ನಟಿ ಪ್ರಣೀತಾರನ್ನ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ವಂಚನೆ ; 13 ಲಕ್ಷ ಹಣ ಪಡೆದು ಪರಾರಿ

ಇಬ್ಬರು ವಂಚಕರ ಮಾತಿಗೆ ಮರುಳಾದ ಮ್ಯಾನೇಜರ್ 13 ಲಕ್ಷ ಹಣವನ್ನ ಕೊಟ್ಟಿದ್ದಾರೆ. ಹಣ ಪಡೆದು ಇಬ್ಬರು ಅಸಾಮಿಗಳು ಹೊಟೇಲ್ ನ ರೂಂಗೆ ಹೋಗಿ ಬರುತ್ತೇವೆ ಎಂದು ಹೇಳಿ ಅಲ್ಲಿಂದ ಪರಾರಿ ಆಗಿದ್ದಾರೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು(ಅಕ್ಟೋಬರ್​. 12): ನಟಿ ಪ್ರಣೀತಾ ಅವರನ್ನು ಬ್ರಾಂಡ್‌ ಅಂಬಾಸಿಡರ್ ಮಾಡುವುದಾಗಿ ಹೇಳಿ ಕಂಪನಿಯೊಂದರ ಮ್ಯಾನೇಜರ್ 13 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಡೆವಲಪರ್ಸ್ ಕಂಪನಿಗೆ ಇಬ್ಬರು ವ್ಯಕ್ತಿಗಳು ವಂಚಿಸಿ ಪರಾರಿ ಆಗಿದ್ದಾರೆ. ಡೆವಲಪಿಂಗ್ ಕಂಪನಿಯೊಂದು ತನ್ನ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ರನ್ನ ನೇಮಿಸಲು ಮುಂದಾಗಿದ್ದರು ಈ ವೇಳೆ ಚೆನ್ನೈ ಮೂಲದ ಮೊಹಮ್ಮದ್‌ ಜುನಾಯತ್ ಎಂಬಾತ ಡೆವಲಪರ್ ಕಂಪನಿಯ ಮ್ಯಾನೇಜರ್ ಗೆ ಪರಿಚಯವಾಗಿದ್ದು, ತಾನು ನಟಿ ಪ್ರಣೀತಾರನ್ನ ತಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ಹೇಳಿದ್ದಾನೆ. ಈ ಬಗ್ಗೆ ಮಾತುಕತೆ ನಡೆಸಿ ಅಗ್ರಿಮೆಂಟ್ ಗೆ ಸಹಿ ಹಾಕುವ ಬಗ್ಗೆ ಚರ್ಚೆ ನಡೆಸಲು ಸಮ್ಮತಿಸಿದ್ದಾರೆ. ಆರೋಪಿ ಮೊಹಮ್ಮದ್‌ ಜುನಾಯತ್ ಮಾತಿಗೆ ಮರುಳಾದ ಕಂಪನಿಯ ಮ್ಯಾನೇಜರ್ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಾತುಕತೆಗೆ ಸ್ಥಳ ನಿಗದಿಗೊಳಿಸಿದ್ದಾರೆ.

ಇದೇ ತಿಂಗಳ 6 ರಂದು ನಗರದ ಹೊಟೇಲ್ ನಲ್ಲಿ ಮೊಹಮ್ಮದ್‌ ಜುನಾಯತ್ ಮತ್ತು ವರ್ಷ ಎಂಬುವರು ಮಾತುಕತೆ ಮಾಡಲು ಆಗಮಿಸಿದ್ದು, ಅಲ್ಲಿಗೆ ಕಂಪನಿಯ ಮ್ಯಾನೇಜರ್ ಸಹ ಬಂದಿದ್ದಾರೆ.

ಆರೋಪಿಗಳಾದ ಮೊಹಮ್ಮದ್‌ ಜುನಾಯತ್ ಮತ್ತು ವರ್ಷ ಮ್ಯಾನೇಜರ್ ಜೊತೆ ಮಾತಾಡುತ್ತ ನಾವು ನಿಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ಪ್ರಣೀತಾರನ್ನ ಮಾಡುತ್ತೇವೆ ಎಂದು ಒಪ್ಪಿಸಿದ್ದಾರೆ.

ಇದನ್ನೂ ಓದಿ : ಹಾಸನ ಜಿಲ್ಲಾಡಳಿತ ಬಿಜೆಪಿ‌ ಮುಖಂಡರ ಕೈಗೊಂಬೆ ; ಮಾಜಿ ಸಚಿವ ಹೆಚ್​.ಡಿ ರೇವಣ್ಣ ಆರೋಪ

ಇಬ್ಬರು ವಂಚಕರ ಮಾತಿಗೆ ಮರುಳಾದ ಮ್ಯಾನೇಜರ್ 13 ಲಕ್ಷ ಹಣವನ್ನ ಕೊಟ್ಟಿದ್ದಾರೆ. ಹಣ ಪಡೆದು ಇಬ್ಬರು ಅಸಾಮಿಗಳು ಹೊಟೇಲ್ ನ ರೂಂಗೆ ಹೋಗಿ ಬರುತ್ತೇವೆ ಎಂದು ಹೇಳಿ ಅಲ್ಲಿಂದ ಪರಾರಿ ಆಗಿದ್ದಾರೆ.

ಈ ಬಗ್ಗೆ ಡೆವಲಪರ್ ಕಂಪನಿಯ ಮ್ಯಾನೇಜರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ವಂಚಕರಿಗೆ ಬಲೆ ಬೀಸಿದ್ದಾರೆ.
Published by:G Hareeshkumar
First published: