• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Arrest: 500 ಕೋಟಿ ವಂಚಿಸಿದ್ದ ಮಹಾ ವಂಚಕ ಅರೆಸ್ಟ್! ಬೆಳಗಾವಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ ಖದೀಮ?

Arrest: 500 ಕೋಟಿ ವಂಚಿಸಿದ್ದ ಮಹಾ ವಂಚಕ ಅರೆಸ್ಟ್! ಬೆಳಗಾವಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ ಖದೀಮ?

ವಂಚತ ಶಿವಾನಂದ ಕುಂಬಾರ್

ವಂಚತ ಶಿವಾನಂದ ಕುಂಬಾರ್

ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ಹಣ ಹೂಡಿಕೆ ಮಾಡಿದವರಿಗೆ ನಂಬಿಸಿದ್ದ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಉದ್ಯಮಿಗಳ ಬಳಿ 500 ಕೋಟಿಗೂ ಹೆಚ್ಚು ಹಣ ಪಡೆದಿದ್ದ. ಹಣ ವಾಪಸ್ ನೀಡದೇ ಕುಟುಂಬ ಸಮೇತ ಪರಾರಿಯಾಗಿದ್ದ.

  • Share this:

ಬೆಳಗಾವಿ: ಕರ್ನಾಟಕ (Karnataka), ಮಹಾರಾಷ್ಟ್ರ (Maharashtra) ಪೊಲೀಸರಿಗೆ (Police) ಬೇಕಾಗಿದ್ದ ಮೋಸ್ಟ್ ವಾಂಟೆಡ್‌ (Most Wanted) ಮಹಾವಂಚಕ (Fraud) ಅರೆಸ್ಟ್ (Arrest) ಆಗಿದ್ದಾನೆ. ಎರಡು ರಾಜ್ಯದಲ್ಲಿ ಸಿಮೆಂಟ್ (Ciment), ಸ್ಟೀಲ್ (Steel) ದಂಧೆಯಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂದು 500 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ್ದ. ಬೆಳಗಾವಿ ಸಿಸಿಬಿ ಪೊಲೀಸರು (Balagavi CCB Police) ಆರೋಪಿ ಶಿವಾನಂದ ಕುಂಬಾರನನ್ನು ಬಂಧಿಸಿದ್ದಾರೆ. ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ವಂಚಕ ಮುಂಬೈನಲ್ಲಿ (Mumbai) ಸೆರೆ ಆಗಿದ್ದಾನೆ. ನೇಪಾಳ ಪೊಲೀಸರನ್ನು (Nepal Police) ಇಂಟರ್‌ಪೋಲ್, ಧೂತಾವಾಸ ಮೂಲಕ ಸಂಪರ್ಕಿಸಿದ್ದ ಬೆಳಗಾವಿ ಪೊಲೀಸರು, ಈ ವೇಳೆ ಹಣಕಾಸಿನ ಅವಶ್ಯಕತೆಗೆ ಆರೋಪಿ ಮುಂಬೈಗೆ ಬರುವ ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ವಂಚಕ ಶಿವಾನಂದ ಕುಂಬಾರನನ್ನು ಬಂಧಿಸಿದ್ದಾರೆ. ಬೆಳಗಾವಿ ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ & ಟೀಮ್‌ನಿಂದ ಶಿವಾನಂದ ಕುಂಬಾರ ಅರೆಸ್ಟ್ ಮಾಡಿದೆ.


ಹೆಚ್ಚು ಲಾಭದ ಆಸೆ ಹುಟ್ಟಿಸಿ ವಂಚನೆ


ಶಿವಾನಂದ ಕುಂಬಾರ ಮೂಲತಃ ಚಿಕ್ಕೋಡಿ ತಾಲೂಕಿನ ಸದಲಗಾ ನಿವಾಸಿ, ಕೆಲಸ ವರ್ಷಗಳ ಹಿಂದೆ ಮಹಾರಾಷ್ಟ್ರದ ಇಚಲಕರಂಜಿ ಎಂಬಲ್ಲಿ ಶಿವಾನಂದ ಕುಂಬಾರ ವಾಸವಿದ್ದ. ಸಿಮೆಂಟ್, ಸ್ಟೀಲ್ ‌ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂದು ನಂಬಿಸಿದ್ದ ಶಿವಾನಂದ ಕುಂಬಾರ, ಜನರನ್ನು ಪುಸಲಾಯಿಸಿ ಕೋಟ್ಯಂತರ ಹಣ ಪಡೆದಿದ್ದ.


ಮೊದಲು ಲಾಭಾಂಶ ನೀಡಿ, ಬಳಿಕ ವಂಚನೆ


ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ಹಣ ಹೂಡಿಕೆ ಮಾಡಿದವರಿಗೆ ನಂಬಿಸಿದ್ದ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಉದ್ಯಮಿಗಳ ಬಳಿ 500ಕೋಟಿಗೂ ಹೆಚ್ಚು ಹಣ ಪಡೆದಿದ್ದ. ಹಣ ವಾಪಸ್ ನೀಡದೇ ಕುಟುಂಬ ಸಮೇತ ಪರಾರಿಯಾಗಿದ್ದ.


ಇದನ್ನೂ ಓದಿ: Kidnap Case: ಯುವತಿ ಅಪಹರಣ ಪ್ರಕರಣದಲ್ಲಿ ಹು-ಧಾ ಪಾಲಿಕೆ ಕಾರ್ಪೊರೇಟರ್ ಕೊನೆಗೂ ಅರೆಸ್ಟ್


 ಶಿವಾನಂದನನ್ನು ನಂಬಿ ಬೀದಿಗೆ ಬಂದ ಹೂಡಿಕೆದಾರರು


ಹಣ ಹೂಡಿಕೆ ಮಾಡಿದ್ದ ಬೆಳಗಾವಿಯ ಹಲವರು ಬೀದಿಗೆ ಬಂದಿದ್ದಾರೆ.
ವೋಲ್‌ಸೇಲ್ ತರಕಾರಿ ವ್ಯಾಪಾರಸ್ಥ ಯಲ್ಲಪ್ಪ ಮನಗುತಕರ್ ಎಂಬುವನ ಮೂಲಕ ಹೂಡಿಕೆ ಮಾಡಿದ್ದ. ಬಹುತೇಕ ವೋಲ್‌ಸೇಲ್ ತರಕಾರಿ ವ್ಯಾಪಾರಸ್ಥರಿಂದ ಕೋಟ್ಯಂತರ ಹಣ ಹೂಡಿಕೆ ಮಾಡಿದ್ದ. ಯಲ್ಲಪ್ಪ ಮನಗುತಕರ್‌ಗೆ 75 ಲಕ್ಷ ಹಣ ನೀಡಿದ್ದ ಜಾಫರವಾಡಿಯ ಅರ್ಜುನ್ ಪಾಟೀಲ್. ಹಣ ವಾಪಸ್ ನೀಡದಿದ್ದಾಗ ಬೆಳಗಾವಿ ಸಿಇಎನ್ ಠಾಣೆಗೆ ದೂರು ನೀಡಿದ್ದ ಅರ್ಜುನ್ ಪಾಟೀಲ್. ಯಲ್ಲಪ್ಪ ಮನಗುತಕರ್, ಶಿವಾನಂದ ಕುಂಬಾರ ವಿರುದ್ಧ ಕೇಸ್ ದಾಖಲಾಗಿತ್ತು.


ಆಶ್ರಮದಲ್ಲಿ ಕಾಲು ಚಾಲಕನಾಗಿದ್ದ ವಂಚಕ


ಬೆಳಗಾವಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧ ವಿಭಾಗದ ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ವಂಚಕ ಕುಂಬಾರ ಮಹಾರಾಷ್ಟ್ರದ ಕೋಪರಗಾಂವದಲ್ಲಿ ಆಶ್ರಮವೊಂದರಲ್ಲಿ  ಕಾರು ಚಾಲಕನಾಗಿದ್ದನು. 2009ರಿಂದಲೇ ವಂಚನೆಯನ್ನು ಆರಂಭಿಸಿದ್ದ,‌ ಬಳಿಕ ಎರಡು ರಾಜ್ಯದಲ್ಲಿ ಅನೇಕರಿಗೆ ವಂಚನೆ ಮಾಡಿದ್ದ. ಮಾರುಕಟ್ಟೆಯಲ್ಲಿ ಇರೋ ದರಕ್ಕಿಂತ ಕಡಿಮೆ ದರಕ್ಕೆ ಸಿಮೆಂಟ್, ಸ್ಟೀಲ್ ಜನರಿಗೆ ಕೊಡಿಸುತ್ತಿದ್ದ. ನಂಬಿಕೆ‌ ಗಳಿಸಲು  ತಾನೇ ವ್ಯತ್ಯಾಸದ ಹಣವನ್ನು ಹಾಕುತ್ತಿದ್ದನು.


ಕರ್ನಾಟಕ, ಮಹಾರಾಷ್ಟ್ರದಲ್ಲಿ ಹಲವರಿಗೆ ವಂಚನೆ


ಮಹಾರಾಷ್ಟ್ರ 9 ಜಿಲ್ಲೆಗಳಲ್ಲಿ ಹಲವರಿಗೆ ಮೋಸ ಮಾಡಿದ್ದಾನೆ. ಜತೆ ಬೆಳಗಾವಿ, ನಿಪ್ಪಾಣಿ, ಸಂಕೇಶ್ವರದಲ್ಲಿ ಜನರಿಗೆ ಮೋಸ ಮಾಡಿದ್ದಾನೆ. ಮಹಾರಾಷ್ಟ್ರ ‌ಪೊಲೀಸರಿಗೆ ಸಾಧ್ಯವಾಗದ ಕೆಲಸವನ್ನು ರಾಜ್ಯದ ಪೊಲೀಸರು ಮಾಡಿದ್ದಾರೆ.


ಇದನ್ನೂ ಓದಿ: Nupur Supporter Murder: ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆ; ಕನ್ಹಯ್ಯಗಿಂತ ಮೊದಲೇ ನಡೆದಿತ್ತು ಮಹಾರಾಷ್ಟ್ರದಲ್ಲಿ ಕೊಲೆ!


ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ವಂಚಕ ಮುಂಬೈನಲ್ಲಿ ಸೆರೆ ಆಗಿದ್ದಾನೆ. ನೇಪಾಳ ಪೊಲೀಸರನ್ನು ಇಂಟರ್‌ಪೋಲ್, ಧೂತಾವಾಸ ಮೂಲಕ ಸಂಪರ್ಕಿಸಿದ್ದ ಬೆಳಗಾವಿ ಪೊಲೀಸರು, ಈ ವೇಳೆ ಹಣಕಾಸಿನ ಅವಶ್ಯಕತೆಗೆ ಆರೋಪಿ ಮುಂಬೈಗೆ ಬರುವ ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ವಂಚಕ ಶಿವಾನಂದ ಕುಂಬಾರನನ್ನು ಬಂಧಿಸಿದ್ದಾರೆ. ಬೆಳಗಾವಿ ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ & ಟೀಮ್‌ ಮಹಾ ವಂಚಕ ಶಿವಾನಂದ ಕುಂಬಾರನನ್ನು ಅರೆಸ್ಟ್ ಮಾಡಿದೆ.

top videos
    First published: