ಕೊಪ್ಪಳದಲ್ಲೊಂದು ದಾರುಣ ಘಟನೆ; ವಿದ್ಯುತ್​ ತಂತಿ ತುಂಡಾಗಿ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು!

ತಂದೆ ಹನುಮಪ್ಪ ಬೀರಪ್ಪನವರ (30) ಮಕ್ಕಳಾದ ಪ್ರಿಯಾಂಕ (4) ಮತ್ತು ಬೀರಪ್ಪ (2) ಮೃತ ದುರ್ದೈವಿಗಳು.

MAshok Kumar | news18-kannada
Updated:September 13, 2019, 11:20 AM IST
ಕೊಪ್ಪಳದಲ್ಲೊಂದು ದಾರುಣ ಘಟನೆ; ವಿದ್ಯುತ್​ ತಂತಿ ತುಂಡಾಗಿ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು!
ವಿದ್ಯುತ್ ಅವಘಡಕ್ಕೆ ಮೃತಪಟ್ಟಿರುವ ತಂದೆ ಮಕ್ಕಳು.
MAshok Kumar | news18-kannada
Updated: September 13, 2019, 11:20 AM IST
ಕೊಪ್ಪಳ (ಸೆಪ್ಟೆಂಬರ್.13); ರಾಶಿ ಮಾಡಲು ಹೊಲಕ್ಕೆ ತೆರಳಿದ್ದ ವೇಳೆ ಉಂಟಾದ ವಿದ್ಯುತ್ ಅವಘಡಕ್ಕೆ ತಂದೆ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ತಂದೆ ಹನುಮಪ್ಪ ಬೀರಪ್ಪನವರ (30) ಮಕ್ಕಳಾದ ಪ್ರಿಯಾಂಕ (4) ಮತ್ತು ಬೀರಪ್ಪ (2) ಮೃತ ದುರ್ದೈವಿಗಳು.

ಕೊಪ್ಪಳದ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದ ನಿವಾಸಿಯಾದ ಹನುಮಪ್ಪ ಬೀರಪ್ಪ ಇಂದು ಬೆಳಗ್ಗೆ ಟ್ರಾಕ್ಟರ್ ಮೂಳಕ ರಾಶಿ ಮಾಡಲು ತಮ್ಮ ಹೊಲಕ್ಕೆ ತೆರಳಿದ್ದಾರೆ. ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಅವರ ಟ್ರಾಕ್ಟರ್ ಮೇಲೆ ಬಿದ್ದಿದೆ. ಪರಿಣಾಮ ತಂದೆ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ-ಬಸವರಾಜ ಕರುಗಲ್)

ಇದನ್ನೂ ಓದಿ : ಸಾರ್ವಜನಿಕರ ಗಮನಕ್ಕೆ!; ಮಿತಿಮೀರಿದ ಸೈಬರ್ ಕ್ರೈಂ ಹಾವಳಿ, 8 ತಿಂಗಳಲ್ಲಿ 7,700 ಪ್ರಕರಣ; ಅಪರಿಚಿತ ಕರೆಗಳ ಬಗ್ಗೆ ಇರಲಿ ಎಚ್ಚರ

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...