• Home
  • »
  • News
  • »
  • state
  • »
  • Moola Nakshatra: ಮೂಲ ನಕ್ಷತ್ರದ ಮಗುವಿಂದ ಮನೆಗೆ ಕೇಡು ಎಂದ ಜ್ಯೋತಿಷಿ! ಹೆಂಡತಿ ಜೊತೆ ಕಂದನನ್ನೂ ಹೊರಹಾಕಿದ ತಂದೆ!

Moola Nakshatra: ಮೂಲ ನಕ್ಷತ್ರದ ಮಗುವಿಂದ ಮನೆಗೆ ಕೇಡು ಎಂದ ಜ್ಯೋತಿಷಿ! ಹೆಂಡತಿ ಜೊತೆ ಕಂದನನ್ನೂ ಹೊರಹಾಕಿದ ತಂದೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೂಲಾ ನಕ್ಷತ್ರದಲ್ಲಿ (Moola Nakshatra) ಜನಿಸಿದ ಮಗು ಹಾಗೂ ತಾಯಿಯನ್ನು ಗಂಡನೇ ಮನೆಯಿಂದ ಹೊರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಜ್ಯೋತಿಷಿಯೊಬ್ಬರ ಮಾತು ಕೇಳಿದ ಗಂಡ, ಹಸು ಕಂದ ಎನ್ನುವುದನ್ನೂ ನೋಡದೇ ಮಗ ಹಾಗೂ ಹೆಂಡತಿಯನ್ನು ಮನೆಯಿಂದ ಹೊರ ಹಾಕಿದ್ದಾನೆ.

  • News18 Kannada
  • Last Updated :
  • Ramanagara, India
  • Share this:

ರಾಮನಗರ: “ಮಕ್ಕಳು (Children) ದೇವರ (God) ಸಮಾನ” ಅಂತಾರೆ, “ಮಕ್ಕಳನ್ನು ಕರುಣಿಸುವುದೇ ದೇವರು” ಅಂತಾರೆ. ಆದ್ರೆ ಮಗು ಹುಟ್ಟಿದಾಗ ಅದು ಗಂಡು (Boy), ಹೆಣ್ಣು (Girl), ಕಪ್ಪು (Black), ಬಿಳಿ (White), ಆ ನಕ್ಷತ್ರ (Nakshatra), ಈ ಘಳಿಗೆ ಅಂತ ದೊಡ್ಡವರೇ ಭೇದಭಾವ ಮಾಡ್ತಾರೆ. ಇದೀಗ ರಾಮನಗರ (Ramanagar) ಜಿಲ್ಲೆಯಲ್ಲಿ ಮೂಲಾ ನಕ್ಷತ್ರದಲ್ಲಿ (Moola Nakshatra) ಜನಿಸಿದ ಮಗು (Baby) ಹಾಗೂ ತಾಯಿಯನ್ನು (Mother) ಗಂಡನೇ (Husband) ಮನೆಯಿಂದ ಹೊರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಜ್ಯೋತಿಷಿಯೊಬ್ಬರ (Astrologer) ಮಾತು ಕೇಳಿದ ಗಂಡ, ಹಸು ಕಂದ ಎನ್ನುವುದನ್ನೂ ನೋಡದೇ ಮಗ ಹಾಗೂ ಹೆಂಡತಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಇದೀಗ ರಾಮಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ಯಂತೆ.


ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪ


ಬೆಂಗಳೂರಿನ ಶೃತಿ ಕಳೆದ ನಾಲ್ಕು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಜುನಾಥ ಲೇಔಟ್‌ನ ಖಾಸಗಿ ಸಂಸ್ಥೆಯ ಉದ್ಯೋಗಿ ನವೀನ್ ಅವರನ್ನು ವಿವಾಹವಾಗಿದ್ದರು. ಮೊದಲು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ನವೀನ್, ಇದೀಗ ಮಗು ಹಾಗೂ ಹೆಂಡತಿಯನ್ನು ಮನೆಯಿಂದ ಹೊರಹಾಕಿದ್ದಾನಂತೆ.


ಮೂಲ ನಕ್ಷತ್ರದ ಮಗುವಿನಿಂದ ದೋಷ ಎಂದಿದ್ದ ಜ್ಯೋತಿಷಿ!
ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಕುಟುಂಬಕ್ಕೆ ದುರಾದೃಷ್ಟ ತರಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು ಎನ್ನಲಾಗಿದೆ. ಈ ಜ್ಯೋತಿಷಿ ಮಾತು ಕೇಳಿದ ಗಂಡ ಮಗು ಹಾಗೂ ಹೆಂಡತಿಯನ್ನು ಮನೆಯಿಂದ ಹೊರಹಾಕಿದ್ದಾನೆ.


ಇದನ್ನೂ ಓದಿ: Acid Attack: ಯುವತಿ ಮೇಲೆ ಆ್ಯಸಿಡ್ ಸುರಿದಿದ್ದ ನಾಗನಿಗೆ ಗ್ಯಾಂಗ್ರಿನ್ ನೋವು! ಇದು ದೇವರೇ ನೀಡಿದ ಶಿಕ್ಷೆ ಎಂದ ಸಂತ್ರಸ್ತೆ


ಮಗ ಮತ್ತು ಹೆಂಡತಿಗೆ ನಿತ್ಯ ಕಿರುಕುಳ


ದಂಪತಿಗೆ ಜನವರಿ 22, 2020 ರಂದು ಮಧ್ಯಾಹ್ನ 12.42 ರ ಸುಮಾರಿಗೆ ಗಂಡು ಮಗುವಾಯಿತು. ಜ್ಯೋತಿಷಿಯ ಭೇಟಿಯ ನಂತರ ನವೀನ್ ತನ್ನ ಹೆಂಡತಿ ಮತ್ತು ಮಗನಿಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗನಿಗೆ ಶಪಿಸುತ್ತಾನೆ ಮತ್ತು ಹೆಂಡತಿಯ ಮೇಲೂ ಹಲ್ಲೆ ನಡೆಸುತ್ತಾನಂತೆ.


ಪೆಟ್ರೋಲ್ ಸುರಿದು ಕೊಲ್ಲುವಂತೆ ಒತ್ತಾಯ


ಬಾಲಕನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲುವಂತೆ ನವೀನ್ ಮತ್ತು ಆತನ ಕುಟುಂಬಸ್ಥರು ಕೇಳಿಕೊಂಡಿದ್ದರು ಎಂದು ಶೃತಿ ಪೊಲೀಸರಿಗೆ ತಿಳಿಸಿದ್ದಾರೆ.


ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ


ಇನ್ನು ಪತಿ ನವೀನ್ ಮೇಲೆ ಶೃತಿ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಂಪತಿಗಳ ನಡುವೆ ವರದಕ್ಷಿಣೆಯೇ ಪ್ರಮುಖ ಸಮಸ್ಯೆ ಆಗಿದೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಆ ಮಗು ಕುಟುಂಬಕ್ಕೆ ದುರಾದೃಷ್ಟವನ್ನು ತರುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ ಹಿನ್ನೆಲೆಯಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರು ತನ್ನನ್ನು ಹೊರಹಾಕಿದ್ದಾರೆ ಎಂದು ಶ್ರುತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ನಾಪತ್ತೆಯಾಗಿರುವ ಪತಿಗಾಗಿ ಹುಡುಕಾಟ


ಪತ್ನಿ ಹಾಗೂ ಮೂರು ವರ್ಷದ ಮಗನನ್ನು ಹೊರಗೆ ಹಾಕಿರುವ ಆರೋಪದ ಮೇಲೆ ರಾಮನಗರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ ದೂರು ನೀಡುತ್ತಿದ್ದಂತೆ ನವೀನ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


ಇದನ್ನೂ ಓದಿ: Kantara: ದೈವ ನರ್ತಕರ ಮೇಲೆ ದೇವರು ಬರೋದು ಸುಳ್ಳು! ಅವರಿಗೆ ಮಾಸಾಶನ ನೀಡಬಾರದು ಎಂದ ಮಾಜಿ ಸಚಿವೆ!


ಮೂಲ ನಕ್ಷತ್ರದಲ್ಲಿ ಹುಟ್ಟಿದರೆ ದೋಷವೇ?


ಮೂಲ ನಕ್ಷತ್ರದಲ್ಲಿ ಸ್ತ್ರೀ ಜನನವಾದರೆ ವಿವಾಹ ವಿಳಂಬ, ಮಾವನಿಗೆ ದೋಷವಿದೆ ಎಂಬೆಲ್ಲ ಮಾತುಗಳು ಕೇಳಲ್ಪಡುತ್ತವೆ. ಆದರೆ ಮೂಲ ನಕ್ಷತ್ರದ ಹೆಣ್ಣಾಗಲೀ, ಗಂಡಾಗಲೀ ಅವರ ರಾಶಿ, ನಕ್ಷತ್ರದಿಂದ ಯಾವುದೇ ವ್ಯಕ್ತಿಗೂ ದೋಷ ಅಂಟುವುದೂ ಇಲ್ಲ, ಕೆಡುಕೂ ಇಲ್ಲ. ಇವೆಲ್ಲ ಸಂಪೂರ್ಣ ಮೂಢನಂಬಿಕೆಯಾಗಿವೆ ಎನ್ನುತ್ತಾರೆ ತಜ್ಞರು.

Published by:Annappa Achari
First published: