ದಿಢೀರ್ ನಿಂತ ಮಾತು; ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ ಶ್ರೇಷ್ಠ ಶಿಕ್ಷಕ ಮತ್ತವರ ಕುಟುಂಬ

ಒಟ್ನಲ್ಲಿ ವಿಧಿ ಆಡಿದ ಆಟ, ಶಿಕ್ಷಣ ಇಲಾಖೆ ನಡೆಯಿಂದ ಈ ಶಿಕ್ಷಕಣ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚಿತ್ತುಕೊಂಡು ಶಿಕ್ಷಕಣ ಸಂಬಳ ನೀಡಬೇಕಾಗಿದೆ.

ಶ್ರೇಷ್ಠ ಶಿಕ್ಷಕ

ಶ್ರೇಷ್ಠ ಶಿಕ್ಷಕ

 • Share this:
  ಚಿಕ್ಕೋಡಿ(ಜ.23): ಆತ ಜನ ಮೆಚ್ಚಿದ ಶಿಕ್ಷಕ. ಆ ಶಿಕ್ಷಕ ಅಂದರೆ ಎಲ್ಲಾ ವಿಧ್ಯಾರ್ಥಿಗಳು ಅಚ್ಚು ಮೆಚ್ಚು. ಹೆಂಡತಿ ಮೂರು ಮಕ್ಕಳು ಜೊತೆಗೆ ಒಳ್ಳೆಯ ಸಂಸಾರ ಕೂಡ ನಡೆಸುತ್ತಿದ್ದ. ಆದರೀಗ ಅಂತಹ ಶಿಕ್ಷಕಣ ಬಾಳಿನಲ್ಲಿ ವಿಧಿ ಬೇರೆ ಆಟವನ್ನೇ ಆಡಿದ ಪರಿಣಾಮ ಇಡೀ ಕುಟುಂಬ ಬೀದಿಗೆ ಬಂದಿದೆ. 

  ಇವರ ಹೆಸರು ಚಂದ್ರಶೇಖರ ಭೋಜನ್ನವರ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದ ನಿವಾಸಿ. ಕಳೆದ 20 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಳ್ಳೆಯ ಶಿಕ್ಷಕನಾಗಿ ಜನ ಮೆಚ್ಚಿದ ಶಿಕ್ಷಕ ಎಂಬ ಪ್ರಶಸ್ತಿ ಪಡೆದ ಇವರ ಜೀವನದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು.

  ಆದರೆ, ಇತ್ತೀಚೆಗೆ ಕಳೆದ ಆರು ತಿಂಗಳ ಹಿಂದೆ ವಿಧಿ ಈ ಶಿಕ್ಷಕನ ಬಾಳಿನಲ್ಲಿ ಬೇರೆ ಆಟವನ್ನೇ ಆಡಿದೆ. ಪಾರ್ಶ್ವವಾಯು ಖಾಯಿಲೆಗೆ ತುತ್ತಾದ ಪರಿಣಾಮ ಇವರ ಮಾತುಗಳೇ ಹೊರಟು ಹೋಗಿವೆ. ದೈಹಿಕವಾಗಿ ಚೆನ್ನಾಗಿದ್ದರೂ ಮಾತು ಬಾರದ ಕಾರಣ ಇವರಿಗೆ ಶಾಲೆಗೆ ಬಾರದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ ಶಿಕ್ಷಕ ಚಂದ್ರಶೇಖರರ ಸಂಬಳವನ್ನು ತಡೆ ಹಿಡಿದ್ದಾರೆ.

  ಸದ್ಯ ಸಂಬಳವಿಲ್ಲದೆ ಶಿಕ್ಷಕರ ಕುಟುಂಬ ಪರದಾಡುವಂತಾಗಿದೆ. ಮೊದಲೇ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ಈ ಕುಟುಂಬ ಸಂಬಳದ ಮೇಲೆ ಆಶ್ರಯ ಪಡೆದಿತ್ತು. ಇದೀಗ ಶಿಕ್ಷಣ ಇಲಾಖೆ ಸಂಬಳ ತಡೆದ ನಿರ್ಧಾರದಿಂದ ಈ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಮೂರು ಮಕ್ಕಳ ಶಾಲಾ ಖರ್ಚು, ಗಂಡನ ಆಸ್ಪತ್ರೆ ಖರ್ಚು ಭರಿಸಲಾಗದೆ ಶಿಕ್ಷಕಣ ಪತ್ನಿ ಸಾಯುವಂತಾಗಿದೆ. ಶಿಕ್ಷಕನ ಹೆಂಡತಿ ಶಾರದಾ ತನ್ನ ಗಂಡನನ್ನು ಕರೆದುಕೊಂಡು ಶಿಕ್ಷಣ ಇಲಾಖೆ ಕಛೇರಿಗಳಿಗೆ ಎಷ್ಟೇ ಅಲೆದಾಡಿ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನ ಮಾತ್ರ ಆಗುತ್ತಿಲ್ಲ.

  ಇದನ್ನೂ ಓದಿ: ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ: ಬಿಜೆಪಿ ಅಭ್ಯರ್ಥಿ ಕಪಿಲ್​​ ಮಿಶ್ರಾ

  ಇನ್ನು ಸರ್ಕಾರಿ ನಿಯಮದ ಪ್ರಕಾರ ಯಾವುದೇ ನೌಕರ ಖಾಯಿಲೆಯಿಂದ ಬಳಲುತ್ತಿದ್ದರೆ ಅಂತವರಿಗೆ ಗಳಿಕೆ ರಜೆ ಅಥವಾ ಅನಾರೋಗ್ಯದ ರಜೆ ಹಾಕಿ ಸಂಬಳ ಕೊಡಬೇಕು. ಆದರೆ, ಇದಾವುದನ್ನು ಮಾಡದ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾ ಏಕಿ ಶಿಕ್ಷಕಣ ಸಂಬಳವನ್ನ ತಡೆ ಹಿಡಿದಿದ್ದಾರೆ. ಇನ್ನು ಈ ಕುರಿತು ಅಥಣಿ ಕ್ಷೇತ್ರ ಶಿಕ್ಷಣ ಅಧಿಕಾರಿಯನ್ನ ಕೇಳಿದರೆ, ಕೆಲಸ ಮಾಡಿಲ್ಲಾ ಅಂದರೆ ಸಂಬಳ ಇಲ್ಲ. ಅವರು ಭೋದನೆ ಮಾಡುವ ಸಾಮರ್ಥ್ಯ ಹೊಂದಿಲ್ಲ. ಹಾಗಾಗಿ ಅವರ ಸಂಬಳ ತಡೆ ಹಿಡಿದಿದ್ದಾಗಿ ಹೇಳುತ್ತಾರೆ.

  ಒಟ್ನಲ್ಲಿ ವಿಧಿ ಆಡಿದ ಆಟ, ಶಿಕ್ಷಣ ಇಲಾಖೆ ನಡೆಯಿಂದ ಈ ಶಿಕ್ಷಕಣ ಕುಟುಂಬ ಈಗ ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚಿತ್ತುಕೊಂಡು ಶಿಕ್ಷಕಣ ಸಂಬಳ ನೀಡಬೇಕಾಗಿದೆ.

   

  (ವರದಿ: ಲೋಹಿತ್ ಶಿರೋಳ ಚಿಕ್ಕೋಡಿ)
  First published: