HOME » NEWS » State » A LAWMAKER WHO COOKED ON THE ROAD CONDEMNING THE RISE IN COOKING GAS CYLENDER PRICES SESR SAKLB

ಅಡುಗೆ ಅನಿಲ ಬೆಲೆ ಏರಿಕೆಗೆ ಖಂಡಿಸಿ, ರಸ್ತೆಯಲ್ಲಿಯೇ ಅಡುಗೆ ಮಾಡಿದ ಶಾಸಕಿ

ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಸ್ ಫಾತಿಮಾ ಬೇಗಂ ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ.

news18-kannada
Updated:December 25, 2020, 7:29 PM IST
ಅಡುಗೆ ಅನಿಲ ಬೆಲೆ ಏರಿಕೆಗೆ ಖಂಡಿಸಿ, ರಸ್ತೆಯಲ್ಲಿಯೇ ಅಡುಗೆ ಮಾಡಿದ ಶಾಸಕಿ
ಶಾಸಕಿ ಖನೀಸ್ ಫಾತಿಮಾ ಬೇಗಂ
  • Share this:
ಕಲಬುರ್ಗಿ (ಡಿ. 25):  ಅಡುಗೆ ಅನಿಲದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದಾಗಿ ಜನ ಸಾಮಾನ್ಯರು ತೀವ್ರ ಕಂಗಲಾಗುವಂತಾಗಿದೆ.ಕೇಂದ್ರ ಸರ್ಕಾರ ಪದೇ ಪದೇ ಅಡುಗೆ ಅನಿಲದ ದರ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಜಗತ್ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಈ ವೇಳೆ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಸ್ ಫಾತಿಮಾ ಬೇಗಂ ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ.  ರಸ್ತೆಯಲ್ಲಿಯೇ  ಚಪಾತಿ ಮಾಡಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ,  ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿದ್ದು, ಸರ್ಕಾರ ಈ ಗಮನಹರಿಸಬೇಕು. ಅಡುಗೆ ಅನಿಲದ  ಬೆಲೆ ಏರಿಕೆ ವಾಪಸ್ ಪಡೆಯುವಂತೆ ಆಗ್ರಹಿಸಿದರು. 

ಈ ವೇಳೆ ಮಾತನಾಡಿದ ಶಾಸಕಿ ಖನೀಸ್ ಫಾತಿಮಾ ಬೇಗಂ, ಕೇಂದ್ರ ಸರ್ಕಾರ ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಒಂದು ಕಡೆ ಉಚಿತವಾಗಿ ಸಿಲಿಂಡರ್ ನೀಡಿದಾಗಿ ಹೇಳುತ್ತಿದೆ. ಮತ್ತೊಂದು ಕಡೆ ಸಿಲಿಂಡರ್ ದರವನ್ನು ಪದೇ ಪದೇ ಏರಿಕೆ ಮಾಡುತ್ತಿದೆ. ಸಿಲಿಂಡರ್ ದರವನ್ನು ಜನ ಸಾಮಾನ್ಯರ ಕೈಗೆಟುಕದಂತೆ ಮಾಡುತ್ತಿದೆ. ಸಿಲಿಂಡರ್ ಗೆ ನೀಡುತ್ತಿದ್ದ ಸಬ್ಸಿಡಿಗೂ ಕೊಕ್ಕೆ ಹಾಕುತ್ತಿದೆ. ಇದರಿಂದಾಗಿ ಸಿಲಿಂಡರ್ ಸ್ಟೌವ್ ಬದಲಿಗೆ, ಹಳೆಯ ಒಲೆಯ ವವಸ್ಥೆಯೇ ಅನುಕೂಲ ಎನ್ನುವಂತಾಗಿದೆ. ಬಡವರು ಸಿಲಿಂಡರ್ ಒಲೆ ಬಿಟ್ಟು, ಮತ್ತೆ ಹಳೆಯ ಕಟ್ಟಿಗೆಯ ಒಲೆಯಲ್ಲಿ ಅಡುಗೆ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

ಇದನ್ನು ಓದಿ: ವೈಕುಂಠ ಏಕಾದಶಿ ಅಂಗವಾಗಿ ದೇವರ ದರ್ಶನ ಪಡೆದ ಸಿಎಂ, ಮಾಜಿ ಸಿಎಂ

ರಸ್ತೆಯಲ್ಲಿಯೇ ಚಪಾತಿಗಳನ್ನು ಮಾಡಿ ಅಲ್ಲಿಯೇ ತಿನ್ನುವ ಮೂಲಕ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು. ಅಡುಗೆ ಅನಿಲ ದರ ವಾಪಸ್ ಪಡೆಯೋ ಮೂಲಕ ಜನ ಸಾಮಾನ್ಯರಿಗೆ ಆಗಿರೋ ಹೊರೆ ಇಳಿಸುವಂತೆ ಒತ್ತಾಯಿಸಿದರು.

ರೈತರ ಚಳುವಳಿಗೂ ಬೆಂಬಲ:

ಮತ್ತೊಂದೆಡೆ ದೆಹಲಿ ಬಳಿ ರೈತರು ನಡೆಸುತ್ತಿರುವ ಚಳುವಳಿಯನ್ನು ಬೆಂಬಲಿಸಿ ಕಲಾವಿದರು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ರೈತರು ದೆಹಲಿ ಬಳಿ ಹೋರಾಟ ಮುಂದುವರೆಸಿದ್ದಾರೆ. ರೈತರ ಚಳುವಳಿ ಬೆಂಬಲಿಸಿ ನಗರದ ಸಾರ್ವಜನಿಕ ಉದ್ಯಾನವನದ ಬಳಿ ಕಲಾಕೃತಿಗಳನ್ನು ರಚಿಸಿದರು. ರೈತರ ಚಳುವಳಿಗೆ ಬೆಂಬಲ ಎಂದು ಬೃಹತ್ ರಂಗೋಲಿ ಹಾಕಿದರು. ಕೂಡಲೇ ಕೇಂದ್ರ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಬೇಕೆಂದು ಕಲಾವಿದರು ಆಗ್ರಹಿಸಿದ್ದಾರೆ.
Published by: Seema R
First published: December 25, 2020, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories