• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ತವರುಮನೆಗೆ ಹೋದ ಹೆಂಡತಿ ವಾಪಸ್ ಬರಲಿಲ್ಲವೆಂಬ ಕೋಪದಿಂದ ಮಗನನ್ನೇ ಕೊಂದ ತಂದೆ..!

ತವರುಮನೆಗೆ ಹೋದ ಹೆಂಡತಿ ವಾಪಸ್ ಬರಲಿಲ್ಲವೆಂಬ ಕೋಪದಿಂದ ಮಗನನ್ನೇ ಕೊಂದ ತಂದೆ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೆಬ್ರವರಿ 1 ರಂದು ಮನೆಯ ಮುಂದಿನ‌ ಅಂಗಳದಲ್ಲಿ ಆಟವಾಡುತ್ತಿದ್ದ ಮಗನನ್ನು ಯಲ್ಲಪ್ಪ  ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದ. ಒಂದೂವರೆ ತಾಸಿನ ನಂತರ ಒಬ್ಬನೇ ವಾಪಸ್ಸಾಗಿದ್ದ. ಆಗ ಕೇಳಿದರೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಕೊಲೆ ಮಾಡಿರುವ ಯಲ್ಲಪ್ಪ ತಾನು ಮಗನನ್ನು ಕೊಂದಿಲ್ಲ ಎಂದು ಹೇಳುತ್ತಾ ಬಂದಿದ್ದ.

ಮುಂದೆ ಓದಿ ...
  • Share this:

ರಾಯಚೂರು(ಫೆ.04): ಕೆಲವರು ಮಕ್ಕಳು ಬೇಕೆಂದು ಹರಕೆ ಹೊರುತ್ತಾರೆ, ಆದರೆ ಇಲ್ಲೊಬ್ಬ ತಂದೆ ತನ್ನ ಮಗನನ್ನೆ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಗನನ್ನು ಕೊಂದು ಏನು ಗೊತ್ತಿಲ್ಲದಂತೆ ನಟಿಸಿದ್ದಾನೆ. ಮುದ್ದಾದ ಮಗುವಿಗೆ ಕೇವಲ 4 ವರ್ಷ ಅಷ್ಟೇ. ಮಗು ನಿನ್ನೆ ರಾತ್ರಿ ಕೊಳಬಾಳ ಬಳಿಯ ಹಳ್ಳದಲ್ಲಿ ಸತ್ತ ರೀತಿಯಲ್ಲಿ  ಪತ್ತೆಯಾಗಿದೆ. ಈ ಮಗುವನ್ನು ಆತನ ತಂದೆಯೇ ಕೊಲೆ ಮಾಡಿದ್ದಾನೆ ಎಂಬುದು ದುರಂತ. ತನ್ನ ಕರಳು ಬಳ್ಳಿಯನ್ನು  ಕಟುಕ ಹೃದಯದ ತಂದೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ್ದನ್ನು ಕೊಲೆಗಾರ ಒಪ್ಪಿಕೊಂಡಿದ್ದಾನೆ.


ಸಿಂಧನೂರು ತಾಲೂಕಿನ ಕಲ್ಮಂಗಿಯ ಯಲ್ಲಪ್ಪ ಎಂಬುವವನಿಗೆ ಅದೇ ತಾಲೂಕಿನ‌ ಎಲೆಕೂಡ್ಲಗಿ ಗ್ರಾಮದ ಪಾರ್ವತಿ ಎಂಬುವವರೊಂದಿಗೆ 8 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದಾಗಿನಿಂದಲೂ ಹೆಂಡತಿಯೊಂದಿಗೆ ಜಗಳವಾಡುತ್ತಾ ಇದ್ದ. ಅಲ್ಲದೆ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ,. ಗಂಡನ ಕಿರುಕುಳವನ್ನು ಪಾರ್ವತಿ ಸಹಿಸಿಕೊಳ್ಳುತ್ತಾ ಬಂದಿದ್ದಳು.  ಪಾರ್ವತಿ ಹಾಗೂ ಯಲ್ಲಪ್ಪನ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಗಂಡು ಮಕ್ಕಳಿದ್ದಾರೆ; ಅದರಲ್ಲಿ ಮಹೇಶನಿಗೆ 4 ವರ್ಷ. ಇತ್ತೀಚಿಗೆ ಹೆಂಡತಿಗೆ 50 ಸಾವಿರ ರೂಪಾಯಿಯನ್ನು ತವರು ಮನೆಯಿಂದ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಿದ್ದಾನೆ. ಒಂದೂವರೆ ತಿಂಗಳ ಹಿಂದೆ 50 ಸಾವಿರ ರೂಪಾಯಿ ತೆಗೆದುಕೊಂಡು ಬಂದರೆ ಮಾತ್ರ ನಿನಗೆ ನೀನು ನನ್ನ ಮನೆಗೆ ಬಾ, ಎಂದು ತವರು ಮನೆಗೆ ಕಳುಹಿಸಿದ್ದ ಎಂದು ತಿಳಿದು ಬಂದಿದೆ.


ತವರು ಮನೆಗೆ ಹೋಗಿದ್ದ ಹೆಂಡತಿಯನ್ನು ನೋಡಲು ಬಂದು ಆಗಾಗ ಜಗಳ ಮಾಡಿಕೊಳ್ಳುತ್ತಿದ್ದ. ಈ ಮಧ್ಯೆ ಇತ್ತೀಚಿಗೆ ಹೆಂಡತಿ ಮನೆಯಲ್ಲಿದ್ದ ಆಡು ಮರಿಯನ್ನು ಮಾರಾಟ ಮಾಡಿದ್ದ. ಆದರೆ ಅದು ದಾರಿ ತಪ್ಪಿ ಕಳ್ಳತನವಾಗಿದೆ ಎಂಬಂತೆ ಬಿಂಬಿಸಿದ್ದ. ತವರ ಮನೆಯವರು ಕೇಳಿದರೆ ಅವರೊಂದಿಗೆ ಹುಡುಕುವ ನಾಟಕ ಮಾಡಿದ್ದ. ಅದೇ ರೀತಿ ಈಗ ಮಗನನ್ನು ಕರೆದುಕೊಂಡು  ಹೋಗಿ ಕೊಲೆ ಮಾಡಿದ್ದಾನೆ.


ಚಳಿಗಾಲದಲ್ಲಿ ಹಸಿರು ಬಟಾಣಿ ತಿನ್ನುವುದರಿಂದ ಸಿಗುವ 6 ಪ್ರಯೋಜನಗಳು ಹೀಗಿವೆ


ಈ ಘಟನೆಯ ಪ್ರತ್ಯಕ್ಷ ಸಾಕ್ಷಿ ಮಹೇಶನೊಂದಿಗೆ ಇದ್ದ ವಿಷ್ಣು ಎಂಬ ಹುಡುಗ. ಫೆಬ್ರವರಿ 1 ರಂದು ಮನೆಯ ಮುಂದಿನ‌ ಅಂಗಳದಲ್ಲಿ ಆಟವಾಡುತ್ತಿದ್ದ ಮಗನನ್ನು ಯಲ್ಲಪ್ಪ  ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದ. ಒಂದೂವರೆ ತಾಸಿನ ನಂತರ ಒಬ್ಬನೇ ವಾಪಸ್ಸಾಗಿದ್ದ. ಆಗ ಕೇಳಿದರೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಕೊಲೆ ಮಾಡಿರುವ ಯಲ್ಲಪ್ಪ ತಾನು ಮಗನನ್ನು ಕೊಂದಿಲ್ಲ ಎಂದು ಹೇಳುತ್ತಾ ಬಂದಿದ್ದಾನೆ. ವಿಷ್ಣು ಮಗವನ್ನು ಕರೆದುಕೊಂಡು ಹೋಗಿದ್ದನ್ನು ನೋಡಿದ್ದಾಗಿ ಹೇಳಿದ ನಂತರ ಮೊದಲು ಯಲ್ಲಪ್ಪನ ಅಕ್ಕ ಮನೆ ಇರುವ ಹಂಚಿನಾಳಕ್ಕೆ ಕರೆದುಕೊಂಡು ಹೋಗಿದ್ದಾಗಿ ಹೇಳಿದ್ದಾನೆ. ಅಲ್ಲಿಗೆ ಹೋದರೆ ಯಲ್ಲಪ್ಪನ ಅಕ್ಕ ಸೇರಿ ಅವರ ಕುಟುಂಬದವರು ಇವರ ಮೇಲೆಯೇ ಆರೋಪ ಹೊರಿಸಿದ್ದಾರೆ.


ಅನುಮಾನ ಬಂದು ತುರ್ವಿಹಾಳ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪೊಲೀಸರ ಮುಂದೆ ತನಗೇನು ಗೊತ್ತಿಲ್ಲ ಎಂದು ಹೇಳಿದ್ದಾನೆ. ನಾಲ್ಕು ಒದ್ದಾಗ ತಾನು ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ನಂತರದಲ್ಲಿ ಕೊಲೆ ಮಾಡಿದ ಸ್ಥಳ ತೋರಿಸಿದ್ದ ಮುಖವನ್ನು ಹಳ್ಳದಲ್ಲಿ ಹುದುಗಿಸಿದ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.


ಈ ಘಟನೆಯ ಬಗ್ಗೆ ಆರೋಪಿ ಯಲ್ಲಪ್ಪನನ್ನು ಕೇಳಿದರೆ, ತವರು ಮನೆಗೆ ಹೋಗಿದ್ದ ನನ್ನ ಹೆಂಡತಿ ಮನೆಗೆ ಬಂದಿರಲಿಲ್ಲ. ಹೀಗಾಗಿ ಸಿಟ್ಟು ಬಂದು ಕತ್ತು ಹಿಸುಕಿ ಕೊಂದಿದ್ದೇನೆ ಎಂದು ಹೇಳುತ್ತಿದ್ದಾನೆ. ತನ್ನ ಕುಡಿಯನ್ನೆ ಕತ್ತು ಹಿಸುಕಿ ಕೊಲೆ ಮಾಡಿದ ನೀಚ ತಂದೆಯನ್ನು ಬಿಡಬಾರದು, ಆತನ ಕೈ ಕಾಲು ಕತ್ತರಿಸಬೇಕು. ಇಲ್ಲವೇ ಗಲ್ಲು ಶಿಕ್ಷೆಯಾಗಬೇಕು. ಒಂದು ವೇಳೆ ಬಿಟ್ಟರೆ ಜೈಲಿನಿಂದ ಹೊರ ಬಂದು ಮತ್ತೆ ಇದ್ದ ಹೆಂಡತಿ ಇನ್ನೊಂದು ಮಗುವನ್ನು ಸಹ ಕೊಲ್ಲಲಿದ್ದಾನೆ. ಪದೇ ಪದೇ ಹೆಂಡತಿ‌ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಹೇಳುತ್ತಿದ್ದ ಎಂದು ಸಂಬಂಧಿಕರು ಹೇಳಿದ್ದಾರೆ.


ತಂದೆಯ ಕುಡಿತ ಚಟಕ್ಕೆ ಏನು ಅರಿಯದ ಮುಗ್ದ ಬಾಲಕನ ಬಲಿಯಾಗಿದೆ, ಈ ಪ್ರಕರಣವನ್ನು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Published by:Latha CG
First published: