ಹಾಸನ: ಕೋಲಾರ (Kolar) ಮೂಲದ ಮಂಜುನಾಥ್ ಮತ್ತು ಬೆಂಗಳೂರು (Bengaluru) ಮೂಲದ ರುದ್ರಾಂಬಿಕೆ ಎಂಬುವವರು ಎಂಟು ವರ್ಷದ ಹಿಂದೆ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೆ ಮದುವೆಯಾಗಿದ್ದು (2nd Marriage) ದಂಪತಿಗಳಿಬ್ಬರು ಸರ್ಕಾರಿ ನೌಕರರು (Government Employee). ದಂಪತಿಗೆ ಮುದ್ದಾದ ಮಗುವಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕಳೆದ ಒಂದೂವರೆ ವರ್ಷದ ಹಿಂದೆ ಪುಟ್ಟ ಮಗುವನ್ನು (Child) ಬಿಟ್ಟು ಹೊರ ಹೋದ ಪತ್ನಿ (Wife) ವಾಪಸ್ ಬಂದಿಲ್ಲವಂತೆ. ಪತ್ನಿ ರುದ್ರಾಂಬಿಕೆ ಎಲ್ಲಿದ್ದಾಳೆ ಎಂಬ ಬಗ್ಗೆ ಪತಿ (Husband) ಮಂಜುನಾಥ್‌ಗೆ ಮಾಹಿಕಿ ಸಿಕ್ಕಿಲ್ಲ. ಆಕೆಗಾಗಿ ಪುಟ್ಟ ಮಗುವಿನ ಜೊತೆ ಪತಿ ಮಂಜುನಾಥ್ ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದಾರೆ.
ಮತ್ತೊಬ್ಬನ ಜೊತೆ ಹೋಗಿದ್ದಾಳಾ ಪತ್ನಿ?
ಎಲ್ಲಾ ಕಡೆ ಹುಡುಕಾಟ ನಡಿಸಿದರು ರುದ್ರಾಂಬಿಕ ಮಾತ್ರ ಪತ್ತೆಯಾಗಿಲ್ಲ. ಇದೀಗ ಹಾಸನ ನಗರದಲ್ಲಿ ಇದ್ದಾಳೆ ಎಂಬ ಮಾಹಿತಿ ಮಂಜುನಾಥ್‌ಗೆ ಸಿಕ್ಕಿದೆ. ಕೋಲಾರ ಜಿಲ್ಲೆ ಅವಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿರುವ ಪತ್ನಿ ರುದ್ರಾಂಬಿಕೆ, ಇದೀಗ ಕರ್ತವ್ಯಕ್ಕೂ ಹೋಗುತ್ತಿಲ್ಲ. ಪತಿ ಹಾಗೂ ಪುಟ್ಟ ಮಗುವನ್ನು ಬಿಟ್ಟು ಬೇರೊಬ್ಬನ ಜೊತೆ ಎಸ್ಕೇಪ್ ಆಗಿದ್ದಾಳೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಪತ್ನಿ ಇದ್ದಾಳೆ ಅಂತ ಅನುಮಾನಿಸಿದ ಪತಿ
ಹಾಸನದ ಉದಯಗಿರಿ ಬಡಾವಣೆಯ ಮನೆಯೊಂದರಲ್ಲಿ ರುದ್ರಾಂಬಿಕೆ ಇದ್ದಾಳೆ ಎಂಬ ಮಾಹಿತಿ ಆಧರಿಸಿ ಶನಿವಾರ ಕುಟುಂಬ ಸದಸ್ಯರ ಜೊತೆ ಮನೆಯ ಬಳಿ ಬಂದ ಮಂಜುನಾಥ್, ಈ ಮನೆಯಲ್ಲೇ ಪತ್ನಿ ಇದ್ದಾಳೆ ಎಂದು ಹೊರಗೆ ಮನೆ ಬಾಗಿಲು ಬಂದ್ ಮಾಡಿ ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ಪೊಲೀಸರ ಪರಿಶೀಲನೆ ವೇಳೆ ಆ ಮನೆಯಲ್ಲಿ ವಾಸವಾಗಿರುವುದು ಬೇರೊಂದು ಕುಟುಂಬ ಎಂದು ಗೊತ್ತಾಗಿದೆ.
ಬೇರೆಯವರ ಮನೆ ಬಾಗಿಲು ಬಂದ್ ಮಾಡಿ ಫಜೀತಿ
ಇದೇ ಮನೆಯಲ್ಲಿ ಪತ್ನಿ ಇದ್ದಾಳೆ ಎಂದು ಬೇರೆಯವರ ಮನೆಯವರ ಬಾಗಿಲು ಬಂದ್ ಮಾಡಿ ಹೈಡ್ರಾಮ ಮಾಡಿದ ಮಂಜುನಾಥ್ ಇದೀಗ ಪೇಚಿಗೆ ಸಿಲುಕಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು, ಮಂಜುನಾಥ್‌ನನ್ನು ವಶಕ್ಕೆ ಪಡೆದು ಬಡಾವಣೆ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ.
ಪತ್ನಿ ಹುಡುಕಿ ಕೊಡುವಂತೆ ಪೊಲೀಸರಿಗೆ ಮನವಿ
ಈ ವೇಳೆಯಲ್ಲೂ ತಾನು ಬಾಗಿಲು ಹಾಕಿದ್ದ ಮನೆಯಲ್ಲೇ ಪತ್ನಿ ಇದ್ದಳು ಎಂದು ಮಂಜುನಾಥ್ ಆರೋಪಿಸಿದ್ದಾರೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಲು ಸಲಹೆ ನೀಡಿ ಪೊಲೀಸರು ಕಳಿಸಿದ್ದಾರೆ. ಇತ್ತ ಕೋಲಾರ ಪೊಲೀಸ್ ಠಾಣೆಯಲ್ಲಿ ರುದ್ರಾಂಬಿಕೆ ಕಾಣಿಯಾಗಿದ್ದಾರೆ ಎಂದು ಮಂಜುನಾಥ್ ದೂರು ನೀಡಿದ್ದು ಹಾಸನ ಪೊಲೀಸರು ಕೋಲಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಸನಕ್ಕೆ ಬಂದಿದ್ದ ಕೋಲಾರ ಪೊಲೀಸರು ಮಂಜುನಾಥ್ ಜೊತೆ ಮನೆಯೊಂದರಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪತಿ ವಿರುದ್ಧ ದೂರು ದಾಖಲಿಸಿದ್ದ ಪತ್ನಿ
ರುದ್ರಾಂಬಿಕೆ ಪಾರ್ಥಸಾರಥಿ ಎಂಬುವವರ ಜೊತೆ ವಾಸವಿದ್ದು ಈಗ ಅವಳು ಗರ್ಭಿಣಿ. ಇದಕ್ಕೆ ಹರೀಶ್ ಎಂಬುವವನು ಕುಮ್ಮಕ್ಕು ನೀಡಿದ್ದಾನೆ ಎಂದು ಮಂಜುನಾಥ್ ಆರೋಪಿಸುತ್ತಿದ್ದಾರೆ. ತನ್ನನ್ನು ಜಾಮೀನು ಮಾಡಿ 15 ಲಕ್ಷ ರೂ ಸಾಲ ಮಾಡಿ ಪಾರ್ಥಸಾರಥಿ ಜೊತೆ ಓಡಿ ಆಗಿದ್ದಾಳೆ. ಇದರ ಜೊತೆ ಪತಿ ವಿರುದ್ಧ ದೌರ್ಜನ್ಯ ಆರೋಪದಡಿ ಕೋಲಾರ ಪೊಲೀಸ್ ಠಾಣೆಯಲ್ಲಿ ಐದು ಕೇಸ್‌ಗಳನ್ನು ರುದ್ರಾಂಬಿಕ ದಾಖಲಿಸಿದ್ದಾಳೆ. ಅಲ್ಲಿಗೆ ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: Murder: ಊಟ ಮುಗಿಸಿ ಮನೆಯಿಂದ ಹೋದವ ವಾಪಸ್ ಬರಲೇ ಇಲ್ಲ! 'ಆಕೆ' ಮೇಲೆ ತಾಯಿಗೆ ಅನುಮಾನ
“ವಿಚ್ಛೇದನ ಕೊಡಿಸಿ ಸಾಕು” ಎಂದ ಪತಿ
ಈ ನಡುವೆ ಪತ್ನಿ ತನ್ನಿಂದ ದೂರವಾಗಿರುವುದರಿಂದ ವಿಚ್ಚೇದನಕ್ಕಾಗಿ ವಕೀಲರ ಮೂಲಕ ಪತಿ ನೋಟಿಸ್ ಕೊಡಿಸಿದ್ದಾರೆ. ನನಗೆ ಅವಳ ಜೊತೆ ಬಾಳಲು ಇಷ್ಟವಿಲ್ಲ. ಮಗುವನ್ನು ನಾನು ಸಾಕುತ್ತೇನೆ. ನನಗೆ ವಿಚ್ಛೇದನ ನೀಡಿದರೆ ಸಾಕು. ನಾನು ಸರ್ಕಾರಿ ನೌಕರನಾಗಿದ್ದು ಐದು ಕೇಸ್‌ಗಳಿಗೆ ಕೋರ್ಟ್ ಅಲೆಯಬೇಕಿದೆ. ಹೇಗಾದರೂ ಮಾಡಿ ರುದ್ರಾಂಬಿಕೆಯನ್ನು ಹುಡುಕಿಕೊಟ್ಟು ವಿಚ್ಛೇದನ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದು, ರುದ್ರಾಂಬಿಕ ಸಿಕ್ಕ ನಂತರವೇ ಸಾಂಸಾರಿಕ ಜಗಳದ ಸತ್ಯಾಸತ್ಯತೆ ತಿಳಿಯಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ