ಕೊರೋನಾ ನಡುವೆಯೂ ಅದ್ಧೂರಿ ಮದುವೆ; ಅಧಿಕಾರಿ ಬಂದಾಕ್ಷಣ ವಧು ಬಿಟ್ಟು ಪರಾರಿಯಾದ ವರ

ಸ್ಟೇಜ್ ಮೇಲೆ ಆರತಕ್ಷತೆಯಲ್ಲಿ ನಿಂತಿದ್ದ ವರ ಅಧಿಕಾರಿಗಳನ್ನ ನೋಡುತ್ತಿದ್ದಂತೆ ನಿಧಾನವಾಗಿ  ವಧುವನ್ನ ಬಿಟ್ಟು ಕೆಳಗೆ ಇಳಿದು ಓಡಿದ್ದಾನೆ. 

ಸ್ಟೇಜ್ ಮೇಲೆ ಆರತಕ್ಷತೆಯಲ್ಲಿ ನಿಂತಿದ್ದ ವರ ಅಧಿಕಾರಿಗಳನ್ನ ನೋಡುತ್ತಿದ್ದಂತೆ ನಿಧಾನವಾಗಿ  ವಧುವನ್ನ ಬಿಟ್ಟು ಕೆಳಗೆ ಇಳಿದು ಓಡಿದ್ದಾನೆ. 

ಸ್ಟೇಜ್ ಮೇಲೆ ಆರತಕ್ಷತೆಯಲ್ಲಿ ನಿಂತಿದ್ದ ವರ ಅಧಿಕಾರಿಗಳನ್ನ ನೋಡುತ್ತಿದ್ದಂತೆ ನಿಧಾನವಾಗಿ  ವಧುವನ್ನ ಬಿಟ್ಟು ಕೆಳಗೆ ಇಳಿದು ಓಡಿದ್ದಾನೆ. 

  • Share this:
ಚಿಕ್ಕಮಗಳೂರು (ಮೇ. 25) : ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಸೋಂಕಿಗೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಅದ್ಧೂರಿ ಮದುವೆಗೂ ಕೂಡ ತಡೆ ನೀಡಿದೆ. ಮದುವೆಗೆ 40ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದು ಸರ್ಕಾರ ಈಗಾಗಲೇ ಆದೇಶ ಮಾಡಿದೆ. ಅಲ್ಲದೇ ಮದುವೆಗೆ ಮುನ್ನ ಅಧಿಕಾರಿಗಳಿಂದ  ಅನುಮತಿಯನ್ನು ಪಡೆಯುವುದು ಕಡ್ಡಾಯ ಎಂದು ಕೂಡ ಸೂಚಿಸಿದೆ. ಈ ಆದೇಶದಂತೆ ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಹಳ್ಳಿ ಗ್ರಾಮದಲ್ಲಿ ಕೂಡ ಗ್ರಾಮದ ಮದುವೆಗೆ ಕೇವಲ 10 ಜನ ಬರುತ್ತಾರೆ ಎಂದು ಅಧಿಕಾರಿಗಳ ಬಳಿ ಅನುಮತಿ ಪಡೆದಿದ್ದಾರೆ. ಹಳ್ಳಿಯಲ್ಲಿ ನಡೆಯುವ ಮದುವೆಗೆ ಅಧಿಕಾರಿಗಳು ಬರುವುದಿಲ್ಲ ಎಂದು ಅಂದಾಜಿಸಿ ನೂರಾರು ಜನರು ಭಾಗಿಯಾಗಿದ್ದಾರೆ. ಈ ಸುದ್ದಿ ತಿಳಿದಾಕ್ಷಣ ಅಧಿಕಾರಿ ಸ್ಥಳಕ್ಕೆ ಧಾವಿಸಿದ್ದಾರೆ. ಇದು ತಿಳಿಯುತ್ತಿದ್ದಂತೆ ವರ ಮದುವೆ ಬಿಟ್ಟು ಕಾಲ್ಕಿತ್ತ ಘಟನೆ ನಡೆದಿದೆ. 

ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಕರಿಕಲ್ಲಹಳ್ಳಿ ಗ್ರಾಮದಲ್ಲಿ ಠೇಂಕಾರ್ ಹಾಗೂ ಶೈಲಾ, ಭಾಗ್ಯ ಮತ್ತು ಕುಬೇರ ಇಬ್ಬರ ವಿವಾಹ ಮಹೋತ್ಸವ ಸಡಗರ ಸಂಭ್ರಮದಿಂದ ಕೋವಿಡ್ ನಿಯಮ ಉಲ್ಲಂಘಿಸಿ ನಡೆಸಲಾಗಿತ್ತು. ಒಂದೇ ಹಳ್ಳಿಯಲ್ಲಿ ಒಂದೇ ಛತ್ರದಲ್ಲಿ ಠೇಂಕಾರ್-ಶೈಲಾ ಹಾಗೂ ಭಾಗ್ಯ-ಕುಬೇರ ಎಂಬ ಎರಡು ಮದುವೆ ನಡೆಯುತ್ತಿತ್ತು. ಕೋವಿಡ್ ಕಾರಣದಿಂದ  ಕಾಫಿನಾಡಲ್ಲಿ ಸಂಪೂರ್ಣ ಲಾಕ್ ಡೌನ್ ವಿರುವ ಕಾರಣ ಮದುವೆಗೆ ಕೇವಲ 10 ಜನರಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಹಳ್ಳಿಗಳಲ್ಲೂ ಸೋಂಕು ಹಬ್ಬುತ್ತಿರುವ ಹಿನ್ನಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಮದುವೆ ನಡೆಸುವಂತೆ ಕೂಡ ಸೂಚನೆ ನೀಡಲಾಗಿತ್ತು.

ಇದನ್ನು ಓದಿ: ಯಾಸ್​ ಚಂಡಮಾರುತಕ್ಕೂ ಮುನ್ನ ಬಿರುಗಾಳಿ ಅಬ್ಬರಕ್ಕೆ 2 ಸಾವು; ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದ ಸಿಎಂ ಮಮತಾ ಬ್ಯಾನರ್ಜಿ

ಆದರೆ, ಮದುವೆ ಮನೆಯ ಮಂದಿ ತಹಶೀಲ್ದಾರ್​ ಈ ಆದೇಶವನ್ನು ಗಾಳಿಗೆ ತೂರಿ, ನೂರಾರು ಮಂದಿ ಸೇರಿ ಮದುವೆಯಲ್ಲಿ ಭಾಗಿಯಾಗಿದ್ದಾರೆ.  ಹಳ್ಳಿಯಲ್ಲಿ ಶಾಮಿಯಾನ ಹಾಕಿ ಗ್ರಾಮದ ಜನರಿಗೆಲ್ಲಾ ಊಟ ಹಾಕಲು ಸಿದ್ಧತೆ ಕೂಡ ಮಾಡಲಾಗಿತ್ತು. ಈ  ವಿಷಯ ತಿಳಿದ ಪಿಡಿಓ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮದುವೆ  ಆರತಕ್ಷತೆಯಲ್ಲಿ ನಿಂತಿದ್ದ ವರ ಅಧಿಕಾರಿಗಳನ್ನ ಕಂಡಾಕ್ಷಣ ನಿಧಾನವಾಗಿ  ವಧುವನ್ನ ಬಿಟ್ಟು ಕೆಳಗೆ ಇಳಿದು. ಮದುವೆ ಮಂಟಪ ಬಿಟ್ಟು ಓಡಿ ಹೋಗಿದ್ದಾನೆ.

ಇದನ್ನು ಓದಿ: ಪಾಳು ಬಾವಿಗೆ ಬಿದ್ದ ಗರ್ಭಿಣಿ ಹಸು; ಗೋವನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾದ ಅಗ್ನಿಶಾಮಕ ಸಿಬ್ಬಂದಿ

ಊಟ ಮಾಡುತ್ತಿದ್ದ ಹಳ್ಳಿಗರು ಕೂಡ ಅಧಿಕಾರಿಗಳನ್ನ ನೋಡಿ ಎದ್ವೋ... ಬಿದ್ವೋ ಎಂದು ಓಡಿದ್ದಾರೆ. ಸ್ಥಳಕ್ಕೆ ಹೋದ ಅಧಿಕಾರಿಗಳು ವಧು-ವರರ ಪೋಷಕರಿಗೆ ಕ್ಲಾಸ್ ತೆಗೆದುಕೊಂಡು ತಿಳಿ ಹೇಳಿ ವಾಪಸ್ಸಾಗಿದ್ದಾರೆ. ಹುಡುಗಿ ತಾಯಿ ಕಮಲಮ್ಮರಿಗೆ ಇಬ್ಬರು ಹೆಣ್ಣು ಮಕ್ಕಳು. ಅಪ್ಪ ತೀರಿಕೊಂಡಿದ್ದಾರೆ. ತಾಯಿ ಕಷ್ಟಪಟ್ಟು ಹೊಟ್ಟೆಬಟ್ಟೆ ಕಟ್ಟಿ ಆಸೆಯಂತೆ ಕೈಲಾದ ಮಟ್ಟಿಗೆ ಒಂದೇ ಮಂಟಪದಲ್ಲಿ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದರು. ಅಧಿಕಾರಿಗಳ ಬಳಿ ತನ್ನ ಸ್ಥಿತಿ ಹೇಳಿಕೊಂಡಾಗ ಅಧಿಕಾರಿಗಳು ಬುದ್ಧಿವಾದ ಹೇಳಿ ಮಾನವೀಯತೆ ದೃಷ್ಟಿಯಿಂದ ಕೇಸ್ ಹಾಕದೆ ವಾಪಸ್ಸಾಗಿದ್ದಾರೆ.

ಒಟ್ಟಾರೆ, ಲಾಕ್ ಡೌನ್ ನಡುವೆಯೂ ಸಂಭ್ರಮದಿಂದ ಮದುವೆ ಮಾಡಲು ಹೋಗಿ ವಧುವಿನ ಕಡೆಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅಧಿಕಾರಿಗಳು ಎಲ್ಲಿ ಪ್ರಕರಣ ದಾಖಲಿಸುತ್ತಾರೆ ಎಂದು ಹೆದರಿ ವರ  ಓಡಿರುವುದು ಮಾತ್ರ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ಜನರು ಮುಸಿ ಮುಸಿ ನಕ್ಕಿದ್ದಾರೆ.

(ವರದಿ: ವೀರೇಶ್​ ಎಚ್​ ಜಿ)
Published by:Seema R
First published: