• Home
  • »
  • News
  • »
  • state
  • »
  • Crime News: ಬೆಂಗಳೂರಿನಲ್ಲೊಂದು ಬಂಟಿ ಔರ್ ಬಬ್ಲಿ ಜೋಡಿ! ಈ ಕಳ್ಳ ಪ್ರೇಮಿಗಳ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

Crime News: ಬೆಂಗಳೂರಿನಲ್ಲೊಂದು ಬಂಟಿ ಔರ್ ಬಬ್ಲಿ ಜೋಡಿ! ಈ ಕಳ್ಳ ಪ್ರೇಮಿಗಳ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಪ್ರೇಮಿಗಳಿಂದ ವಶಪಡಿಸಿಕೊಂಡ ವಸ್ತು

ಪ್ರೇಮಿಗಳಿಂದ ವಶಪಡಿಸಿಕೊಂಡ ವಸ್ತು

ಎಲ್ಲೆ ಹುಡುಕಿದ್ರೂ ಆ ಪ್ರಿಯತಮನ ಬಳಿ ನಯಾ ಪೈಸೆಯೂ ಇರಲಿಲ್ಲ. ಹೀಗಾಗಿ ಆತನಿಗೆ ಧೈರ್ಯ ತುಂಬಿದ ಪ್ರೇಯಸಿ ಖತರ್ನಾಕ್ ಐಡಿಯಾ ಕೊಟ್ಟಿದ್ದಳು. ಆತನೂ ಆಕೆ ಹೇಳಿದಂತೆ ಮಾಡಿದ್ದ. ಇದೀಗ ಈ ಬಂಟಿ ಔರ್ ಬಬ್ಲಿಯ ಕಳ್ಳ ಜೋಡಿ ಪೊಲೀಸರ ಬಲೆಗೆ ಬಿದ್ದಿದೆ.

  • Share this:

ಬೆಂಗಳೂರು: ಪ್ರೇಮಿಗಳು (Lovers) ಅಂದ್ರೆ ಅಲ್ಲಿ ಇಲ್ಲಿ ಸುತ್ತಾಡೋದು ಕಾಮನ್. ಸಿನಿಮಾ (Cinema), ಪಾರ್ಕ್ (Park), ಐಸ್‌ ಕ್ರೀಮ್ ಪಾರ್ಲರ್ (Ice Cream Parlour), ಕಾಫಿ ಡೇ (Coffee Day) ಅಂತ ಓಡಾಡೋದು ಸಾಮಾನ್ಯ. ಆದ್ರೆ ಹೀಗೆ ಪ್ರೇಮಿಗಳು ಕೈಕೈ ಹಿಡ್ಕೊಂಡು, ಮನಸ್ಸು ಬಂದ ಕಡೆ ಸುತ್ತುತ್ತಾ, ಬೇಕಾದ್ದು ತಿನ್ನಬೇಕು ಅಂದ್ರೆ ಜೇಬಿನ ತುಂಬಾ ಹಣ (Money) ಇರಬೇಕು. ಇದೇ ಈ ಪ್ರೇಮಿಗಳ ಪಾಲಿಗೆ ಗಗನ ಕುಸುಮವಾಗಿತ್ತು. ಎಲ್ಲೆ ಹುಡುಕಿದ್ರೂ ಆ ಪ್ರಿಯತಮನ ಬಳಿ ನಯಾ ಪೈಸೆಯೂ ಇರಲಿಲ್ಲ. ಹೀಗಾಗಿ ಆತನಿಗೆ ಧೈರ್ಯ ತುಂಬಿದ ಪ್ರೇಯಸಿ ಖತರ್ನಾಕ್ ಐಡಿಯಾ (Idea) ಕೊಟ್ಟಿದ್ದಳು. ಆತನೂ ಆಕೆ ಹೇಳಿದಂತೆ ಮಾಡಿದ್ದ. ಇದೀಗ ಈ ಬಂಟಿ ಔರ್ ಬಬ್ಲಿಯ (Bunti Our Babli) ಕಳ್ಳ ಜೋಡಿ ಪೊಲೀಸರ ಬಲೆಗೆ ಬಿದ್ದಿದೆ.


ಪೊಲೀಸರ ಬಲೆಗೆ ಬಿದ್ದ ಕಳ್ಳ ಬಂಟಿ ಔರ್ ಬಬ್ಲಿ ಜೋಡಿ


ಲವ್ವರ್ ಖರ್ಚಿಗೆ ಹಣವಿಲ್ಲ ಎಂದಿದ್ದಕ್ಕೆ ಪ್ರಿಯತಮೆಯೊಬ್ಬಳು ತನ್ನ ದೊಡ್ಡಪ್ಪನ ಮನೆಯಲ್ಲಿ ಕಳ್ಳತನ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಕಾಂ ಓದುತ್ತಿರುವ 19 ವರ್ಷದ ದೀಕ್ಷಿತಾ ಹಾಗೂ ಮೆಡಿಕಲ್ ಓದುತ್ತಿದ್ದ 19 ವರ್ಷದ ಮಧು ಎಂಬುವರೇ ಪೊಲೀಸರ ಬಲೆಗೆ ಬಿದ್ದ ಕಳ್ಳ ಪ್ರೇಮಿಗಳು.


ದೊಡ್ಡಪ್ಪನ ಮನೆಯಲ್ಲಿ ಕಳ್ಳತನ ಮಾಡಿಸಿದ್ದ ಯುವತಿ


ಖರ್ಚು ಮಾಡಲು ತನ್ನ ಹತ್ತಿರ ಹಣ ಇಲ್ಲ ಅಂತ ಪ್ರೇಮಿ ಮಧು ಹೇಳಿದ್ದ. ಇದಕ್ಕಾಗಿ ತನ್ನ ದೊಡ್ಡಪ್ಪ ತಿಮ್ಮೇಗೌಡ ಎಂಬುವರ ಮನೆಯಲ್ಲಿ ಕಳ್ಳತನ ಮಾಡುವಂತೆ ದೀಕ್ಷಿತಾ ಐಡಿಯಾ ಕೊಟ್ಟಿದ್ದಳು ಎನ್ನಲಾಗಿದೆ. ಅದರಂತೆ ಬೆಂಗಳೂರು ಉತ್ತರ ತಾಲೂಕಿನ ನೆಲಗದಿರನಹಳ್ಳಿ ಗ್ರಾಮದಲ್ಲಿಇರುವ ದೀಕ್ಷಿತಾ ದೊಡ್ಡಪ್ಪ ತಿಮ್ಮೇಗೌಡ ಎಂಬುವರ ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು.


ಇದನ್ನೂ ಓದಿ: Robbery: ತನ್ನ ಪ್ರೇಯಸಿ ಮನೆಯಲ್ಲೇ ದರೋಡೆ ಮಾಡಿದ ಪ್ರಿಯಕರ! ಕಾರಣ ಕೇಳಿದ್ರೆ ನಗುವುದೋ, ಅಳುವುದೋ ಗೊತ್ತಾಗಲ್ಲ


ಮಾಟಮಂತ್ರದ ವಸ್ತು ಮನೆಯಲ್ಲಿಟ್ಟು ಕಳ್ಳತನ


ಕಳ್ಳ ಪ್ರೇಮಿಗಳು ಮಾಟ ಮಂತ್ರದ ವಸ್ತುಗಳನ್ನು ಮನೆಯ ಕಾಂಪೌಂಡ್ ನಲ್ಲಿ ಇಟ್ಟು, ದೊಡ್ಡಪ್ಪನ ಮನೆಯವರ ಗಮನ ಬೇರೆಡೆ ಸೆಳೆದಿದ್ರು. ಮಾಟ ಮಂತ್ರದ ವಸ್ತುಗಳನ್ನು ಶುಚಿಗೊಳಿಸುವ ವೇಳೆ ಪ್ರೇಮಿ ಮಧು ಮನೆಯ ಮಹಡಿಗೆ ತೆರಳಿದ್ದ. ಆ ವೇಳೆ ಮನೆಯಲ್ಲಿದ್ದ 90 ಸಾವಿರ ನಗದು ಹಣ, 200 ಗ್ರಾಂ ಚಿನ್ನಾಭರಣಗಳನ್ನ ದೋಚಿ, ಎಸ್ಕೇಪ್ ಆಗಿದ್ದ.


ಪೀಣ್ಯ ಪೊಲೀಸರಿಂದ ತನಿಖೆ


ಈ ಬಗ್ಗೆ ದೀಕ್ಷಿತಾ ದೊಡ್ಡಪ್ಪ ತಿಮ್ಮೇಗೌಡ ಮನೆಯವರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೀಣ್ಯಾ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನೆ ನಡೆದ ದಿನ ಅಪರಿಚಿತನೊಬ್ಬ ಯುವಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ. ಈ ಸಿಸಿ ಕ್ಯಾಮರಾ ಜಾಡು ಹಿಡಿದು, ಮೊಬೈಲ್ ಟವರ್ ಲೋಕೇಷನ್ ಮೇಲೆ ಪೊಲೀಸರು ಆರೋಪಿ ಮಧುವನ್ನು ಬಂಧಿಸಿದ್ದಾರೆ.


ಪ್ರಿಯತಮೆ ಹೆಸರು ಹೇಳಿದ ಪ್ರಿಯಕರ


ಈ ವೇಳೆ ಪೊಲೀಸರು ಮಧುನನ್ನು ವಿಚಾರಣೆ ನಡೆಸಿದ್ದಾರೆ. ಪೊಲೀಸ್ ತನಿಖೆ ವೇಳೆ ಲವ್ವರ್ ದೀಕ್ಷಿತಾ ಅವಳದ್ದೇ ಇದರಲ್ಲಿ ಮಾಸ್ಟರ್ ಮೈಂಡ್ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯ ಪ್ರಿಯತಮ ಮಧು ಜೊತೆ ಪ್ರೇಯಸಿ ದಿಕ್ಷಿತಾಳನ್ನೂ ಅರೆಸ್ಟ್ ಮಾಡಲಾಗಿದೆ.


ಇದನ್ನೂ ಓದಿ: Accident: ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರ ದುರ್ಮರಣ


ಆರೋಪಿಗಳಿಂದ ಚಿನ್ನಾಭರಣ ಜಪ್ತಿ


ಆರೋಪಿಗಳ ಬಳಿಯಿಂದ 30 ಸಾವಿರ ನಗದು ಹಣ, 200 ಗ್ರಾಂ ನಷ್ಟು ಚಿನ್ನಾಭರಣಗಳು ಜಪ್ತಿ ಮಾಡಲಾಗಿದೆ. ಇನ್ನು ಈ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Annappa Achari
First published: