ಮ್ಯಾಟ್ರಿಮೋನಿ ಮೂಲಕ ಲಕ್ಷಾಂತರ ಹಣ ಪೀಕಿ ವ್ಯಕ್ತಿಗೆ ಮೋಸ ಮಾಡಿದ ಮಹಿಳೆ

ಹೇಗೋ ಶುಂಠಿ ಬೆಳೆದು ಜೀವನ ಸಾಗಿಸುತ್ತಿದ್ದ ಪರಮೇಶ್, ಡಿಸೆಂಬರ್ 2019 ರಿಂದ ಜೂನ್ 2020 ರ ತನಕ ಲಕ್ಷ್ಮಿಗೆ ಸುಮಾರು 6 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದನಂತೆ. ಆದರೆ ಕೊನೆಗೆ ಲಕ್ಷ್ಮಿ ನಾನು ನಿನ್ನನ್ನು ಮದುವೆಯಾಗುವುದಿಲ್ಲ. ಇನ್ನು ನನಗೆ ಯಾವುದೇ ರೀತಿಯ ಫೋನ್ ಮಾಡಬೇಡ. ಹಾಗೇನಾದರೂ ಫೋನ್ ಮಾಡಿದರೆ ನಿನ್ನ ಮೇಲೆ ಅತ್ಯಾಚಾರ ಕೇಸ್ ನೀಡುವುದಾಗಿ ಬೆದರಿಕೆ ಒಡ್ಡಿದ್ದಾಳೆ.

ಆರೋಪಿತ ಮಹಿಳೆ

ಆರೋಪಿತ ಮಹಿಳೆ

  • Share this:
ಹಾಸನ(ಆ.17): ಇತ್ತೀಚೆಗೆ ಮೋಸ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮೋಸ ಮಾಡುವವರ ಬಲೆಗೆ ಮೋಸ ಹೋಗುವವರು ಬೀಳುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆತ ಅವಿವಾಹಿತ ಜೀವನ ಸಂಗಾತಿಗಾಗಿ ಹುಡುಕುತ್ತಿದ್ದವನಿಗೆ ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಹುಡುಗಿ ಅಪ್ಸರೆಯಂತೆ ಕಂಡಿದ್ದಳು.‌ ಮದುವೆಯಾದರೆ ಈಕೆಯನ್ನೇ ಮದುವೆಯಾಗಬೇಕು ಅಂತ ಆತ ನಿರ್ಧರಿಸಿಬಿಟ್ಟಿದ್ದ. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಆಕೆ ಮಾತ್ರ ಮಾಡಿದ್ದು ಮಹಾಮೋಸ ಏನು ಮಾಡಿದಳು ಎಂಬುದರ ಡೀಟೇಲ್ಸ್ ಇಲ್ಲಿದೆ ನೋಡಿ.

ಆಕೆಯ ಹೆಸರು ಲಕ್ಷ್ಮಿ. ಹಾಸನ ಮೂಲದ 40 ವರ್ಷದ ಅವಿವಾಹಿತ ಪರಮೇಶ್‌ಗೆ ಈಕೆ ಮ್ಯಾಟ್ರಿಮೋನಿಯಲ್ಲಿ‌ ಪರಿಚಯವಾಗಿದ್ದಳು. ನಂತರ ಇಬ್ಬರೂ ಬೆಂಗಳೂರಿನ ಯಲಹಂಕದಲ್ಲಿ ಭೇಟಿಯಾಗಿ ಮದುವೆ ಮಾತುಕತೆಯನ್ನು ಕೂಡ ನಡೆಸಿಕೊಂಡಿದ್ದರು. ಲಕ್ಷ್ಮಿ ಪರಮೇಶನನ್ನ ಭೇಟಿಯಾದ ದಿನವೇ ನಾನೊಬ್ಬ ಅನಾಥೆ. ಐಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನಾನು ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದೇನೆ ಬಣ್ಣ ಬಣ್ಣದ ಮಾತುಗಳನ್ನಾಡಿ ಮರಳು ಮಾಡಿದ್ದಾಳೆ.

ನನಗೆ ಬರುವ ಸಂಬಳವನ್ನು ಚಿಕ್ಕಮ್ಮನೇ ಪೂರ್ತಿಯಾಗಿ ಪಡೆಯುತ್ತಾರೆ. ಹೀಗಾಗಿ ನಾನು ಕಷ್ಟದಲ್ಲಿ ಬದುಕುತ್ತಿದ್ದೇನೆ ಅಂತ ಸುಳ್ಳು ಹೇಳಿ ನಂಬಿಸಿ ಹಂತ ಹಂತವಾಗಿ 6 ಲಕ್ಷ ಪೀಕಿದ್ದಾಳಂತೆ. ಮದುವೆಯಾಗುವ ಹುಡುಗಿ ಅಂತಾ ಪರಮೇಶ್ ಕೂಡ ಕೇಳಿದಾಗಲೆಲ್ಲ ಹಣ ಕೊಟ್ಟಿದ್ದನಂತೆ. ಆದ್ರೆ ಈಗ ಉಲ್ಟಾ ಹೊಡೆದಿರುವ ಲಕ್ಷ್ಮಿ ಪರಮೇಶ್‌ಗೆ ಮತ್ತೆ ಮತ್ತೆ ಬ್ಲಾಕ್‌ಮೇಲ್ ಮಾಡಿ ಹಣ ಪೀಕಲಾರಂಭಿದ್ದಳಂತೆ.

ಹೇಗೋ ಶುಂಠಿ ಬೆಳೆದು ಜೀವನ ಸಾಗಿಸುತ್ತಿದ್ದ ಪರಮೇಶ್, ಡಿಸೆಂಬರ್ 2019 ರಿಂದ ಜೂನ್ 2020 ರ ತನಕ ಲಕ್ಷ್ಮಿಗೆ ಸುಮಾರು 6 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದನಂತೆ. ಆದರೆ ಕೊನೆಗೆ ಲಕ್ಷ್ಮಿ ನಾನು ನಿನ್ನನ್ನು ಮದುವೆಯಾಗುವುದಿಲ್ಲ. ಇನ್ನು ನನಗೆ ಯಾವುದೇ ರೀತಿಯ ಫೋನ್ ಮಾಡಬೇಡ. ಹಾಗೇನಾದರೂ ಫೋನ್ ಮಾಡಿದರೆ ನಿನ್ನ ಮೇಲೆ ಅತ್ಯಾಚಾರ ಕೇಸ್ ನೀಡುವುದಾಗಿ ಬೆದರಿಕೆ ಒಡ್ಡಿದ್ದಾಳೆ. ಇದ್ರಿಂದ ಹೆದರಿದ ಪರಮೇಶ್ ಹಾಸನ ಪೊಲೀಸರ ಮೊರೆ ಹೋಗಿದ್ದು, ಪರಮೇಶ್ ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಲಕ್ಷ್ಮಿಯನ್ನು ಮತ್ತು ಆಕೆಗೆ ಸಹಾಯ ಮಾಡುತ್ತಿದ್ದ ಶಿವಣ್ಣ ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ.

ಈಕೆ ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಇನ್ನು ಮೋಸ ಹೋಗಿರುವ ಪರಮೇಶ್ ಮಾತ್ರ ದಯವಿಟ್ಟು ಕಷ್ಟಪಟ್ಟು ದುಡಿದ ಹಣವನ್ನು ಮೋಸದಿಂದ ಕಿತ್ತುಕೊಂಡು ಯಾರಿಗೂ ನೋವು ಕೊಡಬೇಡಿ ಅಂತಾ ಹಿಡಿಶಾಪ ಹಾಕುತ್ತಿದ್ದಾರೆ.
Published by:Latha CG
First published: