Cricket Betting: ಗಂಡನ ಕ್ರಿಕೆಟ್‌ ಬೆಟ್ಟಿಂಗ್ ಚಟಕ್ಕೆ ಹೆಂಡತಿ ಬಲಿ! ಇದು ಕೊಲೆಯೋ, ಆತ್ಮಹತ್ಯೆಯೋ?

ಏಳು ವರ್ಷದ ಹಿಂದೆ ಆದೇ ಗ್ರಾಮದ ಮಧು ಎಂಬಾತನಿಗೆ ತೇಜಸ್ವಿನಿಯನ್ನು ಮದುವೆ ಮಾಡಿಕೊಡಲಾಗಿತ್ತು. ಆ ವೇಳೆ 150 ಗ್ರಾಂ ಚಿನ್ನ ಮತ್ತು ಹಣವನ್ನೂ ನೀಡಲಾಗಿತ್ತು. ಆದರೂ ತನ್ನ ಕೆಟ್ಟ ಚಾಳಿಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಂಜುನಾಥ್ ಮತ್ತು ಆತನ ಮನೆಯವರು ಇನ್ನಿಲ್ಲದ ಕಿರುಕುಳ ನೀಡಲು ಆರಂಭಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಸನ: ಹಾಸನ ಹೊರವಲಯದಲ್ಲಿರುವ (Outskirts) ದೊಡ್ಡ ಮಂಡಿನಹಳ್ಳಿ ಗ್ರಾಮದಲ್ಲಿ ನೇಣು ಬಿಗಿದ (Hang) ಸ್ಥಿತಿಯಲ್ಲಿ ಗೃಹಿಣಿ ಶವ (Dead Body) ಪತ್ತೆಯಾಗಿದ್ದು, ಪತಿ (Husband) ಹಾಗೂ ಮನೆಯವರು (Family) ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತಳ ಸಂಬಂಧಿಕರು (Relatives) ಆರೋಪಿಸಿದ್ದಾರೆ.  ಶನಿವಾರ ಸಂಜೆ ಗ್ರಾಮದ ತೇಜಸ್ವಿನಿ (28) ಎಂಬ ಮಹಿಳೆ, ನೇಣು ಬಿಗಿದ ಸ್ಥಿತಿಯಲ್ಲಿ ಹೆಣವಾಗಿದ್ದಳು. ಆದರೆ ತೇಜಸ್ವಿನಿ ಆತ್ಮಹತ್ಯೆ (Suicide) ಮಾಡಿಕೊಂಡಿಲ್ಲ, ಬದಲಾಗಿ ಆಕೆಯನ್ನು ಕೊಲೆ (Murder) ಮಾಡಲಾಗಿದೆ ಎಂಬುದು ಸಂಬಂಧಿಕರ ದೂರಾಗಿದೆ.

ಮದುವೆ ಆದಾಗಿನಿಂದಲೂ ವರದಕ್ಷಿಣೆ ಕಿರುಕುಳ

ಏಳು ವರ್ಷದ ಹಿಂದೆ ಆದೇ ಗ್ರಾಮದ ಮಧು ಎಂಬಾತನಿಗೆ ತೇಜಸ್ವಿನಿಯನ್ನು ಮದುವೆ ಮಾಡಿಕೊಡಲಾಗಿತ್ತು. ಆ ವೇಳೆ 150 ಗ್ರಾಂ ಚಿನ್ನ ಮತ್ತು ಹಣವನ್ನೂ ನೀಡಲಾಗಿತ್ತು. ಆದರೂ ತನ್ನ ಕೆಟ್ಟ ಚಾಳಿಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಂಜುನಾಥ್ ಮತ್ತು ಆತನ ಮನೆಯವರು ಇನ್ನಿಲ್ಲದ ಕಿರುಕುಳ ನೀಡಲು ಆರಂಭಿಸಿದ್ದರು. ಆರಂಭದಿಂದಲೂ ಮಗಳಿಗೆ ಹಿಂಸೆ ನೀಡುತ್ತಿದ್ದರು. ಇದೇ ವಿಚಾರವಾಗಿ ಅನೇಕ ಬಾರಿ ಆಕೆಯ ತಮ್ಮಂದಿರಾದ ಧರ್ಮ, ವಿಶ್ವ ಹಾಗೂ ಗ್ರಾಮಸ್ಥರು ಸೇರಿ ರಾಜಿ ಮಾಡಿಸಿ, ಮಹಿಳಾ ಠಾಣೆಗೂ ದೂರು ಕೂಡ ನೀಡಲಾಗಿತ್ತು. ನಂತರ ಪೊಲೀಸರು ತಿಳುವಳಿಕೆ ಹೇಳಿದ್ದರು.

a husband is responsible for the death of his wife due to his cricket betting craze
ತೇಜಸ್ವಿನಿ-ಮಧು ವಿವಾಹದ ಫೋಟೋ


ಕೆಲಸ ಬಿಟ್ಟು, ಕ್ರಿಕೆಟ್ ಬೆಟ್ಟಿಂಗ್ ಚಟ ಬೆಳೆಸಿಕೊಂಡಿದ್ದ

ಟಯೋಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್, 80 ಸಾವಿರ ಸಂಬಳ ಪಡೆಯುತ್ತಿದ್ದ. ಆದರೆ ಬೆಟ್ಟಿಂಗ್‌ಗೆ ದಾಸನಾಗಿದ್ದ ಆತ ಕೆಲಸವನ್ನೂ ಕಳೆದುಕೊಂಡಿದ್ದ. ಪಾಪರ್ ಆಗಿ ಬೆಂಗಳೂರಿನಿಂದ ಹಾಸನಕ್ಕೆ ಬಂದ್ದು, ಮಗಳಿಗೆ ತೊಂದರೆ ಕೊಡುತ್ತಿದ್ದ ಎಂದು ತಾಯಿ ಲಲಿತಾ ಅಳಲು ತೋಡಿಕೊಂಡಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್‌ಗೆ ದಾಸನಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದ ಪತಿ ಮಧು ಅಲಿಯಾಸ್ ಮಂಜುನಾಥ್, ಬೆಟ್ಟಿಂಗ್ ಸಾಲ ತೀರಿಸಲು ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದನಂತೆ. ಕಡೆಗೆ ತೇಜಸ್ವಿನಿ ಕೆಲಸಕ್ಕೆ ಸೇರಿದ್ದಳು.

ಇದನ್ನೂ ಓದಿ: Lover Murder: ಊರಿಗೆ ಬಾ ಅಂತ ಕರೆದ ಯುವತಿ ಸಹೋದರರು, ನಂಬಿ ಬಂದ ಪ್ರಿಯಕರ ವಾಪಸ್ ಹೋಗಲೇ ಇಲ್ಲ!

ಬೆಟ್ಟಿಂಗ್ ಚಟಕ್ಕೆ ಬಿದ್ದು 20 ಲಕ್ಷಕ್ಕೂ ಅಧಿಕ ಸಾಲ

ಮಧು ತನ್ನ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ. ಗಂಡನ ಬೆಟ್ಟಿಂಗ್ ಚಟ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿ ನಂತರ ಕೊಂದಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಧು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಲು ಸುಮಾರು 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಈ ಬಗ್ಗೆ ತೇಜಸ್ವಿನಿ ಪ್ರಶ್ನೆ ಮಾಡಿದ್ದಕ್ಕೆ ಜೀವ ತೆಗೆದಿದ್ದಾನೆ ಎಂದು ದೂರುತ್ತಿದ್ದಾರೆ.

ಗಂಡನ ಮನೆ ಮುಂದೆ ಪತ್ನಿ ಶವ ಇಟ್ಟು ಆಕ್ರೋಶ

ತೇಜಸ್ವಿನಿ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಧು ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಆತನ ಮನೆ ಮುಂದೆ ಶವ ಇಟ್ಟು ಇಂದು ಪ್ರತಿಭಟನೆ ನಡೆಸಿದರು. ಅಲ್ಲದೆ ಮನೆ ಮುಂದೆಯೇ ಶವ ಸಂಸ್ಕಾರ ಮಾಡೋದಾಗಿ ಪಟ್ಟು ಹಿಡಿದಿದ್ದರು. ಪೊಲೀಸರು ಎಷ್ಟೇ ಮನವೊಲಿಸಿದರು ಪಟ್ಟು ಸಡಿಸಲಿಲ್ಲ.‌ ಕೊನೆಗೆ ಪತಿ ಮಧು ಮನೆಯ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಇದನ್ನೂ ಓದಿ: Harsha Murder Case: ಹರ್ಷ ಹತ್ಯೆ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ? ಕಾರಾಗೃಹದೊಳಗಿಂದಲೇ ಟಿಕ್‌ಟಾಕ್, ವಿಡಿಯೋ ಕಾಲ್!

ಅಪ್ಪ ಜೈಲಿಗೆ, ಅಮ್ಮ ಸಾವಿನ ಮನೆಗೆ, ಮಗು ಅನಾಥ

ನಮ್ಮ ಮಗಳ ಸಾವಿಗೆ ಮಧು ಅವನ ಪೋಷಕರೇ ಕಾರಣ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಮಂಜುನಾಥ್‌ನನ್ನು ವಶಕ್ಕೆ ಪಡೆದಿದ್ದಾರೆ. ಗಂಡನ ಬೆಟ್ಟಿಂಗ್ ಚಟಕ್ಕೆ ಹಾಗೂ ತನ್ನದಲ್ಲದ ತಪ್ಪಿಗೆ  ತೇಜಸ್ವಿನಿ ಪ್ರಾಣ ಕಳೆದುಕೊಂಡಿದ್ದಾಳೆ. ಈಕೆ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಗಂಡ ಜೈಲು ಸೇರಿದರೆ, ಗಂಡು ಮಗು ಅನಾಥವಾಗಿದೆ.
Published by:Annappa Achari
First published: