ರಾಯಚೂರು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್; ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು

ಮೃತ ವಿದ್ಯಾರ್ಥಿನಿ ಏಪ್ರಿಲ್.15 ರಂದು ಮುಂಜಾನೆ ತನ್ನ ತಾಯಿಗೆ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದಳು ನಾಪತ್ತೆಯಾಗಿದ್ದಳು. ಮಗಳು ಮನೆಗೆ ಬಾರದಿದ್ದಾಗ ಸ್ವಾಭಾವಿಕವಾಗಿ ಪೋಷಕರಿಗೆ ಆತಂಕ ಶುರುವಾಗಿದೆ ಆದರೆ, ಎರಡು ದಿನಗಳ ನಂತರೆ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

MAshok Kumar | news18
Updated:April 20, 2019, 8:55 PM IST
ರಾಯಚೂರು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್; ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು
ಆರೋಪಿ ಸುದರ್ಶನ್.
  • News18
  • Last Updated: April 20, 2019, 8:55 PM IST
  • Share this:
ರಾಯಚೂರು (ಏ.19) : ನಗರದ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿನಿಯ ಸಹಪಾಠಿ ಸುದರ್ಶನ್ ಯಾದವ್ ಎಂಬವನನ್ನು ಗುರುವಾರ ರಾತ್ರಿ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಸುದರ್ಶನ್ ಅದೇ ಕಾಲೇಜಿನಲ್ಲೆ ವ್ಯಾಸಾಂಗ ಮಾಡುತ್ತಿದ್ದು ಮೃತ ವಿದ್ಯಾರ್ಥಿನಿಯ ಗೆಳೆಯ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಮಗಳನ್ನು ಆರೋಪಿಗಳು ಅತ್ಯಾಚಾರ ಮಾಡಿ ನಂತರ ಆತ್ಮಹತ್ಯೆ ಎಂದು ಬಿಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಮೃತಳ ತಾಯಿ ನೀಡಿದ ದೂರಿನ ಅನ್ವಯ ನಗರದ ನೇತಾಜಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಅನುಮಾನದ ಮೇಲೆ ಆರೋಪಿ ಸುದರ್ಶನ್​ ನನ್ನು ನ್ಯಾಯಾಂಗ ಬಂಧನಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಬೀದಿಗಿಳಿದು ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು

ಮೃತದೇಹದ ಮರೋಣತ್ತರ ಪರೀಕ್ಷೆಯ ವಿವರ ಇನ್ನೆರಡು ದಿನಗಳಲ್ಲಿ ಸಿಗಲಿದ್ದು ಆನಂತರವೆ ಪ್ರಕರಣ ಕುರಿತು ಸ್ಪಷ್ಟತೆ ದೊರೆಯಲಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ. ಆರೋಪಿ ಸುದರ್ಶನ್ ವಿಚಾರಣೆಯೂ ನಡೆಯುತ್ತಿದ್ದು, ಶೀಘ್ರದಲ್ಲಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ಎಪ್ರಿಲ್. 16 ರಂದು ರಾಯಚೂರಿನ ಮಾಣಿಕ್ ಪ್ರಭು ದೇವಸ್ಥಾನದ ಗುಡ್ಡದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಹುತೇಕ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು.

: ಕಾಶ್ಮಿರದ ಕತುವಾದಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ; ರೊಚ್ಚಿಗೇಳುತ್ತಿದೆ ರಾಷ್ಟ್ರ

ಮೃತ ವಿದ್ಯಾರ್ಥಿನಿ ಏಪ್ರಿಲ್.15 ರಂದು ಮುಂಜಾನೆ ತನ್ನ ತಾಯಿಗೆ ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದಳು ನಾಪತ್ತೆಯಾಗಿದ್ದಳು. ಮಗಳು ಮನೆಗೆ ಬಾರದಿದ್ದಾಗ ಸ್ವಾಭಾವಿಕವಾಗಿ ಪೋಷಕರಿಗೆ ಆತಂಕ ಶುರುವಾಗಿದೆ ಆದರೆ, ಎರಡು ದಿನಗಳ ನಂತರೆ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಆರಂಭದಲ್ಲಿ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ ದೇಹದ ಸುಟ್ಟ ಕಲೆಗಳನ್ನು ಗುರುತಿಸಿದ್ದ ಪೋಷಕರಿಗೆ ಮಗಳ ಕೊಲೆಯಾಗಿರುವ ಶಂಕೆ ಮೂಡಿದೆ. ತಂದೆ ನಾಗರಾಜ್ ಹಾಗೂ ಮೃತಳ ತಾಯಿ ಈ ಕುರಿತು ನೇತಾಜಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟಿಸಿದ್ದರು. ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಪೊಲೀಸರು ಕೊನೆಗೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

First published:April 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading