Real Hero: ಮುಸ್ಲಿಂ ಯುವಕನ ಜೀವ ಉಳಿಸಿದ ಹಿಂದೂ ಯುವಕ! ಮಾನವೀಯತೆಗಿಂತ ಮಿಗಿಲಾದ ಧರ್ಮ ಇಹುದೇನು?

ಹಿಂದೂ ಮುಸ್ಲಿಂ ಸಾಮರಸ್ಯ ಸಾರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಮಣ್ಯ ಸಮೀಪದ ಹರಿಹರಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ. ಇಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮುಸ್ಲಿಂ ಯುವಕನನ್ನು ಹಿಂದೂ ಯವಕನೊಬ್ಬ ಕಾಪಾಡಿದ್ದಾನೆ.

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಘಟನೆ ನಡೆದಿದೆ

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಘಟನೆ ನಡೆದಿದೆ

  • Share this:
ಮಂಗಳೂರು: ಕೋಮು ದ್ವೆೇಷದ (Communal Clash) ದಳ್ಳುರಿಗೆ ಸಿಲುಕಿ ಕರಾವಳಿ ಜಿಲ್ಲೆ (Coastal District) ದಕ್ಷಿಣ ಕನ್ನಡ (Dakshina Kannada) ಕೊತ ಕೊತನೆ ಕುದಿಯುತ್ತಿದೆ. ಮಸೂದ್ ಹತ್ಯೆ (Masood Murder), ಬಳಿಕ ಪ್ರವೀಣ್ ನೆಟ್ಟಾರು ಹತ್ಯೆ (Praveen Nettar Murder), ಅದಾಗುತ್ತಿದ್ದಂತೆ ಫಾಜಿಲ್ ಹತ್ಯೆ (Fazil Murder) ನಡೆಯಿತು. ಹೀಗೆ 10 ದಿನದಲ್ಲಿ ಹಿಂದೂ (Hindu) ಹಾಗೂ ಮುಸ್ಲಿಂ (Mulsim) ಯುವಕರ ಮೂರು ಕೊಲೆಗಳು ನಡೆದು, ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗಲೇ ಹಿಂದೂ ಮುಸ್ಲಿಂ ಸಾಮರಸ್ಯ (Hindu Muslim harmony) ಸಾರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಮಣ್ಯ ಸಮೀಪದ ಹರಿಹರಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ. ಇಲ್ಲಿ ಪ್ರವಾಹದಲ್ಲಿ (Flood) ಕೊಚ್ಚಿಕೊಂಡು ಹೋಗುತ್ತಿದ್ದ ಮುಸ್ಲಿಂ ಯುವಕನನ್ನು ಹಿಂದೂ ಯವಕನೊಬ್ಬ ಕಾಪಾಡಿದ್ದಾನೆ. ಈ ಮೂಲಕ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಅಂತ ಸಾರಿದ್ದಾನೆ.

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮುಸ್ಲಿಂ ಯುವಕ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಮುಂದುವರೆದಿದೆ. ಕಡಬ ತಾಲೂಕಿನ ಸುಬ್ರಮಣ್ಯ ಸಮೀಪದ ಹರಿಹರಪಳ್ಳತ್ತಡ್ಕ ಎಂಬಲ್ಲಿ ಮುಸ್ಲಿಂ ಯುವಕನೊಬ್ಬ ಆಯ ತಪ್ಪಿ ನದಿ ನೀರಿನ ಪ್ರವಾಹದಲ್ಲಿ ಬಿದ್ದಿದ್ದಾನೆ. ಇಲ್ಲಿನ ಸೇತುವೆಯೊಂದರಲ್ಲಿ ಸಿಲುಕಿದ್ದ ಮರವನ್ನು ತೆರವುಗೊಳಿಸುವ ಸಂದರ್ಭ ಕ್ರೈನ್ ಆಪರೇಟರ್ ಶರೀಫ್ ಎಂಬಾತ ಆಯತಪ್ಪಿ ನದಿಗೆ ಬಿದ್ದಿದ್ದಾನೆ.

ಮುಸ್ಲಿಂ ಯುವಕನನ್ನು ಹಿಂದೂ ಯುವಕ ರಕ್ಷಿಸಿದ್ದಾನೆ


ಮುಸ್ಲಿಂ ಯುವಕನನ್ನು ರಕ್ಷಿಸಿದ ಹಿಂದೂ ಯುವಕ

ಶರೀಫ್ ನೀರಿನಲ್ಲಿ ಬೀಳುತ್ತಿದ್ದಂತೆ ಅಲ್ಲಿದ್ದವರೆಲ್ಲ ಕಿರುಚಲು ಶುರು ಮಾಡಿದ್ದಾರೆ. ಶರೀಫ್ ಸಹ ಭಯದಿಂದ ಕೂಗಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಸೋಮಶೇಖರ್ ಕಟ್ಟೆಮನೆ ಎಂಬ ಯುವಕ ಅಪಾಯ ಲೆಕ್ಕಿಸದೇ ತಕ್ಷಣ ನದಿಗೆ ಹಾರಿ ಆ ಯುವಕನನ್ನು ರಕ್ಷಿಸಿದ್ದಾನೆ.

ಇದನ್ನೂ ಓದಿ: Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಸದ್ಯ ಕೋಮು ಸಂಘರ್ಷದಿಂದ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ  ಪ್ರಾಣವನ್ನೇ ಪಣಕ್ಕಿಟ್ಟು ಅನ್ಯ ಧರ್ಮದ‌ ವ್ಯಕ್ತಿಯೊಬ್ಬರನ್ನು ರಕ್ಷಣೆ ಮಾಡಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಾಣದ ಹಂಗು ತೊರೆದು ರಕ್ಷಣೆ


ಮಹಾಮಳೆಗೆ ತತ್ತರಿಸಿದ ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆ ಫಟ್ಟ ಪ್ರದೇಶದ ತಪ್ಪಲಿನಲ್ಲಿರುವ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು, ಬಾಳುಗೋಡು, ಹರಿಹರಪಳ್ಳತ್ತಡ್ಕ ಮೊದಲಾದ ಭಾಗದಲ್ಲಿ ಭಾರೀ ಅನಾಹುತವನ್ನು ಸೃಷ್ಟಿಸಿದೆ. ಕಲ್ಮಕಾರು, ಕಡಮಕಲ್ಲು ಮೊದಲಾದ ಬೆಟ್ಟಗಳಲ್ಲಿ ಉಂಟಾದ ಭಾರೀ‌ ಮೇಘಸ್ಪೋಟದಿಂದಾಗಿ ಈ ಭಾಗದ ಹಲವು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಮಳೆಯ ರೌದ್ರನರ್ತನಕ್ಕೆ ಎರಡು ಬಲಿ

ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಜರಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ದಕ್ಷಿಣ ಕನ್ನಡ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪಕ್ಕದಲ್ಲಿ ಹರಿಯುವ ದರ್ಪಣ ತೀರ್ಥ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿ ಎನ್ನುವಂತೆ ರೌದ್ರಾವತಾರದಲ್ಲಿ ಹರಿದ ಪರಿಣಾಮ ನದಿ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಭಾಗಶಃ ಮುಳುಗಿಸಿದೆ.

ಇದನ್ನೂ ಓದಿ: Karnataka Dams Water Level: ಹೆಚ್ಚಾಗ್ತಿದೆ ಮಳೆ, ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ - ನಿಮ್ಮ ಊರಿನ ಡ್ಯಾಂ ಮಟ್ಟ ಹೇಗಿದೆ ನೋಡಿ

ಜಿಲ್ಲಾಧಿಕಾರಿಯವರಿಂದ ಪರಿಶೀಲನೆ

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾನಿಯ ಖುದ್ದು ಪರಿಶೀಲನೆಯನ್ನು ನಡೆಸಿದ್ದು, ಹಾನಿಗೊಳಗಾದ ವರದಿಯನ್ನು ತಕ್ಷಣ ತಯಾರಿಸಿ ತನ್ನ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿ ಬಂದ ತಕ್ಷಣವೇ ಸಂತ್ರಸ್ತರಿಗೆ ಪರಿಹಾರವನ್ನು ಯಾವುದೇ ತಡ ಮಾಡದೆ ವಿತರಿಸಲಾಗುವುದು ಎಂದರು. 
Published by:Annappa Achari
First published: