• Home
  • »
  • News
  • »
  • state
  • »
  • Hubballi: ಹಣೆಮಣೆ ಏರಿದ 75ರ ತಾತ-66ರ ಅಜ್ಜಿ; ಇದು ಮಾಜಿ ಮೇಯರ್ ಮ್ಯಾರೇಜ್​ ಸ್ಟೋರಿ

Hubballi: ಹಣೆಮಣೆ ಏರಿದ 75ರ ತಾತ-66ರ ಅಜ್ಜಿ; ಇದು ಮಾಜಿ ಮೇಯರ್ ಮ್ಯಾರೇಜ್​ ಸ್ಟೋರಿ

ಮಾಜಿ ಮೇಯರ್ ಮದುವೆ

ಮಾಜಿ ಮೇಯರ್ ಮದುವೆ

ಹುಬ್ಬಳ್ಳಿಯಲ್ಲೊಂದು ವಿಚಿತ್ರ ಮದುವೆ ನೆರವೇರಿದೆ. ಮದುವೆಯ ಗಂಡಿನ ವಯಸ್ಸು 75 ಆದರೆ, ಹೆಣ್ಣಿನ ವಯಸ್ಸು 66. ಹೀಗೆ ಮದುವೆಯಾದವರು ಸಾಮಾನ್ಯ ಮನುಷ್ಯ ಅಲ್ಲ. ಮಾಜಿ ಮೇಯರ್ ರೊಬ್ಬರು ತನ್ನ ಪತ್ನಿಯ ಅಕ್ಕನನ್ನೇ ಇಳಿ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.16): ವಯಸ್ಸಿನಲ್ಲಿದ್ದಾಗ ಮದುವೆಯಾಗೋದು (Marriage) ಸಾಮಾನ್ಯ. ಆದ್ರೆ ಇಲ್ಲೊಬ್ಬರು ಇಳಿ ವಯಸ್ಸಿನಲ್ಲಿ (Old Age) ಮದುವೆಯಾಗಿದ್ದಾರೆ. ಅದೂ ಸಹ 75 ರ ಇಳಿ ವಯಸ್ಸಿನಲ್ಲಿ. ಹೀಗೆ ಮದುವೆಯಾದವರು ಯಾರೋ ಸಾಮಾನ್ಯ ವ್ಯಕ್ತಿಯಲ್ಲ. ಒಂದೊಮ್ಮೆ ಪಾಲಿಕೆ ಮೇಯರ್ (Corporation Mayor) ಆಗಿದ್ದವರು ಈಗ 66 ವಯಸ್ಸಿನ ಮಹಿಳೆಯ (Women) ಜೊತೆ ವಿವಾಹವಾಗಿದ್ದಾರೆ. ಇಂಥದ್ದೊಂದು ಅಪರೂಪದ ಮದುವೆಗೆ ವಾಣಿಜ್ಯ ನಗರಿ ಹುಬ್ಬಳ್ಳಿ (Hubballi) ಸಾಕ್ಷಿಯಾಗಿದೆ.  


75ರ ವಯಸ್ಸಲ್ಲಿ ಮಾಜಿ ಮೇಯರ್ ಮದುವೆ


ಹುಬ್ಬಳ್ಳಿಯಲ್ಲೊಂದು ಮುದುಕನ ಮದುವೆ ನಡೆದಿದೆ. ಮಾಜಿ ಮೇಯರ್ ವೊಬ್ಬರು 75ರ ವಯಸ್ಸಿನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾರೆ. 75 ರ ವಯಸ್ಸಿನಲ್ಲಿ ಮದುವೆಯಾದ ಮಾಜಿ ಮೇಯರ್ ರನ್ನು ಡಿ.ಕೆ. ಚವ್ಹಾಣ ಎಲ್ಲರ ಗಮನಸೆಳೆದಿದ್ದಾರೆ. ಡಿ.ಕೆ.ಚವ್ಹಾಣ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು, ಅದೇ ಪಕ್ಷದಿಂದ ಮೇಯರ್ ಆಗಿ ಒಂದು ವರ್ಷದ ಕಾಲ ಕಾರ್ಯನಿರ್ವಹಿಸಿದ್ದರು.


A former mayor who got married at the age of 75 in hubballi Saklb pvn
ಮಾಜಿ ಮೇಯರ್ ಮದುವೆ


ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೇಯರ್ ಆಗಿ 1 ವರ್ಷ ಕೆಲಸ


2008-07 ರ ಅವಧಿಯಲ್ಲಿ ಹುಬ್ಬಳ್ಳಿ – ಧಾರವಾಡ ಪಾಲಿಕೆ ಮೇಯರ್ ಆಗಿ ಕೆಲಸ ಮಾಡಿದ್ದರು. ಇದೀಗ 75 ರ ಪ್ರಾಯದಲ್ಲಿ ಎರಡನೇold Age ವಿವಾಹವಾಗಿದ್ದಾರೆ. ಮೊದಲ ಪತ್ನಿ ಶಾರದಾ ಕಳೆದ ಮೂರು ತಿಂಗಳ ಹಿಂದೆ ನಿಧನರಾಗಿದ್ದರು. ಪತ್ನಿ ನಿಧನರಾದ ಮೂರು ತಿಂಗಳ ನಂತರ ಚವ್ಹಾಣ ಮತ್ತೊಂದು ಮದುವೆಯಾಗಿದ್ದಾರೆ. ಅದೂ ಸಹ ಪತ್ನಿಯ ಸಹೋದರಿಯನ್ನೇ ಚವ್ಹಾಣ ಮದುವೆಯಾಗಿದ್ದಾರೆ. ಪತ್ನಿಯ ಅಕ್ಕ ಅನಸೂಯಾರನ್ನ ಡಿ.ಕೆ.ಚವ್ಹಾಣ ವಿವಾಹವಾಗಿದ್ದಾರೆ.


ಪತ್ನಿಯ ಅಕ್ಕನ ಜೊತೆಯೇ ವಿವಾಹ 


ಅನಸೂಯ ಅವರು ಚವ್ಹಾಣ ಅವರ ಮೊದಲ ಪತ್ನಿ ಶಾರದಾಳ ಅಕ್ಕ ಆಗಿದ್ದರು. 66 ವರ್ಷ ವಯಸ್ಸಾಗಿದ್ದರೂ ಅನಸೂಯ ಅವರಿಗೆ ಮದುವೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಯಾಗಿರೋದಾಗಿ ಡಿ.ಕೆ.ಚವ್ಹಾಣ ತಿಳಿಸಿದ್ದಾರೆ. ಇದಕ್ಕೆ ಕುಟುಂಬದ ಎಲ್ಲಾ ಸದಸ್ಯರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.


3 ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಭಾಗಿ


ಹುಬ್ಬಳ್ಳಿಯಲ್ಲಿ ನಡೆದ ಸರಳ ವಿವಾರ ಸಮಾರಂಭವನ್ನು ಶಾಸ್ತ್ರೋಕ್ತವಾಗಿಯೇ ನೆರವೇರಿಸಲಾಗಿದ್ದು, ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಭಾಗಿಯಾಗಿದ್ದರು. ಕುಟುಂಬದ ಸದಸ್ಯರ ಜೊತೆಗೆ ಸಂಬಂಧಿಕರು, ಕಾಲೋನಿಯ ಜನ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.


ಇದನ್ನೂ ಓದಿ: No Mask Mandatory: ಇನ್ಮುಂದೆ ವಿಮಾನ ಪ್ರಯಾಣದ ವೇಳೆ ಮಾಸ್ಕ್​ ಕಡ್ಡಾಯವಲ್ಲ- ಕೇಂದ್ರ ಸರ್ಕಾರ


ಚುನುವಣಾ ಸುಧಾರಣೆಗಳ ಕುರಿತು ಸ್ಪೀಕರ್ ಕಾಗೇರಿ ಜೊತೆ ಸಂವಾದ


ಧಾರವಾಡ ಜಿಲ್ಲಾಡಳಿತದ ವತಿಯಿಂದ ಬಿವಿಬಿ ಕಾಲೇಜಿನಲ್ಲಿ ಚುನಾವಣಾ ಸುಧಾರಣ ಕ್ರಮಗಳ ಕುರಿತು ಸಂವಾದ ಆಯೋಜಿಸಲಾಗಿತ್ತು. ಸಂವಾದದಲ್ಲಿ ಭಾಗಿಯಾದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಎಲ್ಲ ಕ್ಷೇತ್ರಗಳೂ ಕಲುಷಿತಗೊಂಡಿವೆ. ನಾವೆಲ್ಲಾ ವಿಷ ವರ್ತುಲದಲ್ಲಿದ್ದೇವೆ. ಕೇವಲ ರಾಜಕೀಯ ರಂಗವೊಂದೇ ಕಲುಷಿತಗೊಂಡಿಲ್ಲ. ಎಲ್ಲ ರಂಗಗಳಲ್ಲಿಯೂ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಪತ್ರಕರ್ತರು, ವೈದ್ಯರು, ವಕೀಲರು ಇತರರು ತಮ್ಮ ಜವಾಬ್ದಾರಿ ಅರಿಯಬೇಕು. ಹಣವನ್ನು ನ್ಯಾಯ ಮಾರ್ಗದಿಂದ ಗಳಿಸಬೇಕು. ನಮ್ಮಲ್ಲಿ ಮೊದಲು ಪರಿವರ್ತನೆ ಆಗಬೇಕು. ಜನರು ಮೊದಲು ಸರಿಯಾದ್ರೆ, ವ್ಯವಸ್ಥೆ ಸರಿಹೋಗುತ್ತೆ ಎಂದು ಕಾಗೇರಿ ಅಭಿಪ್ರಾಯಪಟ್ಟರು.

Published by:ಪಾವನ ಎಚ್ ಎಸ್
First published: