HOME » NEWS » State » A KUNDAPURA MAN NAMED HIS DAUGHTER AS KANNADA SHETTY WIDESPREAD ADMIRATION FOR PRATAP SHETTY KANNADA LOVE HK

ಮಗಳಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟ ಉದ್ಯಮಿ ; ಪ್ರತಾಪ್ ಶೆಟ್ಟಿಯ ಕನ್ನಡಾಭಿಮಾನಕ್ಕೆ ವ್ಯಾಪಕ ಮೆಚ್ಚುಗೆ

ಕನ್ನಡ ಶೆಟ್ಟಿಗೆ ಮುಂದಿನ ತಿಂಗಳು ಒಂದು ವರ್ಷ ತುಂಬುತ್ತಿದೆ. ಮಗಳಿಗೆ ಕನ್ನಡವೆಂದು ಹೆಸರಿಟ್ಟಿರುವುದು ಮಾತ್ರವಲ್ಲ. ಅದೇ ಹೆಸರಿನಲ್ಲಿ ಜನನ ಪ್ರಮಾಣ ಪತ್ರವನ್ನು ನೋಂದಾಯಿಸಿ ಕೊಂಡಿದ್ದಾರೆ.

news18-kannada
Updated:October 6, 2020, 3:36 PM IST
ಮಗಳಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟ ಉದ್ಯಮಿ ; ಪ್ರತಾಪ್ ಶೆಟ್ಟಿಯ ಕನ್ನಡಾಭಿಮಾನಕ್ಕೆ ವ್ಯಾಪಕ ಮೆಚ್ಚುಗೆ
ಕನ್ನಡ ಶೆಟ್ಟಿ
  • Share this:
ಬೆಂಗಳೂರು (ಅಕ್ಟೋಬರ್​. 06): ಕನ್ನಡಕ್ಕಾಗಿ ಕನ್ನಡ ನೆಲದಲ್ಲೇ ಹೋರಾಟಗಳು ನಡೆಯುತ್ತಿದೆ. ಇನ್ನೊಂದೆಡೆ ಕನ್ನಡಿಗರೇ ಕನ್ನಡ ಮಾತನಾಡದ ದುಸ್ಥಿತಿಯಲ್ಲಿದ್ದಾರೆ. ಇಂತಹ ಕಾಲದಲ್ಲಿ ಇಲ್ಲೊಬ್ಬ ಉದ್ಯಮಿ ತನ್ನ ಮಗಳಿಗೆ ಕನ್ನಡ ಹೆಸರಿಟ್ಟಿದ್ದಾರೆ. ಉದ್ಯಮಿ ಕನ್ನಡ ಪ್ರೇಮ ಇದೀಗ ಇತರರಿಗೆ ಮಾದರಿಯಾಗಿದೆ. ಈ ಮುಗುವಿನ ಹೆಸರು ಕನ್ನಡ ಶೆಟ್ಟಿ. ಮಗುವಿನ ಹೆಸರು ಕೇಳಿದ್ರೆ ಸಾಕು ಮೂಗಿನ ಮೇಲೆ ಬೆರಳಿಡುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್​​ ಶೆಟ್ಟಿ ಅಪ್ಪಟ ಕನ್ನಡಾಭಿಮಾನಿ. ಕನ್ನಡ ನೆಲದಲ್ಲಿ ಕನ್ನಡ ಮರೆಯಾಗುತ್ತಿರುವ ಈ ದಿನಗಳಲ್ಲಿ ಕನ್ನಡ ಉಳಿವಿಗಾಗಿ ಪಣತೊಟ್ಟಿದ್ದಾರೆ. ಕನ್ನಡ ಉಳಿಸುವ ಕಾರ್ಯವನ್ನು ಮಾಡುತ್ತಿರುವ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ದಂಪತಿ ಇದೀಗ ತಮ್ಮ ಮಗುವಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಾಪ್ ಶೆಟ್ಟಿ ಅವರು ಬಹಿರಂಗವಾಗಿ ಎಲ್ಲಿಯೂ ಕನ್ನಡಾಭಿಮಾನವನ್ನು ಹೇಳಿ ಕೊಳ್ಳುವುದಿಲ್ಲ. ಆದರೆ, ಭಾಷೆಯ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ.

ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಮಗುವಿನ ಹೆಸರನ್ನು ಇಡುವುದಕ್ಕೆ ಗೂಗಲ್​​​ ನಲ್ಲಿ ಸರ್ಚ್​​ ಮಾಡುವವರೇ ಹೆಚ್ಚಾಗಿದ್ದಾರೆ. ಆದರೆ, ಪ್ರತಾಪ್ ಶೆಟ್ಟಿ ಅವರು ತಮ್ಮ ಮಗುವಿಗೆ ಹೆಸರಿಡಬೇಕು ಅಂತಾ ಅಂದುಕೊಂಡಾಗ ತಟ್ಟನೆ ಹೊಳೆದಿದ್ದು, ತಾಯಿ ಭುವನೇಶ್ವರಿ. ಕನ್ನಡದ ಅಭಿಮಾನಿಯಾಗಿರುವ ಪ್ರತಾಪ್ ಶೆಟ್ಟಿಯವರು ಮಗಳಿಗೆ ಕನ್ನಡ ಹೆಸರಿಡುವುದಕ್ಕೆ ಯೋಚನೆ ಮಾಡಿದಾಗ ಹೆಂಡತಿ ಪ್ರತಿಮಾ ಕೂಡ ಸಾಕಷ್ಟು ಖುಷಿಗೊಂಡರು.

ಮರೆಯಾಗುತ್ತಿರುವ ಕನ್ನಡಾಭಿಮಾನವನ್ನು ಉಳಿಸುವ ನಿಟ್ಟಿನಲ್ಲಿ ಮಗುವಿನಗೆ ಕನ್ನಡಾಂಬೆಯ ಹೆಸರಿಟ್ಟಿದ್ದೇವೆ. ಮಾತ್ರವಲ್ಲ ಕನ್ನಡದ ಕಂಪು ಪಸರಿಸುವ ಮಾರ್ಗವನ್ನು ತೋರಿಸುತ್ತೇವೆ ಎಂದು ಮಗುವಿನ ತಂದೆ ಪ್ರತಾಪ್​​ ಶೆಟ್ಟಿ ಹೇಳುತ್ತಾರೆ.ಇನ್ನೊಂದು ವಿಶೇಷ ಎಂದ್ರೆ ಕರ್ನಾಟಕದಲ್ಲಿ ನವೆಂಬರ್​ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಕನ್ನಡ ಶೆಟ್ಟಿ ಹುಟ್ಟಿರುವುದು ಕೂಡ ನವೆಂಬರ್ ತಿಂಗಳಿನಲ್ಲಿಯೇ ನವೆಂಬರ್​ 27 ರಂದು ಕನ್ನಡ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಮೈಸೂರಲ್ಲಿ ಪ್ರವಾಸೋದ್ಯಮ ವೃದ್ಧಿ ಜೊತೆಗೆ ಹೆಚ್ಚಾಯ್ತು ಕೊರೋನಾ ಸೋಂಕಿತರ ಸಂಖ್ಯೆ

ಬೆಂಗಳೂರಿನಲ್ಲಿ ನವೆಂಬರ್​ 2019 ರ ನವೆಂಬರ್​ 7 ರಂದು ಹುಟ್ಟಿರುವ ಕನ್ನಡ ಶೆಟ್ಟಿಗೆ ಮುಂದಿನ ತಿಂಗಳು ಒಂದು ವರ್ಷ ತುಂಬುತ್ತಿದೆ. ಮಗಳಿಗೆ ಕನ್ನಡವೆಂದು ಹೆಸರಿಟ್ಟಿರುವುದು ಮಾತ್ರವಲ್ಲ. ಅದೇ ಹೆಸರಿನಲ್ಲಿ ಜನನ ಪ್ರಮಾಣ ಪತ್ರವನ್ನು ನೋಂದಾಯಿಸಿ ಕೊಂಡಿದ್ದಾರೆ. ಬಿಬಿಎಂಪಿ ಜನನ ಪ್ರಮಾಣ ಪತ್ರವನ್ನು ನೋಂದಣಿ ಮಾಡಿದೆ.
Youtube Video

ಕರ್ನಾಟಕದ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಂತೂ ಕನ್ನಡ ಭಾಷೆಯೇ ಮರೆಯಾಗಿ ಹೋಗಿದೆ. ಕನ್ನಡ ನೆಲೆದಲ್ಲಿಯೇ ಕನ್ನಡಿಗರನ್ನು ಹುಡುಕಬೇಕಾದ ಪರಿಸ್ಥಿತಿಯಿದೆ. ಇದೀಗ ಹಲವರು ಮಗುವಿನ ಹೆಸರನ್ನು ಕೇಳಿದ ತಕ್ಷಣ ಆಶ್ಚರ್ಯ ಪಡುತ್ತಾರೆ. ಆದರೆ, ಮಗುವಿನ ಹೆಸರನ್ನು ಕರೆಯುವ ಮೂಲಕವಾದರೂ ಕನ್ನಡ ಭಾಷೆಯ ಮೇಲೆ ಅಭಿಮಾನ ಮೂಡಲಿ. ಕನ್ನಡ ಭಾಷೆಯ ಉಳಿವಂತಾಗಲಿ ಎನ್ನುವುದು ಪ್ರತಾಪ್​​ ಶೆಟ್ಟಿ ಅವರ ಆಶಯ.
Published by: G Hareeshkumar
First published: October 6, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories