HOME » NEWS » State » A FRAUD HAPPENED AT BANK IN CHIKKODI AND COMPLAINT REGISTERED LG

ರೈತನಿಗೆ ಗೊತ್ತಿಲ್ಲದೆ ಬ್ಯಾಂಕ್ ಖಾತೆ ತೆಗೆದು ಲೋನ್ ಪಡೆದ ಕಾರ್ಖಾನೆ; ಕೋರ್ಟ್​ ಮೆಟ್ಟಿಲೇರಿದ ಅನ್ನದಾತ

ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ಸಹ ದಾಖಲಾಗಿದೆ. ಇದು ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಮತ್ತು ಬ್ಯಾಂಕ್ ನ ಅಧಿಕಾರಿಗಳು ಇಬ್ಬರೂ ಸೇರಿ ಮಾಡಿರುವ ಮಸಲತ್ತು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೆ ಇವರ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

news18-kannada
Updated:January 20, 2021, 4:01 PM IST
ರೈತನಿಗೆ ಗೊತ್ತಿಲ್ಲದೆ ಬ್ಯಾಂಕ್ ಖಾತೆ ತೆಗೆದು ಲೋನ್ ಪಡೆದ ಕಾರ್ಖಾನೆ; ಕೋರ್ಟ್​ ಮೆಟ್ಟಿಲೇರಿದ ಅನ್ನದಾತ
ಸಾಂದದರ್ಭಿಕ ಚಿತ್ರ
  • Share this:
ಚಿಕ್ಕೋಡಿ(ಜ.20): ನೀವೇನಾದ್ರೂ ಒಂದು ಬ್ಯಾಂಕ್ ಅಕೌಂಟ್ ಮಾಡಿಸಬೇಕು ಅಂದ್ರೆ ಏನು ಮಾಡುವಿರಿ. ಆಧಾರ್, ಪಾನ್ ಕಾರ್ಡ್, ರಹವಾಸಿ ಪ್ರಮಾಣ ಪತ್ರ ಹಿಡಿದು ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆ ತೆರೆಯುತ್ತೀರಿ. ಆದರೆ ಬೆಳಗಾವಿಯಲ್ಲಿ ಇದ್ಯಾವ ದಾಖಲೆ ಕೊಡದಿದ್ದರೂ ಇಲ್ಲೊಬ್ಬರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ, ಅವರ ಹೆಸರಿನಲ್ಲಿ ಸಾಲವನ್ನೂ ಮಾಡಿದ್ದಾರೆ. ಈಗ ಆ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ ಈ ಸ್ಟೋರಿ ಓದಿ.

ಯಾವುದೇ ದಾಖಲೆ ನೀಡದಿದ್ದರೂ ಆಗುತ್ತೆ ಬ್ಯಾಂಕ್ ಅಕೌಂಟ್. ಯಾವುದಕ್ಕೂ ನೀವು ಒಮ್ಮೆ ಸಿ ಬಿಲ್ ತೆಗೆಸಿ ನೋಡಿಕೊಂಡುಬಿಡಿ. ಹೌದು ಈಗಿನ ಕಾಲದಲ್ಲಿ ಯಾರನ್ನು ನಂಬೇಕು ಯಾರನ್ನ ಬಿಡಬೇಕೋ ಅರ್ಥವಾಗಲ್ಲ ನೋಡಿ. ಒಂದು ಮಾಮೂಲಿ ಜೀರೋ ಬ್ಯಾಲೆನ್ಸ್ ಅಕೌಂಟ್ ಮಾಡಬೇಕಾದ್ರೆನೆ ಬ್ಯಾಂಕ್ ಅಧಿಕಾರಿಗಳು ಆ ಡಾಕ್ಯುಮೆಂಟ್ ಬೇಕು ಈ ಡಾಕ್ಯುಮೆಂಟ್ ಬೇಕು ಅಂತ ತಲೆ  ತಿಂತಾರೆ. ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ರೈತ ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ ಶಿವನಗೌಡ ಪಾಟೀಲ್ ಎಂಬುವರರ ಹೆಸರಿನಲ್ಲಿ ಎರಡು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಆ ಅಕೌಂಟ್ ಮೇಲೆ ಸಾಲವನ್ನು ಪಡೆದು ಮತ್ತೆ ಸಾಲ ಮರುಪಾವತಿ ಮಾಡಲಾಗಿದೆ.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ  ರೇಣುಕಾ ಶುಗರ್ಸ್ ಕಾರ್ಖಾನೆ  ಹೆಸರಿಗೆ ಸಾಲ ಮಂಜೂರು ಮಾಡಲಾಗಿದ್ದು ಅವರು ಅದನ್ನು ಮತ್ತೆ ವಾಪಸ್ ಮರುಪಾವತಿ ಮಾಡಿದ್ದಾರೆಂದು ಆರೋಪಿಸಿ ಅನ್ಯಾಯಕ್ಕೊಳಗಾದ ವಕೀಲ ಶಿವನಗೌಟ ಪಾಟೀಲ್ ಆರೋಪಿಸಿ ದೂರು ನೀಡಿದ್ದಾರೆ. ರಾಯಭಾಗದ ಕೆನರಾ ಬ್ಯಾಂಕ್ ಒಂದರಲ್ಲೆ ತಮ್ಮ ಖಾತೆ ಹಾಗೂ ವ್ಯವಹಾರವನ್ನಿಟ್ಟುಕೊಂಡಿರುವ ಶಿವನಗೌಡ ಸಿಬಿಲ್ ಸ್ಕೋರ್ ತೆಗೆಸಿದಾಗ ಈ ಪ್ರಕರಣ ಹೊರಗೆ ಬಂದಿದೆ.

Drug Mafia: ರಾಷ್ಟ್ರಮಟ್ಟದಲ್ಲಿ ಗಾಂಜಾ ಸಾಗಿಸುತ್ತಿದ್ದ ಕಿಂಗ್​ಪಿನ್ ಗಣೇಶನ ಬಂಧನ

ಇದೇ ಶಿವನಗೌಡ ಎಂಬುವವರ ಹೆಸರಿನ ಮೇಲೆ ಐಸಿಐಸಿಐ ಬ್ಯಾಂಕ್ ಚಿಂಚಲಿ ಶಾಖೆಯಲ್ಲಿ  651405009543 ಮತ್ತು 651405009721  ಅಕೌಂಟ್ ನಂಬರಿನ ಎರಡು ಫೇಕ್ ಅಕೌಂಟ್  ಕ್ರಿಯೇಟ್ ಮಾಡಲಾಡಿದೆ. ಇದೇ ಅಕೌಂಟ್ ಉಪಯೋಗಿಸಿಕೊಂಡು ಮೊದಲು 12,96,000 ರೂಪಾಯಿ ಸಾಲಕ್ಕೆ ಮನವಿ ಮಾಡಿ ಅದರಲ್ಲಿ 70,594 ರೂಪಾಯಿ ಸಾಲ ಪಡೆದು ಮತ್ತೆ ಮರುಪಾವತಿ ಮಾಡಲಾಗಿದೆ ಎಂದು ಶಿವನಗೌಡ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ಸಹ ದಾಖಲಾಗಿದೆ. ಇದು ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಮತ್ತು ಬ್ಯಾಂಕ್ ನ ಅಧಿಕಾರಿಗಳು ಇಬ್ಬರೂ ಸೇರಿ ಮಾಡಿರುವ ಮಸಲತ್ತು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೆ ಇವರ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಹೆಬ್ಬಟ್ಟಿನ ಜನರನ್ನ ವಂಚಿಸೋದು ಅವರ ಹೆಸರಿನಲ್ಲಿದ್ದ ಹಣವನ್ನು ಕಬಳಿಸೋದನ್ನು ನಾವು ನೀವು ಕೇಳಿದ್ದೆವು.‌ ಆದರೆ ಒಬ್ಬ ನ್ಯಾಯವಾದಿಯ ಹೆಸರಿನಲ್ಲೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಸಾಲ ಪಡೆದು ಅದನ್ನ ಮರುಪಾವತಿ ಮಾಡಿದ್ದು ಈಗ ಎಂಥವರನ್ನು ನಿಬ್ಬೆರಗಾಗುವಂತೆ ಮಾಡಿದೆ. ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಸೂಕ್ತ ತನಿಖೆಯ ನಂತರ ಮತ್ತಷ್ಟು ಸತ್ಯಾಂಶ ಹೊರಬರಬೇಕಿದೆ.
Published by: Latha CG
First published: January 20, 2021, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories