• Home
  • »
  • News
  • »
  • state
  • »
  • Transgenders Love: ಆಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದವ ಹುಡುಗನೇ ಅಲ್ವಂತೆ! 4 ವರ್ಷದ ಲವ್‌ಗೆ 'ಮಂಗಳ' ಹಾಡಿದ ಯುವತಿ

Transgenders Love: ಆಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದವ ಹುಡುಗನೇ ಅಲ್ವಂತೆ! 4 ವರ್ಷದ ಲವ್‌ಗೆ 'ಮಂಗಳ' ಹಾಡಿದ ಯುವತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುವತಿಯ ಪೋಷಕರು ದೂರು ದಾಖಲಿಸುತ್ತಿದ್ದಂತೆ ಪೊಲೀಸರು ಯುವಕನ ವಿಳಾಸ ಪತ್ತೆ ಹಚ್ಚಿದ್ದಾರೆ. ಬಳಿಕ ಆತನ ಮನೆಗೆ ತೆರಳಿದ್ದಾರೆ. ಅಲ್ಲಿ ಸ್ಪೋಟಕ ವಿಚಾಕರವೊಂದು ಗೊತ್ತಾಗಿದೆ. ಇದರಿಂದ ಯುವತಿ ಹಾಗೂ ಆಕೆಯ ಪೋಷರಷ್ಟೇ ಅಲ್ಲ, ಪೊಲೀಸರೂ ಕೂಡ ಆಘಾತಕ್ಕೆ ಒಳಗಾಗಿದ್ದಾರೆ.

  • Share this:

ಬಂಟ್ವಾಳ, ದಕ್ಷಿಣ ಕನ್ನಡ: ಆಕೆ ಮೊಗ್ಗಿನ ಮನಸ್ಸಿನ ಹದಿಹರೆಯದ ಹುಡುಗಿ (Young Girl). ಕತ್ತೆಯೂ (Donkey) ಸುಂದರವಾಗಿ ಕಾಣೋ ವಯಸ್ಸು ಅಂತಾರಲ್ಲ ಆ ರೀತಿ! ಆಗ ಆಕೆ ಫೇಸ್‌ಬುಕ್‌ನಲ್ಲಿ (Facebook) ಯುವಕನೊಬ್ಬನ (Boy) ಜೊತೆ ಸ್ನೇಹದಲ್ಲಿ (Friendship) ತೊಡಗಿದ್ದಳು. ಬರುಬರುತ್ತಾ ಚಾಟಿಂಗ್ (Chatting) ಶುರುವಾಯ್ತು. ಅದು ಜೋರಾಗ್ತಿದ್ದಂತೆ ಪ್ರೀತಿ (Love) ಮೊಳಕೆ ಒಡೆಯಿತು. ಮುಖ (Face) ನೋಡದೇ ಬರೋಬ್ಬರಿ 4 ವರ್ಷ ಒಬ್ಬರನ್ನೊಬ್ಬರು ಫೇಸ್‌ಬುಕ್‌ನಲ್ಲೇ ಪ್ರೀತಿ ಮಾಡುತ್ತಿದ್ದರು. ಫೋನ್‌ನಲ್ಲೇ (Phone) ಮಾತನಾಡುತ್ತಾ ಕನಸು ಕಾಣುತ್ತಿದ್ದರು. ಇದೀಗ ಆ ಹುಡುಗಿಗೆ ಆಘಾತ ಎದುರಾಗಿದೆ. 4 ವರ್ಷಗಳ ಕಾಲ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ವ್ಯಕ್ತಿ ಹೀಗಾ ಅಂತ ಆಕೆ ಶಾಕ್‌ಗೆ ಒಳಗಾಗಿದ್ದಾಳೆ. ಇಂಥದ್ದೊಂದು ಆಘಾತಕಾರಿ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದಲ್ಲಿ (Bantwala) ನಡೆದಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.


4 ವರ್ಷದಿಂದ ಅಪರಿಚಿತನನ್ನು ಪ್ರೀತಿಸುತ್ತಿದ್ದ ಯುವತಿ


ಬಂಟ್ವಾಳದ ಯುವತಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನಲಾಗಿದೆ. ತನ್ನ ಪ್ರೀತಿ ಬಗ್ಗೆ ಯುವತಿ ಮನೆಯಲ್ಲಿ ಹೇಳಿಕೊಂಡಿದ್ದಳು. ಆದರೆ ಫೇಸ್‌ಬುಕ್ ಲವ್ ಎಲ್ಲ ನಮಗೆ ಸರಿ ಬರಲ್ಲ, ಇದು ಅಪಾಯಕಾರಿ, ಇದನ್ನೆಲ್ಲ ಬಿಟ್ಟುಬಿಡು ಅಂತ ಅಂತ ಮನೆಯವರು ಬುದ್ಧಿವಾದ ಹೇಳಿದ್ದರು. ಆದರೆ ಈ ಯುವತಿ ಮನೆಯವರ ವಿರುದ್ಧವೇ ತಿರುಗಿಬಿದ್ದಿದ್ದಳು. ಅಂತಿಮವಾಗಿ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.


ಅದೇ ಯುವಕನನ್ನು ಮದುವೆಯಾಗುತ್ತೇನೆ ಅಂತ ಹಠ


ಯಾರು ಎಷ್ಟೇ ಬುದ್ಧಿ ಹೇಳಿದರೂ ಯುವತಿ ಮಾತ್ರ ಆತನನ್ನೇ ಮದುವೆಯಾಗುತ್ತೇನೆ ಅಂತ ಹಠ ಹಿಡಿದಿದ್ದಳು. ಮಾನಸಿಕ ಶಾಸ್ತ್ರಜ್ಞರ ಬಳಿ ಯೂ ಕರೆದೊಯ್ದ ಪೋಷಕರು ಕೌನ್ಸೆಲಿಂಗ್ ಮಾಡಿಸಿದ್ದರು. ಆಗ ಆಕೆ ಸಂಪೂರ್ಣವಾಗಿ ಆತನ ಮೋಹಪಾಶದಲ್ಲಿ ಬಿದ್ದಿರುವ ವಿಚಾರ ಬೆಳಕಿಗೆ ಬಂದಿದೆ. ಕೊನೆಗೆ ಅವರ ಸಲಹೆಯಂತೆ ಯುವತಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಇದನ್ನೂ ಓದಿ: Danger TV Shows: ರಿಯಾಲಿಟಿ ಶೋ ನೋಡಿದ ವಿದ್ಯಾರ್ಥಿಗಳು ಬಾಲಕನನ್ನೇ ಕಿಡ್ನಾಪ್ ಮಾಡಿದ್ರು! ಮುಂದೆ ನಡೆದಿದ್ದು ಮಾತ್ರ ಆಘಾತಕಾರಿ ಘಟನೆ


ಪೊಲೀಸರ ಎದುರು ಬಂದಾಗ ಗೊತ್ತಾಯ್ತು ಸ್ಫೋಟಕ ಸತ್ಯ


ಯುವತಿಯ ಪೋಷಕರು ದೂರು ದಾಖಲಿಸುತ್ತಿದ್ದಂತೆ ಪೊಲೀಸರು ಯುವಕನ ವಿಳಾಸ ಪತ್ತೆ ಹಚ್ಚಿದ್ದಾರೆ. ಬಳಿಕ ಆತನ ಮನೆಗೆ ತೆರಳಿದ್ದಾರೆ. ಅಲ್ಲಿ ಸ್ಪೋಟಕ ವಿಚಾಕರವೊಂದು ಗೊತ್ತಾಗಿದೆ. ಇದರಿಂದ ಯುವತಿ ಹಾಗೂ ಆಕೆಯ ಪೋಷರಷ್ಟೇ ಅಲ್ಲ, ಪೊಲೀಸರೂ ಕೂಡ ಆಘಾತಕ್ಕೆ ಒಳಗಾಗಿದ್ದಾರೆ.


ಹುಡುಗ ಅಂತ ಪರಿಚಯಿಸಿಕೊಂಡಿದ್ದ ಮಂಗಳಮುಖಿ!


ಅಸಲಿಗೆ ಯುವತಿ ಪ್ರೀತಿಸುತ್ತಾ ಇದ್ದಿದ್ದು ಯುವಕ ಅಲ್ಲ, ಮಂಗಳಮುಖಿ ಎನ್ನುವುದು ಗೊತ್ತಾಗಿದೆ. ಫೇಸ್‌ಬುಕ್‌ನಲ್ಲಿ ಹುಡುಗ, ಸಾಫ್ಟ್‌ವೇರ್ ಇಂಜಿನಿಯರ್ ಅಂತ ಹೇಳಿಕೊಂಡಿದ್ದ ಹುಡುಗ, ಹುಡುಗನೇ ಆಗಿರಲಿಲ್ಲ. ಆಕೆ ಮೊಬೈಲ್‌ನಲ್ಲಿ ಗಂಡಸಿನ ದನಿಯಂತೆ ಮಾತನಾಡುತ್ತಿದ್ದಳು. ಆಕೆಯ ದನಿ ಕೇಳಿಯೇ ಈ ಯುವತಿ ಹುಡುಗ ಅಂತ ನಂಬಿ, ಆತನನ್ನು ಪ್ರೀತಿಸುತ್ತಾ ಇದ್ದಳು ಎನ್ನಲಾಗಿದೆ.


ಇದನ್ನೂ ಓದಿ: Belagavi: ಪ್ರೇಯಸಿಯನ್ನ ಕೊಂದು, ಪ್ರೀತಿ ಒಂದು ಕೆಟ್ಟ ಕನಸು ಅಂತ ಬರೆದು ಸೂಸೈಡ್ ಮಾಡ್ಕೊಂಡ!


ಪ್ರೇಯಸಿಯನ್ನು ಕೊಂದು ಸೂಸೈಡ್ ಮಾಡಿಕೊಂಡ ಪ್ರಿಯಕರ


ಪ್ರೇಯಸಿಯನ್ನು ಕೊಲೆಗೈದು, ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಬಸವ ಕಾಲೋನಿಯಲ್ಲಿ ನಡೆದಿದೆ. ರಾಮಚಂದ್ರ ತೆಣಗಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೂ ಮುನ್ನ ಪ್ರೇಯಸಿ ರೇಣುಕಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ರಾಮಚಂದ್ರ ಮತ್ತು ರೇಣುಕಾ ಮೂಲತಃ ಸವದತ್ತಿ ತಾಲೂಕಿನ ನಿವಾಸಿಗಳು. ಸದ್ಯ ಬೆಳಗಾವಿ ನಗರದಲ್ಲಿ ವಾಸವಾಗಿದ್ದರು. ರೇಣುಕಾ ಮದ್ಲೂರು ಮತ್ತು ರಾಮಚಂದ್ರ ಬೂದಿಗೆಪ್ಪ ಗ್ರಾಮದವನು.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು