ಸಿ ಕೊಠಡಿಯಲ್ಲಿ ಹಾಗೂ ಹೊರಗಿನ ಕಾಂಪೌಂಡ್ ಗೋಡೆಯ ಮೇಲೆ ಕಾಲು ಹಾಕಿ ಕೈ ಕೆಳಗಿ ಇರಿಸಿ ಸುಮಾರು ನಿಮಿಷಗಳ ಕಾಲ ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವ ವೇಳೆ ಸಹ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗು ಪೋಟೊ ಹರಿಬಿಟ್ಟಿದ್ದಾರೆ. ಈ ವಿಡಿಯೋ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದೆ.

ಪೋಲಿ ಹುಡುಗರಿಗೆ ಎನ್​ಸಿಸಿ ಉಪನ್ಯಾಸಕರು ಒಳ್ಳೆಯ ಪಾಠ ಕಲಿಸಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಮತ್ತೆ ಕೆಲವರು ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷೆಯನ್ನು ಖಂಡಿಸಿದ್ದಾರೆ. ಇನ್ನೂ ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಿಕ್ಷಕ ಲಾರೆನ್ಸ್​ ಪ್ರಸನ್ನರವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅವರು ದೂರವಾಣಿ ಕರೆಗೆ ಸ್ಪಂದಿಸುತ್ತಿಲ್ಲ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ