• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹೋರಾಟದೊಂದಿಗೆ ವಿಧಾನಸೌಧ ಮೆಟ್ಟಿಲು ಹತ್ತಿದ್ದ ನಾಯಕ ; ಸರಳರಲ್ಲಿ ವಿರಳರೆನಿಸಿಕೊಂಡಿದ್ದ ಶಾಸಕ ನಾರಾಯಣ ರಾವ್

ಹೋರಾಟದೊಂದಿಗೆ ವಿಧಾನಸೌಧ ಮೆಟ್ಟಿಲು ಹತ್ತಿದ್ದ ನಾಯಕ ; ಸರಳರಲ್ಲಿ ವಿರಳರೆನಿಸಿಕೊಂಡಿದ್ದ ಶಾಸಕ ನಾರಾಯಣ ರಾವ್

ಶಾಸಕ ಬಿ. ನಾರಾಯಣ ರಾವ್​​

ಶಾಸಕ ಬಿ. ನಾರಾಯಣ ರಾವ್​​

ವಿಧಾನ ಸೌಧದಲ್ಲಿ ಲಾಬಿಗಾಗಿ ಗುಂಪು ಕಟ್ಟಿಕೊಂಡು ಅಲೆದಾಡಿದವರಲ್ಲ. ಹೇಳಬೇಕಾದುದನ್ನು ನೇರವಾಗಿ ಹೇಳುತ್ತಿದ್ದ, ಇಲ್ಲವೇ ಮೌನವಾಗಿರುತ್ತಿದ್ದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಬಸವ ಕಲ್ಯಾಣದ ಬಹುತೇಕ ಮಂದಿ ಸ್ಮರಿಸುತ್ತಾರೆ

  • Share this:

    ಬೆಂಗಳೂರು(ಸೆಪ್ಟೆಂಬರ್​. 24): ಬಂಡವಾಳವನ್ನು ಹೂಡಿ ಬಂಡವಾಳವನ್ನು ವಾಪಸು ಪಡೆಯುವ ಸಮಾಜ ಸೇವೋದ್ಯಮದ ಮುಖವಾಡದ ಇಂದಿನ ರಾಜಕೀಯದಲ್ಲಿ ಬೆರಳೆಣಿಕೆಯಷ್ಟು ಸಜ್ಜನ ರಾಜಕಾರಣಿಗಳು ಸಹ ಇದ್ದಾರೆ. ಅಂಥವರಲ್ಲಿ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಬಿ ನಾರಾಯಣರಾವ್ ಅವರು ಜನ ಮೆಚ್ಚಿದ ಸರಳ ಸಜ್ಜನರಾಗಿದ್ದರು. ಭರವಸೆಯ ಪ್ರಜಾ ಸೇವಕರಾಗಿ ಗುರುತಿಸಿಕೊಂಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಒಳ್ಳೆಯ ನಾಯಕರಾಗಿ, ಜನ ಸೇವಕರಾಗಿ, ಉತ್ತಮ ವಾಗ್ಮಿಯೂ ಆಗಿ ಕರ್ನಾಟಕದ ಜನಪ್ರತಿನಿಧಿಗಳಲ್ಲಿ ಅತಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ದುರದೃಷ್ಟವಶಾತ್ ದೇವರಿಗೂ ವಿಧಾನಸೌಧದಲ್ಲಿ ಅಂತ ಸರಳ ವಿರಳರೂ ಇರುವುದು ಇಷ್ಟವಿಲ್ಲವೇ ಏನೋ ಅದಕ್ಕೆ ಅವರನ್ನು ದೇವರು ಬೇಗ ಕರೆಸಿಕೊಂಡು ಬಿಟ್ಟರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ನೇರವಾದ ಸುಂದರವಾದ ಮರಕ್ಕೆ ಕೊಡಲಿಪೆಟ್ಟು ಎನ್ನುವಂತೆ ಸಜ್ಜನ ರಾಜಕಾರಣಿಗೆ ಆ ವಿಧಿಯು ಕೊಡಲಿಪೆಟ್ಟು ಕೊಟ್ಟೆ ಬಿಟ್ಟಿದೆ. ಇದೇ ಮೊದಲ ಬಾರಿ ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಗಿಟ್ಟಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಜನಾನುರಾಗಿ ಸರಳ ಸಜ್ಜನರಾದ ಅವರು ಬಸವಣ್ಣನವರ ಪರಮ ಅನುಯಾಯಿಗಳಾಗಿದ್ದರು.


    ಬಿಜೆಪಿಯಿಂದ ತೀವ್ರ ಪೈಪೋಟಿ ಇದ್ದರೂ ಸಹ ಅವರನ್ನು ಬಸವಕಲ್ಯಾಣದ ಜನ ಸ್ಪಷ್ಟ ಬಹುಮತದಿಂದ ಆಯ್ಕೆ ಮಾಡಿದ್ದರು. ಅವರು ನಾರಾಯಣಗುರು, ಅಂಬೇಡ್ಕರ್ ಚಿಂತನೆಗಳನ್ನು ತಮ್ಮ ಭಾಷಣದುದ್ದಕ್ಕೂ ಪ್ರಚುರಪಡಿಸುತ್ತಾ ಬೆಂಬಲಿಸುತ್ತಿದ್ದರು.


    ಇದನ್ನೂ ಓದಿ : Big News: ಕೊರೋನಾ ಸೋಂಕಿನಿಂದ ಕಾಂಗ್ರೆಸ್​ ಶಾಸಕ ಬಿ.ನಾರಾಯಣ ರಾವ್​ ಸಾವು


    ಇಂದಿನ ರಾಜಕಾರಣಿಗಳಲ್ಲಿ ಸಜ್ಜನರ ಸಾಲಿನಲ್ಲಿ ಗುರುತಿಸಬಹುದಾದ ವಿರಳ ವ್ಯಕ್ತಿತ್ವ ಅವರದ್ದಾಗಿತ್ತು. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಸಹ ವಿಧಾನ ಸೌಧದಲ್ಲಿ ಲಾಬಿಗಾಗಿ ಗುಂಪು ಕಟ್ಟಿಕೊಂಡು ಅಲೆದಾಡಿದವರಲ್ಲ. ಹೇಳಬೇಕಾದುದನ್ನು ನೇರವಾಗಿ ಹೇಳುತ್ತಿದ್ದ, ಇಲ್ಲವೇ ಮೌನವಾಗಿರುತ್ತಿದ್ದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಬಸವ ಕಲ್ಯಾಣದ ಬಹುತೇಕ ಮಂದಿ ಸ್ಮರಿಸುತ್ತಾರೆ.


    ಕೊರೋನಾ ಸೋಂಕಿಗೆ ತುತ್ತಾಗಿದ್ದ ಬಸವ ಕಲ್ಯಾಣದ ಶಾಸಕ ಬಿ ನಾರಾಯಣ ರಾವ್​ ಅವರು ಕಳೆದೆರಡು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟ ಸಮಸ್ಯೆ ಎದುರಾದ ಹಿನ್ನಲೆ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಗಂಭೀರಗೊಂಡಿದ್ದು, ಬಹು ಅಂಗಾಗ ವೈಫಲ್ಯದಿಂದ  ಸಾವನ್ನಪ್ಪಿದ್ದಾರೆ. ನಿಧನರಾದ ಸುದ್ದಿ ಕೇಳಿ ಇಡೀ ಉತ್ತರ ಕರ್ನಾಟಕ ಶೋಕ ಸಾಗರದಲ್ಲಿ ಮುಳುಗಿದೆ. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ.




    ದೊಡ್ಡ ದೊಡ್ಡ ರಾಜಕಾರಣಿಗಳೇ ಕೋವಿಡ್ ವೈರಸ್ ನಿಂದ ಸಾವಿಗೀಡಾಗುತ್ತಿರುವದು ಜನಸಾಮಾನ್ಯರಲ್ಲಿ ಆತಂಕ ಮೂಡಿಸುತ್ತಿದೆ. ದೊಡ್ಡವರೇ ಸಾಯುತ್ತಿರುವಾಗ ಬಡವರಿಗೆ ಕೋವಿಡ್ ತಗುಲಿದರೆ ಗತಿ ಯಾರು ಎನ್ನುವ ಆತಂಕ ಜನಸಾಮಾನ್ಯರ ಮನೆಮನೆಯಲ್ಲಿ ಮೂಡುತ್ತಿದೆ.

    Published by:G Hareeshkumar
    First published: