• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Anekal: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಯಲ್ಲಿ ಮೀನುಗಳ ಮಾರಣಹೋಮ; ಜಾನುವಾರುಗಳಿಗೆ ರೋಗ ಭೀತಿ

Anekal: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಯಲ್ಲಿ ಮೀನುಗಳ ಮಾರಣಹೋಮ; ಜಾನುವಾರುಗಳಿಗೆ ರೋಗ ಭೀತಿ

ಮೀನುಗಳ ಮಾರಣ ಹೋಮ

ಮೀನುಗಳ ಮಾರಣ ಹೋಮ

ತನ್ನ ಸ್ವಾರ್ಥಕ್ಕಾಗಿ ಅವೈಜ್ಞಾನಿಕವಾಗಿ ಬಡಾವಣೆಗಳನ್ನು ನಿರ್ಮಿಸಿ ಕೆರೆಗಳಿಗೆ ಕಲುಷಿತ ನೀರನ್ನು ಹರಿಸಲಾಗುತ್ತಿದೆ. ಜೊತೆಗೆ ಹಣಕ್ಕಾಗಿ ಅಕ್ರಮವಾಗಿ ಡೈ ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ.

  • Share this:

ಆನೇಕಲ್:  ಬೆಂಗಳೂರು ದಕ್ಷಿಣ ತಾಲ್ಲೂಕು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (Bannerghatta National Park) ವ್ಯಾಪ್ತಿಯ ಬ್ಯಾಟರಾಯನದೊಡ್ಡಿ ಕೆರೆಯಲ್ಲಿ (Byatarayanadoddy Lake) ಸಾವಿರಾರು ಮೀನುಗಳ ಮಾರಣಹೋಮ ಆಗಿದೆ. ಕೈಗಾರಿಕೆಗಳ ಕೆಮಿಕಲ್ ಮಿಶ್ರಿತ ನೀರು (Chemical Water Mixed) ಮತ್ತು ಜನವಸತಿ ಬಡಾವಣೆಗಳ ಕಲುಷಿತ ನೀರು ಕೆರೆಗೆ ಸೇರಿ ಜಲಚರಗಳು  ಸಾವನ್ನಪ್ಪಿವೆ ಎಂದು ಆರೋಪಿಸಲಾಗಿದೆ. ಹಾಗಾಗಿ ಆನೇಕಲ್ ತಹಶೀಲ್ದಾರ್ (Anekal Tahshildar) ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಘಟಕಗಳನ್ನು ಕ್ಲೋಸ್ ಮಾಡಿಸಿದ್ದಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬ್ಯಾಟರಾಯನದೊಡ್ಡಿ ಕೆರೆ ಕಲುಷಿತಗೊಂಡು ಸಾವಿರಾರು ಮೀನುಗಳು (Fish) ಸಾವನ್ನಪ್ಪಿವೆ. ಸುಮಾರು 20 ಎಕರೆ ವಿಸ್ತೀರ್ಣದ ಬ್ಯಾಟರಾಯನದೊಡ್ಡಿ ಕೆರೆಯಲ್ಲಿ ವರ್ಷದ ಹಿಂದೆ ವಿವಿಧ ಜಾತಿಯ ಒಂದೂವರೆ ಲಕ್ಷ ಮೀನುಗಳನ್ನು ಕೆರೆಗೆ ಬಿಡಲಾಗಿತ್ತು. ಆದರೆ ಕೆರೆ ಮೇಲ್ಬಾಗದ ಜನ ವಸತಿ ಪ್ರದೇಶದಲ್ಲಿ ಅಕ್ರಮವಾಗಿ ಬಟ್ಟೆಗಳಿಗೆ ಬಣ್ಣ ಹಚ್ಚುವ ಘಟಕಗಳಿಂದ (Cloths Colouring Units) ಮತ್ತು ಜನವಸತಿ ಬಡಾವಣೆಗಳ ಕಲುಷಿತ ನೀರು ಕೆರೆ ಸೇರಿ ಕಲುಷಿತಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಇಡೀ ಕೆರೆ ಗಬ್ಬುನಾರುತ್ತಿದೆ.


ಇನ್ನೂ ಕಾಡಂಚಿನ ಕೆರೆಯಲ್ಲಿನ ನೀರು ಕಲುಷಿತಗೊಂಡಿದ್ದು, ರೈತರ ಜಾನುವಾರುಗಳಿಗೆ ಮಾರಕ ರೋಗಗಳು ಕಾಡುವ ಭೀತಿ ಎದುರಾಗಿದೆ. ಜೊತೆಗೆ ಬ್ಯಾಟರಾಯನದೊಡ್ಡಿ ಕೆರೆ ನೀರು ಬನ್ನೇರುಘಟ್ಟ ಅರಣ್ಯದಲ್ಲೂ ಹರಿದು ಮುಂದೆ ಸಾಗುತ್ತದೆ.


ಕೆರೆ ಸಂರಕ್ಷಣೆಗೆ ಸ್ಥಳೀಯರ ಒತ್ತಾಯ


ಒಂದು ವೇಳೆ ಕಾಡು ಪ್ರಾಣಿಗಳು ಕಲುಷಿತ ನೀರನ್ನು ಸೇವಿಸಿದರೆ ಕಾಡು ಪ್ರಾಣಿಗಳಿಗೆ ರೋಗ ಭೀತಿ ಕಾಡುತ್ತಿದೆ.  ಹಾಗಾಗಿ ಕೆರೆಯನ್ನು ಸಂರಕ್ಷಣೆ ಮಾಡಿ ಕಲುಷಿತ ನೀರು ಕೆರೆಗಳಿಗೆ ಹರಿಯದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರಾದ ಸುರೇಂದ್ರ ಮತ್ತು ಚಂದ್ರಶೇಖರ್ ಒತ್ತಾಯಿಸಿದ್ದಾರೆ.


ಇದನ್ನೂ ಓದಿ:  B.S Yediyurappa: ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಯಡಿಯೂರಪ್ಪ


ಇನ್ನೂ ಬ್ಯಾಟರಾಯನದೊಡ್ಡಿ ಕೆರೆಯಲ್ಲಿ ಮೀನುಗಳ ಸಾವು ವಿಚಾರ ಮಾಧ್ಯಮಗಳ ಮೂಲಕ ತಿಳಿಯಿತು. ಸ್ಥಳ ಪರಿಶೀಲನೆ ನಡೆಸಿದ್ದು, ಬಿಬಿಎಂಪಿ ವ್ಯಾಪ್ತಿಯ ವೀವರ್ಸ್ ಕಾಲೋನಿ ಮತ್ತು ಬಿಲ್ವಾರದಹಳ್ಳಿ ಬಾಗದ ವಸತಿ ಪ್ರದೇಶ ಮತ್ತು ಕೆಲ ಅಕ್ರಮ ಕಾರ್ಖಾನೆಗಳ ಕೆಮಿಕಲ್ ನೀರು ಬ್ಯಾಟರಾಯನದೊಡ್ಡಿ ಕೆರೆ ಮೂಲಕ ಕಾಡಿನ ನಡುವೆ ಹರಿದು ಮುಂದಕ್ಕೆ ಸಾಗುತ್ತಿದೆ.


A large number of fish found dead in Byatarayanapura Lake cank mrqA large number of fish found dead in Byatarayanapura Lake cank mrq
ತಹಶೀಲ್ದಾರ್ ಪರಿಶೀಲನೆ


ಅಗತ್ಯ ಕ್ರಮದ ಭರವಸೆ ನೀಡಿದ ತಹಶೀಲ್ದಾರ್


ಮುನಿವೀರಪ್ಪ ಎಂಬುವವರು ಬಟ್ಟೆಗಳಿಗೆ ಬಣ್ಣ ಹಚ್ಚುವ ಘಟಕ ನಡೆಸುತ್ತಿರುವುದು ಕಂಡು ಬಂದಿದ್ದು, ವರದಿ ಬಳಿಕ ಸೂಕ್ತ ಕ್ರಮ ವಹಿಸಲಾಗುವುದು. ಜೊತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಜೊತೆ ಸಭೆ ನಡೆಸಿ ಕಲುಷಿತ ನೀರು ಜಲಮೂಲಗಳಿಗೆ ಸೇರಿದಂತೆ ತಡೆಯಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ಶಿವಪ್ಪ ಲಮಾಣಿ ತಿಳಿಸಿದ್ದಾರೆ.


ಇದನ್ನೂ ಓದಿ: Kodagu: ಸರ್ಕಾರದ್ದು ಮಾತಿನಲ್ಲಷ್ಟೇ ಗೋ ರಕ್ಷಣೆಯೇ? ಆಹಾರವಿಲ್ಲದೇ ಬಳಲುತ್ತಿವೆ ಪುಣ್ಯಕೋಟಿಗಳು


ಒಟ್ಟಿನಲ್ಲಿ ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲ. ತನ್ನ ಸ್ವಾರ್ಥಕ್ಕಾಗಿ ಅವೈಜ್ಞಾನಿಕವಾಗಿ ಬಡಾವಣೆಗಳನ್ನು ನಿರ್ಮಿಸಿ ಕೆರೆಗಳಿಗೆ ಕಲುಷಿತ ನೀರನ್ನು ಹರಿಸಲಾಗುತ್ತಿದೆ. ಜೊತೆಗೆ ಹಣಕ್ಕಾಗಿ ಅಕ್ರಮವಾಗಿ ಡೈ ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕಿದೆ.


A large number of fish found dead in Byatarayanapura Lake cank mrq
ಕಾರ್ಖಾನೆ


Sumanahalli Flyover: ಸುಮ್ಮನಹಳ್ಳಿ ಫ್ಲೈಓವರ್ ಮತ್ತೊಮ್ಮೆ ಕುಸಿತ


ಬೆಂಗಳೂರಿನ ಸುಮ್ಮನಹಳ್ಳಿಯ ಫ್ಲೈಓವರ್​ನಲ್ಲಿ ಕಾಂಕ್ರೀಟ್ ಕುಸಿತವಾಗಿದೆ. ಮೇಲ್ಸೇತುವೆ ಮೇಲೆ ದೊಡ್ಡ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ. ಸಿಮೆಂಟ್ ಸ್ಲ್ಯಾಬ್‍ಗಳು ಕಿತ್ತು ಬಂದಿದ್ದು, ಗುಂಡಿಯಿಂದ ನೋಡಿದ್ರೆ ನೆಲ ಕಾಣಿಸುವಷ್ಟು ಕುಸಿತವಾಗಿದೆ. ಗುಂಡಿ ಬಿದ್ದರೂ ಯಾರು ಸಹ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಲೇ ಭೇಟಿ ನೀಡುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬ್ಯಾರಿಕೇಡ್ ಹಾಕಿ, ಓರ್ವ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

Published by:Mahmadrafik K
First published: