ಮಾಜಿ ಪ್ರಿಯಕರನಿಂದ ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ, ತ್ರಿಕೋನ ಪ್ರೇಮ ಸರಣಿಯಲ್ಲಿ ಸಿಲುಕಿದ ಯುವತಿ ಸಾವು ಬದುಕಿನ ನಡುವೆ ಹೋರಾಟ

ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸದ್ಯ ಬಬಿತ್​ನನ್ನು ಬಂಧಿಸಿರುವ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

news18-kannada
Updated:June 10, 2020, 8:49 AM IST
ಮಾಜಿ ಪ್ರಿಯಕರನಿಂದ ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ, ತ್ರಿಕೋನ ಪ್ರೇಮ ಸರಣಿಯಲ್ಲಿ ಸಿಲುಕಿದ ಯುವತಿ ಸಾವು ಬದುಕಿನ ನಡುವೆ ಹೋರಾಟ
ಬಬೀತ್
  • Share this:
ಬೆಂಗಳೂರು: ಐದು ವರ್ಷದ ಪ್ರೀತಿಗೆ ಯೂಟರ್ನ್ ಹೊಡೆದ ಹುಡಿಗೆಗೆ ಮಾರಣಾಂತಿಕ ಹಲ್ಲೆ ನಡೆದಿಸಿದ ಮಾಜಿ ಪ್ರಿಯಕರ, ಆಘಾತದ ನಾಟಕವಾಡಿ ಯುವತಿಯರ ಪೋಷಕರಿಗೆ ಕರೆ ಮಾಡಿ ಆಸತ್ರೆಗೆ ಸೇರಿಸುವಂತೆ ತಿಳಿಸಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವತಿ ಐಸಿಯುನಲ್ಲಿ ಸಾವು- ಬದುಕಿನ ನಡುವೆ ನರಳಾಡುತ್ತಿದ್ದಾಳೆ.

ಆರ್ಕಿಟೆಕ್ಚರ್ ಎಂಜಿನಿಯರಿಂಗ್ ಪದವಿ ಮುಗಿಸಿ, ತಂದೆ ಖರೀದಿಸಿದ್ದ ಸೈಟ್‌ನಲ್ಲಿ ಮನೆ ಕಟ್ಟಿ ಜೀವನ ಕಟ್ಟುವ ಆಸೆಯಲ್ಲಿದ್ದ ಆ ಯುವತಿ ಇಂದು ಸಾವು ಬದುಕಿನ ನಡುವೆ ಆಸ್ಪತ್ರೆಯ ಐಸಿಯುನಲ್ಲಿ ನರಳಾಡುತ್ತಿದ್ದಾಳೆ. 23 ವರ್ಷದ ಮೋನಿಕಾ ಬೆಂಗಳೂರಿನ ಸಿಡೆದಹಳ್ಳಿ ನಿವಾಸಿ, ಸೋಲದೇವನಹಳ್ಳಿ ರಸ್ತೆಯ ಆಚಾರ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಐದು ವರ್ಷದ ಹಿಂದೆ ಚಿಕ್ಕಬಾಣಾವಾರದ ನಿವಾಸಿ ಬಬೀತ್‌ ಜೊತೆ ಪ್ರೇಮಾಂಕುರವಾಗಿದೆ. ಆದರೆ, ಮೋನಿಕಗೆ ಇತ್ತೀಚೆಗೆ ಬಬಿತ್ ಸ್ನೇಹಿತ ರಾಹುಲ್ ಜೊತೆ ಪ್ರೀತಿ ಶುರುವಾಗಿದೆ.

ಕಳೆದ ಆರು ತಿಂಗಳಿನಿಂದ ರಾಹುಲ್ ಜೊತೆ ಮೋನಿಕ ಓಡಾಡಿಕೊಂಡಿದ್ದಳು. ಮೋನಿಕ ಭಾನುವಾರ ಸಂಜೆ ರಾಹುಲ್ ಮನೆಗೆ ಪಾರ್ಟಿಗೆಂದು ತೆರಳಿದ್ದಾಗ ಅಲ್ಲಿಗೆ ಬಂದ ಬಬಿತ್ ಮೋನಿಕಾಳ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿ ಸಾಲದ್ದು ಅಂತ ಬಬಿತ್ ಮನೆಗೆ ಮೋನಿಕಾಳನ್ನು ಕರೆತಂದು ಅಲ್ಲಿಯು ಸಹ ಮನಸೋಇಚ್ಛೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಮೋನಿಕ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ. ಮನೆಯ ಬಳಿ ಇದ್ದಾಳೆ ಬನ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ. ತಕ್ಷಣ ಸ್ಥಳಕ್ಕೆ ಮೋನಿಕ ಪೋಷಕರು ಹೋಗಿ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಇದನ್ನು ಓದಿ: ಕಾಮುಕನ ಲೈಂಗಿಕ ಕಿರುಕುಳಕ್ಕೆ ಮನನೊಂದು ಗದಗದಲ್ಲಿ ವಿಕಲಚೇತನ ಮಹಿಳೆ ಆತ್ಮಹತ್ಯೆಗೆ ಶರಣು

ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸದ್ಯ ಬಬಿತ್​ನನ್ನು ಬಂಧಿಸಿರುವ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
First published: June 10, 2020, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading