HOME » NEWS » State » A GIRL BRUTALLY MURDERED AT MANDYA AND POLICE START INVESTIGATION RGM LG

ಮಂಡ್ಯದಲ್ಲಿ ಯುವತಿಯನ್ನು ಕೊಂದು ದೇಹವನ್ನು ಕತ್ತರಿಸಿ ನಾಲೆಗೆ ಎಸೆದ ದುಷ್ಕರ್ಮಿಗಳು

ಈ ಪ್ರಕರಣದಲ್ಲಿ ಅಪರಿಚಿತ ಯುವತಿಯ ದೇಹವನ್ನು ದುಷ್ಕರ್ಮಿಗಳು ಭಯಾನಕವಾಗಿ ಕತ್ತರಿಸಿದ್ದಾರೆ. ಬೇರೆಲ್ಲೋ ಈ ಯುವತಿಯನ್ನು ಕೊಲೆಗೈದು ಕೈ,ಕಾಲು, ರುಂಡ, ಮುಂಡ, ಮುಂಗೈ, ಎಲ್ಲವನ್ನು ಬೇರ್ಪಡಿಸಿ ಚೀಲದಲ್ಲಿ ತುಂಬಿ ಇಲ್ಲಿಗೆ ತಂದು ನಾಲೆಗೆ ಎಸೆದು ಹೋಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

news18-kannada
Updated:November 19, 2020, 10:30 AM IST
ಮಂಡ್ಯದಲ್ಲಿ ಯುವತಿಯನ್ನು ಕೊಂದು ದೇಹವನ್ನು ಕತ್ತರಿಸಿ ನಾಲೆಗೆ ಎಸೆದ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ(ನ.19): ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಅಪರಿಚಿತ ಯುವತಿಯೋರ್ವಳನ್ನು ಕೊಂದು ದೇಹವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ನಾಲೆಗೆ ಎಸೆದು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ನಡೆಸಿರುವ ಈ ಭೀಕರ ಹತ್ಯೆ ಕಂಡು ಮಂಡ್ಯ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಹೌದು! ಸಕ್ಕರೆನಾಡು ಮಂಡ್ಯ ಬರ್ಬರ ಹತ್ಯೆ ಪ್ರಕರಣಗ ಳು ಮೇಲಿಂದ ಮೇಲೆ ನಡೀತಾನೆ ಇದೆ. ಕಳೆದ ತಿಂಗಳು ಹಲವು ರೌಡಿಶೀಟರ್ ಗಳ ಬರ್ಬರ ಹತ್ಯೆ ಸೇರಿದಂತೆ ಇನ್ನಿತರ ಬರ್ಬರ ಹತ್ಯೆ ಪ್ರಕರಣಗಳು ನಡೆದಿದ್ದು ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದರು. ಇದೀಗ ಯುವತಿಯೋರ್ವಳು ಬರ್ಬರವಾಗಿ ಹತ್ಯೆಯಾಗಿರೋದು ಜಿಲ್ಲೆಯ ಜನರನ್ನು ಮತ್ತಷ್ಟು ಬೆಚ್ಚಿ ಬೀಳಿಸಿದೆ. ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಸಮೀಪದ ಹೇಮಾವತಿ ನದಿಯ ಬಲ ದಂಡೆ ನಾಲೆಯಲ್ಲಿ ಕತ್ತರಿಸಿದ ಅಪರಿತ ಯುವತಿಯ ದೇಹ ಪತ್ತೆಯಾಗಿದೆ.

ಅಪರಿಚಿತ ಯುವತಿಯ ದೇಹದ ಅಂಗಾಗವನ್ನು ಕತ್ತರಿಸಿ ದುಷ್ಕರ್ಮಿಗಳು ಮೂಟೆಕಟ್ಟಿ ಎಸೆದು ಹೋಗಿದ್ದಾರೆ‌. ನಾಲೆಯಲ್ಲಿ ಈ ಮೂಟೆಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ  ಪ್ರಕರಣ ಬೆಳಕಿಗೆ ಬಂದಿದೆ. ಮೂಟೆಯಲ್ಲಿ ಯುವತಿಯ ದೇಹದ ಸ್ಥಿತಿ ‌ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಅತ್ತೆ-ಮಾವ, ಹೆಂಡತಿಯಿಂದ ನಿರಂತರ ಕಿರುಕುಳ; ಸೆಲ್ಫೀ ವಿಡಿಯೋ ಮಾಡಿಟ್ಟು ಅಳಿಯ ಆತ್ಮಹತ್ಯೆ

ಇನ್ನು ಈ ಪ್ರಕರಣದಲ್ಲಿ ಅಪರಿಚಿತ ಯುವತಿಯ ದೇಹವನ್ನು ದುಷ್ಕರ್ಮಿಗಳು ಭಯಾನಕವಾಗಿ ಕತ್ತರಿಸಿದ್ದಾರೆ. ಬೇರೆಲ್ಲೋ ಈ ಯುವತಿಯನ್ನು ಕೊಲೆಗೈದು ಕೈ,ಕಾಲು, ರುಂಡ, ಮುಂಡ, ಮುಂಗೈ, ಎಲ್ಲವನ್ನು ಬೇರ್ಪಡಿಸಿ ಚೀಲದಲ್ಲಿ ತುಂಬಿ ಇಲ್ಲಿಗೆ ತಂದು ನಾಲೆಗೆ ಎಸೆದು ಹೋಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಎರಡು ಮೂರು ದಿನಗಳ ಹಿಂದೆ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಬರ್ಬರವಾಗಿ ಕೊಲೆಯಾಗಿರೋ ಈ ಅಪರಿಚಿತ ಯುವತಿಯ ವಯಸ್ಸು ಸುಮಾರು 22 ರಿಂದ 25 ವರ್ಷ ವಯಸ್ಸಿನದ್ದಾಗಿದ್ದು, ಪೊಲೀಸರುಕೊಲೆಯಾದ ಯುವತಿ ಪತ್ತೆಗಾಗಿ ಮಾಹಿತಿ ಕಲೆ ಹಾಕ್ತಿದ್ದಾರೆ. ಸದ್ಯ  ಮಾಹಿತಿ ನೀಡಿದ ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು, ಮೃತ ಯುವತಿಯ ಯಾರು? ಎಲ್ಲಿಯವಳು?ಎನ್ನುವುದರ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ.

ಇನ್ನು ಈ ಸಂಬಂಧ ಕೆ.ಆರ್.ಪೇಟೆ ಪೊಲೀಸರು  ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಹಿರಿ ಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ‌. ಅಲ್ಲದೇ ಈ ಭೀಕರ ಹತ್ಯೆಯ ಪ್ರಕರಣ ಭೇಧಿಸಲು ತಂಡವನ್ನು ರಚಿಸಿದ್ದಾರೆ. ಈಗಾಗಲೇ ಕಾರ್ಯೋನ್ಮುಖವಾಗಿರುವ  ಪೊಲೀಸರ ತಂಡ ಮಾಹಿತಿ ಸಂಗ್ರಹಿಸಿದ್ದು, ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Published by: Latha CG
First published: November 19, 2020, 10:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories