Flowers: ಕೋಲಾರದಲ್ಲಿ ಮಳೆಯಿಂದ ಹಾಳಾದ ಹೂವು, ಬೇಡಿಕೆಯಿದ್ದರೂ ಮಾರುಕಟ್ಟೆಯಲ್ಲಿಲ್ಲ ಬೆಲೆ!

ಕಳೆದೊಂದು ವಾರದಿಂದ ಮಳೆಯಾಗ್ತಿರೊ ಹಿನ್ನಲೆ,  ಚೆಂಡು ಹೂ, ಸೇವಂತಿಗೆ ಹೂವಿನಲ್ಲಿ ತೇವಾಂಶ ಹೆಚ್ಚಾಗಿ ಹೂವಿಗೆ ಬೇಡಿಕೆ ಕುಸಿತವಾಗಿದೆ. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

ಸಂಕಷ್ಟದಲ್ಲಿ ಕೋಲಾರದ ಹೂ ಬೆಳೆಗಾರ

ಸಂಕಷ್ಟದಲ್ಲಿ ಕೋಲಾರದ ಹೂ ಬೆಳೆಗಾರ

  • Share this:
ಕೋಲಾರ: ಬಯಲುಸೀಮೆ ಕೋಲಾರ (Kolar) ಜಿಲ್ಲೆಯಲ್ಲಿ ವರುಣದೇವ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಕಳೆದ ತಿಂಗಳು ಸುರಿದ ಮಳೆಯಿಂದಾಗಿ (Heavy Rain) ಕೋಟ್ಯಾಂತರ ರೂಪಾಯಿ ಬೆಳೆಹಾನಿಯಾಗಿದ್ದು, ಇದೀಗ ಮತ್ತೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮತ್ತೊಮ್ಮೆ ರೈತರು (Farmers) ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿ (Crop Loss) ಸಂಭವಿಸಿದೆ. ಕೋಲಾರ ನಗರದಲ್ಲಿನ ಕೋಲಾರಮ್ಮ ಕೆರೆ (Kolaramma Lake), ರಾಜಕಾಲುವೆ ಅಕ್ಕ ಪಕ್ಕದ ತೋಟಗಳಿಗೆ ಮಳೆ ನೀರು ನುಗ್ಗಿದ್ದು, ಅಮ್ಮೇರಹಳ್ಳಿ ಕೆರೆಗೆ ಹೊರ ಹರಿವು ಹೆಚ್ಚಾಗಿ, ಕೋಲಾರಮ್ಮ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೋಲಾರ ತಾಲೂಕಿನ ನರಸಾಪುರ, ದಿನ್ನೇಹೊಸಹಳ್ಳಿ ರಸ್ತೆ ಮಾರ್ಗದಲ್ಲಿ ಕೆಸಿ ವ್ಯಾಲಿ (KC Valley) ನೀರಿನ ಕಾಲುವೆ ತುಂಬಿ ಅಕ್ಕ ಪಕ್ಕದ ತೋಟಗಳಿಗೆ ನೀರು ನುಗ್ಗಿದೆ. ಅದರ ಪರಿಣಾಮ ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆನಾಶವಾಗಿದೆ.

ಕೆರೆ ನೀರು ನುಗ್ಗಿ ಅಕ್ಕಪಕ್ಕದ ಜಮೀನಿನ ಬೆಳೆ ನಾಶ

ಮುರುಗೇಶ್, ವೆಂಕಟೇಶ್, ನಾರಾಯಣಪ್ಪ ಎನ್ನುವ ರೈತರಿಗೆ ಸೇರಿದ  ಹತ್ತಾರು ಎಕರೆ ಬೀನ್ಸ್, ಬಜ್ಜಿ ಮೆಣಸು, ಟೊಮೆಟೊ ತೋಟಗಳಲ್ಲಿ ಬೆಳೆನಾಶವಾಗಿದೆ. ಕೆಸಿ ವ್ಯಾಲಿ ನೀರಿನ ಕಾಲುವೆಗೆ ತಡೆಗೋಡೆ ನಿರ್ಮಿಸುವಂತೆ  ಹಲವು ಬಾರು ರೈತರು ಮನವಿ ಮಾಡಿದ್ರು  ಅಧಿಕಾರಿಗಳು ಸ್ಪಂದಿಸದೇ, ಇದೀಗ ಬೆಳೆದ ಫಸಲು ನೀರು ಪಾಲಾಗಿದೆ.

ಕಡಿಮೆ ಬೆಲೆಗೆ ಹೂ ಮಾರಾಟ


300 ಹೆಕ್ಟೇರ್‌ ಹೆಚ್ಚಿನ ಪ್ರದೇಶಕ್ಕೆ ಹಾನಿ

ಕೋಲಾರದಲ್ಲಿ ಕಳೆದ ಮಂಗಳವಾರ ದೊರೆತ ಮಾಹಿತಿಯಂತೆ ಮಳೆಯಿಂದಾಗಿ 300  ಹೆಕ್ಟೇರ್ ಗೂ ಹೆಚ್ಚಿನ  ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಅದರಲ್ಲಿ 128 ಹೆಕ್ಟೇರ್ ಟೊಮೆಟೊ, 50 ಹೆಕ್ಟೇರ್ ರಾಗಿ,  24 ಹೆಕ್ಟೇರ್ ವಿವಿಧ ಹೂ ತೋಟದ  ಬೆಳೆಹಾನಿಯಾಗಿದೆ. ಉಳಿದಂತೆ 70 ಹೆಕ್ಟೇರ್ ಪ್ರದೇಶದ ಕ್ಯಾರೆಟ್, ಬೀನ್ಸ್, ಎಲೆಕೋಸು, ಬೀಟ್ರೋಟ್ ಬೆಳೆನಾಶವಾಗಿದೆ. ಕೇವಲ 3 ದಿನಗಳಲ್ಲಿ 1.30 ಕೋಟಿ ಮೌಲ್ಯ ರಷ್ಟು ಬೆಳೆಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Bank Notice: ಬೆಳೆ ಹಾಳು ಮಾಡಿದ ನೆರೆ, ಬ್ಯಾಂಕ್‌ ನೋಟಿಸ್‌ನ ಬರೆ! ತಲೆ ಮೇಲೆ ಕೈಹೊತ್ತು ಕುಳಿತ ಅನ್ನದಾತ

ಬೇಡಿಕೆಯಿದ್ದರೂ ಹೂವುಗಳಿಗಿಲ್ಲ ಬೆಲೆ

ಮಾರುಕಟ್ಟೆಯಲ್ಲಿ ಹೂವಿಗೆ ಭರ್ಜರಿ ಬೆಲೆಯಿದ್ದರು, ಕೋಲಾರದ ಹೂವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿಯಾಗಿತ್ತು. ಕನಕಾಂಬರ, ಮಲ್ಲಿಗೆ ಹೂವು  ಒಂದೂವರೆ ಸಾವಿರ ರೂಪಾಯಿ ಗಡಿದಾಟಿತ್ತು. ಸೇವಂತಿಗೆ, ರೋಜ್ ಹೂಗಳು ಸಹ ಬೆಲೆ ಏರಿಕೆಯಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರು ಕೋಲಾರದ ರೈತರು  ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಿಂದಾಗಿ ಹಾಳಾದ ಹೂವುಗಳು


ಮಳೆಯಿಂದಾಗಿ ಹಾಳಾದ ಹೂವುಗಳು

ಕಳೆದೊಂದು ವಾರದಿಂದ ಮಳೆಯಾಗ್ತಿರೊ ಹಿನ್ನಲೆ,  ಚೆಂಡು ಹೂ, ಸೇವಂತಿಗೆ ಹೂವಿನಲ್ಲಿ ತೇವಾಂಶ ಹೆಚ್ಚಾಗಿ ಹೂವಿಗೆ ಬೇಡಿಕೆ ಕುಸಿತವಾಗಿದೆ. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

ಇದನ್ನೂ ಓದಿ:  Heavy Rain: ರಾಮನಗರ ಜಿಲ್ಲೆಯಲ್ಲಿ ಅತಿವೃಷ್ಟಿ, ರೈತರ ಜಮೀನಿನಲ್ಲೇ ಏಕಾಏಕಿ ಹಳ್ಳ ಸೃಷ್ಟಿ!

ಕಡಿಮೆ ಬೆಲೆಗೆ ಹೂವು ಮಾರಾಟ ಮಾಡಿದ ರೈತರು

ಮಳೆಯಿಂದಾಗಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಒಂದರಲ್ಲೆ 28 ಹೆಕ್ಟೇರ್ ನಷ್ಟು ಹೂವು ಬೆಳೆನಾಶವಾಗಿದೆ. ಲಕ್ಷ ಲಕ್ಷ ಬಂಡವಾಳ ಹಾಕಿದ್ದ ರೈತರ ಬೆಳೆಗಳು ಅಕಾಲಿಕ ಮಳೆಯಿಂದ ಗುಣಮಟ್ಟವಿಲ್ಲದೆ ನೆಲಕಚ್ಚಿದೆ. ಸಿಗುವ ಅಲ್ಪ ಸ್ವಲ್ಪ ಹಣದಲ್ಲಿ ಹೂವು ಮಾರುಕಟ್ಟೆಗೆ ಸಾಗಿಸಿದರೂ, ಮಾರಾಟ ವೆಚ್ಚವೂ ಉಳಿಯುತ್ತಿಲ್ಲ. ಹಾಗಾಗಿ ಬಹುತೇಕ ರೈತರು ಸಿಕ್ಕ ಸಿಕ್ಕ ಬೆಲೆಗೆ ತೋಟಗಳ ಬಳಿಯೇ ಹೂವಿನ ಮಾರಾಟಕ್ಕೆ ಮುಂದಾಗಿದ್ದಾರೆ.
Published by:Annappa Achari
First published: