HOME » NEWS » State » A LADY FOUND IN HANGED STATE AT ANEKAL AND HER PARENTS ALLEGED ITS MURDER LG

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಮೃತಳ ಕುಟುಂಬದಿಂದ ಕೊಲೆ ಆರೋಪ

ಬುಧವಾರ ಮಧ್ಯಾಹ್ನ ಈಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.‌ ಗಂಡ ದಿವಾಕರ್ ಸಹೋದರ ಮಧ್ಯಾಹ್ನ ಸುಗುಣಾಳ ಕುಟುಂಬದರಿಗೆ ಕರೆ ಮಾಡಿ ನಿಮ್ಮ ಮಗಳು ನೇಣು ಬಿಗಿದುಕೊಂಡು ಸಾವನಪ್ಪಿದ್ದಾಳೆ ಅಂತ ಹೇಳಿದ್ದಾನೆ.

news18-kannada
Updated:December 17, 2020, 8:22 AM IST
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಮೃತಳ ಕುಟುಂಬದಿಂದ ಕೊಲೆ ಆರೋಪ
ಸಾಂದರ್ಭಿಕ ಚಿತ್ರ
  • Share this:
ಆನೇಕಲ್(ಡಿ.17): ಅದೊಂದು ಪುಟ್ಟ ಸಂಸಾರ. ಮದುವೆಯಾಗಿ ಹನ್ನೊಂದು ವರ್ಷ ಕಳೆದಿತ್ತು. ಮದ್ದಾದ ಮಗುವು ಸಹ ಇತ್ತು.   ಆದ್ರೆ ಆ ಕುಟುಂಬದಲ್ಲಿ ನೆಮ್ಮದಿ ಅನ್ನೋದು ಮಾತ್ರ ಇರಲಿಲ್ಲ. ‌ಪ್ರತಿದಿನ ಗಲಾಟೆ ಜಗಳ ಇದೀಗ ಆ ಜಗಳದಿಂದಾಗಿ ಒಂದು ಜೀವವೇ ಬಲಿಯಾಗಿ ಹೋಗಿದೆ. ಹೌದು, ಗಂಡ - ಹೆಂಡತಿ -ಮಗು..‌ ಪುಟ್ಟ ಕುಟುಂಬ.. ಆದ್ರೆ ಈ ಕುಟುಂಬಕ್ಕೆ ಅದ್ಯಾರ‌ ಕಣ್ಣು ಬಿತ್ತೋ ಗೊತ್ತಿಲ್ಲ, ಈ ಕುಟುಂಬಕ್ಕೆ ದೀಪದಂತಿದ್ದ ಈ ಯಜಮಾನಿ ಸುಗುಣ ಇದೀಗ ಬಾರದ ಲೋಕಕ್ಕೆ ಹೋಗಿದ್ದಾಳೆ. ಮೃತ ಮಹಿಳೆಯ ಹೆಸರು ಸುಗುಣ , ಈಕೆಯ ಪತಿ ದಿವಾಕರ್. ತಮಿಳುನಾಡಿನ ಪುನಂಪಲ್ಲಿ ಮೂಲದ ಈ ಸುಗುಣಾಳನ್ನು ಹನ್ನೊಂದು ವರ್ಷಗಳ ಹಿಂದೆ ಆನೇಕಲ್ ವಾಸಿಯಾಗಿರು‌ವ ದಿವಾಕರ್ ವರಿಸಿದ್ದ. ಮದುವೆಯಾದ ಬಳಿಕ ಎಲ್ಲವು ಚೆನ್ನಾಗಿತ್ತು. ಆದ್ರೆ ಇತ್ತೀಚಿನ ಕೆಲ ವರ್ಷಗಳಿಂದ ಇಬ್ಬರ ಮಧ್ಯೆ ಮನಸ್ತಾಪ ಶುರುವಾಗಿದೆ. ಪ್ರತಿದಿನ ಮನೆಯಲ್ಲಿ ಜಗಳ, ಗಲಾಟೆ. ಇದ್ರಿಂದ ಕುಟುಂಬದವರು ಸಹ ಇದನ್ನೆಲ್ಲಾ ನೋಡಿ ಸಾಕಷ್ಟು ಬಾರಿ ರಾಜಿ ಕೂಡ ಮಾಡಿದ್ರು.. ಆದ್ರು ಸಹ ಇವರು ಸರಿ ಆಗಿರಲಿಲ್ಲ. ನಿನ್ನೆ ಇದ್ದಕ್ಕಿದ್ದಂತೆ ಜಗಳ ತಾರಕಕ್ಕೇರಿದ್ದು ಸುಗುಣ ಇದೀಗ ಶವವಾಗಿ ಮಲಗಿದ್ದಾಳೆ.

ಕೋಲಾರದಲ್ಲಿ ಆಲೂಗಡ್ಡೆಗೂ ಕಳ್ಳರ ಕಾಟ; ತೋಟದಲ್ಲೇ ಮೂಟೆಗಟ್ಟಲೇ ಆಲೂಗಡ್ಡೆ ಕಳುವು

ನಿನ್ನೆ ಕೂಡ ಮನೆಯಲ್ಲಿ ವಿಪರೀತ ಜಗಳವಾಗಿದೆ. ಇದ್ರಿಂದ ಕುಟುಂಬದವರ ಜೊತೆ ತನ್ನ ಅಳಲನ್ನು ಮೃತ ಸುಗುಣ ಹೇಳಿಕೊಂಡಿದ್ದಾಳೆ. ಪ್ರತಿದಿನ ಹಣ ತರುವಂತೆ ಹೇಳ್ತಾಯಿದ್ದಾನಂತೆ ಈ ದಿವಾಕರ್. ಹೀಗಾಗಿ ತನ್ನ ಅಳಲನ್ನು ಈ ಸುಗುಣ ಹೇಳಿಕೊಂಡು ಅತ್ತಿದ್ದಾಳೆ.  ಪ್ರತಿದಿನದಂತೆ ಬಿಡು ಇವರ ಜಗಳ ಅಂತ ಮನೆಯವರು  ಸುಮ್ಮನಾಗಿದ್ದಾರೆ.

ಆದ್ರೆ ಬುಧವಾರ ಮಧ್ಯಾಹ್ನ ಈಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.‌ ಗಂಡ ದಿವಾಕರ್ ಸಹೋದರ ಮಧ್ಯಾಹ್ನ ಸುಗುಣಾಳ ಕುಟುಂಬದರಿಗೆ ಕರೆ ಮಾಡಿ ನಿಮ್ಮ ಮಗಳು ನೇಣು ಬಿಗಿದುಕೊಂಡು ಸಾವನಪ್ಪಿದ್ದಾಳೆ ಅಂತ ಹೇಳಿದ್ದಾನೆ. ಆದರೆ ಸುಗುಣಾ ನೇಣು ಬಿಗಿದುಕೊಂಡಿಲ್ಲ. ಇದು ಪಕ್ಕಾ ಪ್ಲಾನ್ ಮಾಡಿ ಆಕೆಯನ್ನು ಮುಗಿಸಿದ್ದಾರೆ‌ ಅಂತ ಸುಗುಣಾಳ ಕುಟುಂಬ ಆರೋಪ ಮಾಡುತ್ತಿದೆ.
Youtube Video

ಮಧ್ಯಾಹ್ನ ಹೊತ್ತಿಗೆ ಸುಗುಣಾಳ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸದ್ಯ ಸುಗುಣಾಳ ಕುಟುಂಬದವರ ರೋಧನೆ ಮುಗಿಲು ಮುಟ್ಟಿದೆ. ಸುಗುಣ ಸಾವನ್ನಪ್ಪಿದರೆ, ಗಂಡ ಪೊಲೀಸರ ವಶದಲ್ಲಿದ್ದು, ಮಗು ಮಾತ್ರ ಇದೀಗ ಅನಾಥವಾಗಿದೆ. ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಸತ್ಯಾಂಶ ಹೊರ ಬರಬೇಕಿದೆ.
Published by: Latha CG
First published: December 17, 2020, 8:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories