Crops Loss: ಭಾರೀ ಮಳೆಗೆ ಕಂಗಾಲಾದ ಕೋಲಾರದ ರೈತರು, ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದಕ್ಕೆ ಕಣ್ಣೀರು

ಬೆತ್ತನಿ ಬಳಿ  ಖಾಸಗಿ ಜಮೀನಿಗೆ ಕಾಂಗ್ರೆಸ್ ಮುಖಂಡ ಪ್ರವೀಣ್ ಎನ್ನುವರು ಕಾಲುವೆ ನಿರ್ಮಾಣ ಮಾಡುತ್ತಿದ್ದು, ಕಾಲುವೆ ಪಕ್ಕದ ಕಟ್ಟೆ ಒಡೆದು ರೈತರ ಜಮೀನಿಗೆ ನೀರು ನುಗ್ಗಿದೆ. ಬೆತ್ತನಿ ಹಾಗು ಚೌಡದೇನಹಳ್ಳಿ ಗ್ರಾಮದ 40ಕ್ಕೂ ಹೆಚ್ಚು ಎಕರೆ ಪ್ರದೇಶದ ಬೆಳೆಗಳು ನಾಶವಾಗಿದೆ.

ಬೆಳೆಹಾನಿಯಿಂದ ಕಂಗಾಲಾದ ರೈತ

ಬೆಳೆಹಾನಿಯಿಂದ ಕಂಗಾಲಾದ ರೈತ

  • Share this:
ಕೋಲಾರ: ಜಿಲ್ಲೆಯ ಹಲವೆಡೆ ಮೊನ್ನೆ ರಾತ್ರಿ ಸುರಿದ ಮಳೆಯಿಂದಾಗಿ (Rain) ರೈತರ ಬೆಳೆಗಳು ನಾಶವಾಗಿ (Crops Destroyed) ನೀರುಪಾಲಾಗಿದೆ. ಕೋಲಾರ (Kolar) ತಾಲೂಕಿನ ಬೆತ್ತನಿ, ಚೌಡದೇನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆನಾಶವಾಗಿದ್ದು, ಮೊನ್ನೆ  ರಾತ್ರಿ ಸುರಿದ ಮಳೆಯಿಂದ ರಾಜಕಾಲುವೆ ಕಟ್ಟೆ ಒಡೆದು ರೈತರ ಬೆಳೆಗಳಿಗೆ ನೀರು ನುಗ್ಗಿದೆ. ಕಾಲುವೆ (channel) ಒಡೆದು ಬೀನ್ಸ್, ಟೊಮೆಟೊ, ಮೂಲಂಗಿ, ಬೀಟ್ರೋಟ್, ಅವರೆಕಾಯಿ, ಹಳಸಂದಿ, ಜೋಳ, ರಾಗಿ ಬೆಳೆ ನಾಶವಾಗಿದೆ. ಲಕ್ಷ ಲಕ್ಷ ಬಂಡವಾಳ ಹಾಕಿ ಕೈಗೆ ಬರಬೇಕಿದ್ದ ಬೆಳೆ ನೀರು ಪಾಲಾಗಿದೆ. ಬೆತ್ತನಿ ಬಳಿ  ಖಾಸಗಿ ಜಮೀನಿಗೆ ಕಾಂಗ್ರೆಸ್ ಮುಖಂಡ (Congress leader) ಪ್ರವೀಣ್ ಎನ್ನುವರು ಕಾಲುವೆ ನಿರ್ಮಾಣ ಮಾಡುತ್ತಿದ್ದು, ಕಾಲುವೆ ಪಕ್ಕದ ಕಟ್ಟೆ ಒಡೆದು ರೈತರ (Farmers) ಜಮೀನಿಗೆ ನೀರು ನುಗ್ಗಿದೆ,. ಬೆತ್ತನಿ ಹಾಗು ಚೌಡದೇನಹಳ್ಳಿ ಗ್ರಾಮದ 40 ಕ್ಕು ಹೆಚ್ಚು ಎಕರೆ ಪ್ರದೇಶದ ಬೆಳೆಗಳು ನಾಶವಾಗಿದ್ದು, ರಾಜ್ಯ ಸರ್ಕಾರ ಬೆಳೆನಾಶಕ್ಕೆ ಪರಿಹಾರ ನೀಡುವಂತೆ  ರೈತರು ಆಗ್ರಹಿಸಿದ್ದಾರೆ.

ಕೋಲಾರದಲ್ಲಿ ಧಾರಾಕಾರ ಮಳೆ, ತುಂಬಿ ಕೋಡಿಹರಿದ ಕೆರೆಗಳು

ಕೋಲಾರದಲ್ಲಿ ಸತತ ಮೂರು ದಿನದಿಂದ ಧಾರಾಕಾರ ಮಳೆಯಾಗುತ್ತಿದ್ದು, ಕೋಲಾರದ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ಕೋಲಾರಮ್ಮ, ಕೆರೆ, ಅಮ್ಮೇರಹಳ್ಳಿ ಕೆರೆ, ನರಸಾಪುರ, ಮಡೇರಹಳ್ಳಿ, ಕೆಂದಟ್ಟಿ ಕೆರೆಗಳು ಭರ್ತಿಯಾಗಿದ್ದು, ಕೋಡಿ ಹರಿಯುವ ದೃಶ್ಯಗಳನ್ನು ವೀಕ್ಷಿಸಲು ಸಾರ್ವಜನಿಕರು ಜಮಾಯಿಸಿದ ದೃಶ್ಯಗಳು ಕಂಡುಬಂತು. ಆದರೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ  ಜುಂಜನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದ್ದು, ಜುಂಜನಹಳ್ಳಿ ಗ್ರಾಮದ ವೆಂಕಟರಾಜನಹಳ್ಳಿ ಕೆರೆಯಲ್ಲಿ ಸುಮಾರು 20 ಸಾವಿರಕ್ಕು ಹೆಚ್ಚು ಮೀನುಗಳು ಸಾವನ್ನಪ್ಪಿದೆ, ವಿಷಪ್ರಾಸನದಿಂದ ಕೆರೆಯಲ್ಲಿ ಮೀನುಗಳ ಸಾವು ಶಂಕೆ ವ್ಯಕ್ತವಾಗಿದ್ದು, ಇತ್ತೀಚೆಗೆ  ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಮುನಿಕೃಷ್ಣಪ್ಪ ಗುತ್ತಿಗೆ ಪಡೆದಿದ್ದರು.

ಬೆಳೆಗಳು ನಾಶ


ಬೋರ್ ವೆಲ್ ನಿಂದ ಹೊರಕ್ಕೆ ಚಿಮ್ಮುತ್ತಿದೆ ನೀರು

ಕೆಸಿ ವ್ಯಾಲಿ ನೀರು ಕೋಲಾರ ಜಿಲ್ಲೆಗೆ ಹರಿಯುತ್ತಿರುವ ಕಾರಣ ಜಿಲ್ಲೆಯಲ್ಲಿ ನೀರಿನ ಅಭಾವ ಕಡೆಮೆಯಾಗಿದೆ. ಆದರೆ ಕೋಲಾರದಲ್ಲಿ ಕಳೆದ ಮೂರು ದಿನಗಳಿಂದ ಭರ್ಕರಿಯಾಗಿ ಮಳೆಯಾಗ್ತಿದೆ ಕಾರಣ,  ಬೋರ್ ವೆಲ್ ನಿಂದ ನೀರು  ಹೊರಕ್ಕೆ ಚಿಮ್ಮುತ್ತಿದೆ,  ಕೋಲಾರ ತಾಲೂಕಿನ ಕಲ್ವಮಂಜಲಿ ಗ್ರಾಮದಲ್ಲಿನ ಸರ್ಕಾರಿ  ಬೋರ್ ವೆಲ್ ನಿಂದ  ನೀರು ಹೊರಕ್ಕೆ ಚಿಮ್ಮುತ್ತಿದೆ. ಈ ಮೊದಲು 800 ಅಡಿ ಆಳಕ್ಕೆ ಕೊರೆಸಿದ್ದ ಬೋರ್ ನಲ್ಲಿ ಅಂತರ್ಜಲ ಮಟ್ಟ ವೃದ್ದಿಯಾಗಿದ್ದು,  ಸತತ ಮಳೆಯಿಂದಾಗಿ ಅಂತರ್ಜಲ ವೃದ್ಧಿಯಾದ ವಿಚಾರವಾಗಿ  ಗ್ರಾಮಸ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಕೆರೆಯಂತಾದ ಹೊಲಗಳು


ಇದನ್ನೂ ಓದಿ: Kodagu: ಉಕ್ಕಿ ಹರಿದ ಪಯಶ್ವಿನಿ! ಕೊಯಿನಾಡು, ಕಲ್ಲುಗುಂಡಿಯಲ್ಲಿ ಪ್ರವಾಹ

ನೀರಲ್ಲೇ ಪಾಠ  ಕೇಳಿದ ವಿಧ್ಯಾರ್ಥಿಗಳು

ಕೋಲಾರ‌ದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಮಳೆಯಾಗ್ತಿರೊ ಪರಿಣಾಮ, ಕೋಲಾರ ನಗರದಲ್ಲಿನ  ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನೀರು ತುಂಬಿ, ಪಕ್ಕದಲ್ಲಿರೊ ಕುರುಬರಪೇಟೆ  ಶಾಲೆಯೊಳಕ್ಕೆ ನೀರು ನುಗ್ಗಿದೆ. ಇಲ್ಲಿ‌ನ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನನಿತ್ಯ ಮಳೆ ನೀರನ್ನು ಹೊರಕ್ಕೆ ಕಾಕಲಾಗದೆ ನೀರಲ್ಲೆ ಕುಳಿತು ಪಾಠ ಕೇಳುವಂತಾಗಿದೆ.  ಮಕ್ಕಳ ಪಾದಗಳು ನೀರಲ್ಲಿ ನೆನೆಯುತ್ತಿದ್ದು, ಶೀತ, ಹಾಗು ಹಲವು ಸಾಂಕ್ರಾಮಿಕ ರೋಗಗಳ ಭೀತಿಯು ಪೋಷಕರಲ್ಲಿ ಮನೆಮಾಡಿದೆ.

ಇದನ್ನೂ ಓದಿ: Karnataka Weather Report: ಆಕಾಶಕ್ಕೆ ರಂಧ್ರ ಬಿದ್ದಂತೆ ಸುರಿಯುತ್ತಿದೆ ಮಳೆ; ಇನ್ನೂ ಮೂರು ದಿನ ಅಲರ್ಟ್

ಮೌನವಾಗಿರುವ ಶಿಕ್ಷಣ ಇಲಾಖೆ

ಮಳೆಯಿಂದಾಗಿ ಶಾಲೆಯಲ್ಲಿದ್ದ ಪಠ್ಯಪುಸ್ತಕಗಳು ನೆನೆದು ಹೋಗಿದೆ. ಶಾಲೆಯ ಮೇಲ್ಚಾವಣಿ ಕೂಡಾ ನಿರಂತರವಾಗಿ ನೆನೆಯುತ್ತಿದ್ದು ಕುಸಿಯುವ ಆತಂಕವು ಮನೆಮಾಡಿದೆ,  ಕೂಗಳತೆ ದೂರದಲ್ಲೆ ಶಿಕ್ಷಣ ಇಲಾಖೆ ಕಚೇರಿಯಿದ್ದರು,  67 ಮಕ್ಕಳಿರೊ  ಶಾಲೆಯ ದುಸ್ತಿತಿಯನ್ನ ನೋಡಿಯು ನೋಡದಂತೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಎಸಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
Published by:Annappa Achari
First published: