• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಏಕಾಏಕಿ ನುಗ್ಗಿದ 30 ಪುಂಡರ ಗ್ಯಾಂಗ್; ದೊಣ್ಣೆಗಳಿಂದ ಕಾರ್ಯಕರ್ತರ ಮೇಲೆ ಹಲ್ಲೆ

Karnataka Elections: ಏಕಾಏಕಿ ನುಗ್ಗಿದ 30 ಪುಂಡರ ಗ್ಯಾಂಗ್; ದೊಣ್ಣೆಗಳಿಂದ ಕಾರ್ಯಕರ್ತರ ಮೇಲೆ ಹಲ್ಲೆ

ದೊಣ್ಣೆಗಳಿಂದ ದಾಳಿ

ದೊಣ್ಣೆಗಳಿಂದ ದಾಳಿ

Padmanabhanagar: ಮೀನಮ್ಮ ಮತ್ತು ಚನ್ನಪ್ಪ ಎಂಬವರು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು (Complaint File) ಸಲ್ಲಿಸಿದ್ದಾರೆ. ದೂರುಗಳನ್ನು ಪಡೆದುಕೊಂಡಿರುವ ಪೊಲೀಸರು ವಿಡಿಯೋ ಫೋಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore, India
  • Share this:

ಬೆಂಗಳೂರು: ಪದ್ಮನಾಭನಗರ ಕ್ಷೇತ್ರದ (Padmanabhanagara) ಪಾಪಯ್ಯ ಗಾರ್ಡನ್ 28, 29 ಬೂತ್ ಬಳಿ ಕಾಂಗ್ರೆಸ್ ಕಾರ್ಯಕರ್ತರ (Congress Activist) ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ. ಗಾಂಜಾ ನಶೆಯಲ್ಲಿ ಬಂದಿದ್ದ ಸುಮಾರು 30 ಯುವಕರ ಗುಂಪು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗಿದೆ. ಏಕಾಏಕಿ ದೊಣ್ಣೆಗಳ ಜೊತೆಯಲ್ಲಿ ನುಗ್ಗಿದ ಗ್ಯಾಂಗ್ ಮಹಿಳೆಯರ ಮೇಲೆಯೂ ಹಲ್ಲೆ ನಡೆಸಿದೆ. ಮಾಜಿ ಕಾರ್ಪೋರೇಟರ್ ಲಕ್ಷ್ಮೀ ಅವರ ಪತಿ ಕಬ್ಬಳ್ ಉಮೇಶ್ ಹುಡುಗರನ್ನು ಕರೆಸಿ ದಾಳಿ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಮೀನಮ್ಮ ಮತ್ತು ಚನ್ನಪ್ಪ ಎಂಬವರು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು (Complaint File) ಸಲ್ಲಿಸಿದ್ದಾರೆ. ದೂರುಗಳನ್ನು ಪಡೆದುಕೊಂಡಿರುವ ಪೊಲೀಸರು ವಿಡಿಯೋ ಫೋಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ.


ದೂರಿನಲ್ಲಿ ಏನಿದೆ?


ಬಾಲಾಜಿ ನಗರ ಕಲ್ಯಾಣ ಮಂಟಪದ ಎದುರು ಬಿಬಿಎಂಪಿ ಇಂಡೋರ್ ಗೇಮ್​ನಲ್ಲಿ ಚುನಾವಣೆಗೆ ವೋಟು ಹಾಕಲು ಹೋಗುತ್ತಿರಬೇಕಾದ್ರೆ , ಬೆಳಗ್ಗೆ 11-15 ಗಂಟೆಯ ಸಮಯದಲ್ಲಿ ಕೆಎ-02, ಎಂಎನ್​-9202 ಇನ್ನೋವಾ ಕಾರಿನಲ್ಲಿ ಬಂದ ಕಬ್ಬಾಳು ಉಮೇಶ್ ಮತ್ತು ಆತನ ಸಂಗಡಿಗರು ಸುಮಾರು 20 ಜನ ಏಕಾಏಕಿ ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ.




ದೊಣ್ಣೆ, ಮಚ್ಚು ಮತ್ತು ರಾಡ್​ಗಳಿಂದ ಮಾರಣಾಂತಿಕ ಹಲ್ಲೆ ಮಾಡಿರೋದರಿಂದ ತಾವು ಸದರಿ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ:  Karnataka Election Voting LIVE: ಕರ್ನಾಟಕ ವಿಧಾನಸಭಾ ಚುನಾವಣೆ- ರಾಜ್ಯದಲ್ಲಿ ಇದುವರೆಗೆ 37.25% ಮತದಾನ


ಕುಸಿದು ಬಿದ್ದು ವ್ಯಕ್ತಿ ಸಾವು

top videos


    ಮತಗಟ್ಟೆಗೆ ಆಗಮಿಸಿದ್ದ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವಿಗೀಡಾಗಿದ್ದು, ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ರೇಣುಕಾಪುರದಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿ ಅಮೀರ್ ಸಾಬ್ (56) ರೇಣುಕಾಪುರ ನಿವಾಸಿ ಮತಗಟ್ಟೆಯ ಒಳ ಭಾಗದಲ್ಲೇ ಕುಸಿದು ಸಾವನ್ನಪ್ಪಿದ್ದು, ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ಇದೆ.

    First published: