ಒಂದೂವರೆ ಎಕರೆ ಕಬ್ಬು ನಾಶ ಮಾಡಿ ಸಿಎಂಗೆ ತಲುಪುವವರೆಗೆ ವಿಡಿಯೋ ಶೇರ್ ಮಾಡಿ ಎಂದ ರೈತ; ಕಾರಣವೇನು?

ನಮ್ಮ ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದೇ ಒಂದು ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿ ಇದೆ. ಆದರೆ ಅದು ಇನ್ನೂ ಸಹ ಕಾರ್ಯ ನಿರ್ವಹಿಸುತ್ತಿಲ್ಲ. ಪಕ್ಕದ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಶುಗರ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಅಲ್ಲಿನ ಮ್ಯಾನೇಜರ್​ ನಮ್ಮ ತಾಲೂಕಿನ ರೈತರ ಕಬ್ಬನ್ನು ತೆಗೆದುಕೊಳ್ಳಲು ಸಿದ್ದವಿಲ್ಲ. ಕೆ.ಆರ್.ಪೇಟೆ ತಾಲೂಕಿನ ರೈತರ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಫ್ಯಾಕ್ಟರಿಗೆ ಬರುವುದರಿಂದ ನಿಮ್ಮ ತಾಲೂಕಿನ ಕಬ್ಬನ್ನು ತೆಗೆದುಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ-ರೈತನ ಮಾತು

news18-kannada
Updated:February 23, 2020, 1:22 PM IST
ಒಂದೂವರೆ ಎಕರೆ ಕಬ್ಬು ನಾಶ ಮಾಡಿ ಸಿಎಂಗೆ ತಲುಪುವವರೆಗೆ ವಿಡಿಯೋ ಶೇರ್ ಮಾಡಿ ಎಂದ ರೈತ; ಕಾರಣವೇನು?
ಕಬ್ಬಿನ ಬೆಳೆ ನಾಶ ಮಾಡಿದ ರೈತ
  • Share this:
ಹಾಸನ(ಫೆ.23): ರೈತ ಕಷ್ಟಪಟ್ಟು ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದಾಗ ಆತ ಬೇಸತ್ತು ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಸರಿಯಾದ ಮಾರುಕಟ್ಟೆ, ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ಹಲವಾರು ರೈತ ಸಂಘಟನೆಗಳು ಈ ಮೊದಲಿನಿಂದಲೂ ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಾ ಬಂದಿವೆ. ಆದರೂ ಸಹ ಅನ್ನದಾತರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಎಂಬ ಆಕ್ರೋಶ ಮಾತ್ರ ರೈತ ಸಂಘಟನೆಗಳದ್ದು. ಈ ನಡುವೆಯೇ ಹಾಸನದಲ್ಲಿ ಓರ್ವ ರೈತ ತಾನು ಬೆಳೆದ ಕಬ್ಬಿನ ಬೆಳೆಗೆ ಕಾರ್ಖಾನೆ ಸಿಗದೆ ಒಂದೂವರೆ ಎಕರೆ ಕಬ್ಬನ್ನು ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕಬ್ಬನ್ನು ನಾಶ ಮಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಫೇಸ್​ಬುಕ್​ನಲ್ಲಿ ಹರಿಯಬಿಟ್ಟಿದ್ದಾನೆ. ಜೊತೆಗೆ ಮುಖ್ಯಮಂತ್ರಿ ಬಿಎಸ್‌.ಯಡಿಯೂರಪ್ಪನವರಿಗೆ ತಲುಪವವರೆಗೂ ವಿಡಿಯೋ ಶೇರ್ ಮಾಡಿ ಎಂದು ಕೋರಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಬಿಳ್ತಿ ಗ್ರಾಮದ  ದಿನೇಶ್‌ ಬೆಳೆದ ಅಷ್ಟೂ ಕಬ್ಬನ್ನು ನಾಶ ಮಾಡಿದ ರೈತ. ಇವರು ಸಾಲ ಮಾಡಿ ಕಬ್ಬು ಬೆಳೆದಿದ್ದರು. ಆದರೆ ಕಟಾವಿಗೆ ಬಂದ ಕಬ್ಬಿಗೆ ಫ್ಯಾಕ್ಟರಿ ಸಿಗದ ಹಿನ್ನೆಲೆ, ಇವರು ಬೇರೆ ದಾರಿ ಇಲ್ಲದೆ ಕಬ್ಬು ಕತ್ತರಿಸಿ ಹಾಕಿದ್ದಾರೆ.

ಚೀನಾದಲ್ಲಿ ಸಾವಿನ ಸಂಖ್ಯೆ 2,442ಕ್ಕೆ ಏರಿಕೆ; ನಾಲ್ವರು ಭಾರತೀಯರಲ್ಲಿ ಕೊರೊನಾ ಸೋಂಕು

"ನಮ್ಮ ತಂದೆ ರಾಮಚಂದ್ರ. ನಮಗೆ ಕೃಷಿ ಬಿಟ್ಟು ಬೇರೇನೋ ಗೊತ್ತಿಲ್ಲ. ನಮಗೆ ಒಟ್ಟು 3 ಎಕರೆ ಜಮೀನಿದ್ದು, ಒಂದೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದೆವು.  ನಮ್ಮ ಚನ್ನರಾಯಪಟ್ಟಣ ತಾಲೂಕಿನಲ್ಲಿ ಒಂದೇ ಒಂದು ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿ ಇದೆ. ಆದರೆ ಅದು ಇನ್ನೂ ಸಹ ಕಾರ್ಯ ನಿರ್ವಹಿಸುತ್ತಿಲ್ಲ. ಪಕ್ಕದ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಶುಗರ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಅಲ್ಲಿನ ಮ್ಯಾನೇಜರ್​ ನಮ್ಮ ತಾಲೂಕಿನ ರೈತರ ಕಬ್ಬನ್ನು ತೆಗೆದುಕೊಳ್ಳಲು ಸಿದ್ದವಿಲ್ಲ. ಕೆ.ಆರ್.ಪೇಟೆ ತಾಲೂಕಿನ ರೈತರ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಫ್ಯಾಕ್ಟರಿಗೆ ಬರುವುದರಿಂದ ನಿಮ್ಮ ತಾಲೂಕಿನ ಕಬ್ಬನ್ನು ತೆಗೆದುಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಮಗೆ ಬೇರೆ ವಿಧಿ ಇಲ್ಲ. ನಮ್ಮ ತಾಲೂಕಿನ ಫ್ಯಾಕ್ಟರಿಗೂ ಕಬ್ಬು ಸಾಗಿಸಲಾಗದೆ, ಬೇರೆ ಫ್ಯಾಕ್ಟರಿಗಳು ಕಬ್ಬು ಸ್ವೀಕರಿಸದ ಹಿನ್ನೆಲೆ, ಬೇರೆ ದಾರಿ ಇಲ್ಲದೆ ಕಬ್ಬು ನಾಶ ಮಾಡಿದ್ದೇವೆ.  ಸುಮಾರು 1 ವರ್ಷ 8 ತಿಂಗಳು ಬೆಳೆದಿದ್ದ ಕಬ್ಬು ಇದು. ಮನಸಿಗೆ ತುಂಬಾ ನೋವಾಗಿ, ಬೇರೆ ಯಾವ ಮಾರ್ಗವೂ ಇಲ್ಲದೇ ಒಂದೂವರೆ ಎಕರೆ ಕಬ್ಬಿನ ಬೆಳೆಯನ್ನು ನಾಶ ಮಾಡಿದ್ದೇನೆ," ಎಂದು ದುಃಖಿತರಾದರು.


ಟ್ರ್ಯಾಕ್ಟರ್‌ನಲ್ಲಿ ಉತ್ತು ಒಂದೂವರೆ ಕಬ್ಬಿನ ಬೆಳೆಯನ್ನು ನಾಶ ಮಾಡಿದ್ದಾರೆ. ಕಬ್ಬನ್ನು ನಾಶ ಮಾಡಲು ಟ್ರ್ಯಾಕ್ಟರ್‌ಗೆ ಸುಮಾರು 20 ಸಾವಿರ ಖರ್ಚು ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗೆ ಸಕಾಲಕ್ಕೆ ಕಬ್ಬು ಸಾಗಿಸಲು ಸಾಧ್ಯವಾಗದೇ ಫೇಸ್‌ಬುಕ್‌ನಲ್ಲಿ ನೋವು ತೋಡಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಲಂಚ ನೀಡಿದರೂ ಕಬ್ಬು ಕಟಾವು ಮಾಡಲು ಸಾಧ್ಯ ಆಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.  ಫೇಸ್‌ಬುಕ್ ಪೇಜ್‌ನಲ್ಲಿ ಕಬ್ಬನ್ನು ನಾಶ ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿ, ಈ ವಿಡಿಯೋ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲುಪುವವರೆಗೂ ಶೇರ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಅಕ್ರಮ ಸಂಬಂಧಕ್ಕಾಗಿ ಹೆಂಡತಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ; ವಿಷಯ ತಿಳಿದು ಪ್ರಿಯತಮೆ ಸಾವು!

 
First published:February 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading