• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ‘50 ವರ್ಷ ನೀವು, ನಿಮ್ಮಪ್ಪ ನಮ್ಮ ಗ್ರಾಮಕ್ಕೆ ಏನ್ ಮಾಡಿದ್ದೀರಿ?; ಕಾಂಗ್ರೆಸ್‌ ಶಾಸಕನಿಗೆ ರೈತನಿಂದ ಕ್ಲಾಸ್‌

‘50 ವರ್ಷ ನೀವು, ನಿಮ್ಮಪ್ಪ ನಮ್ಮ ಗ್ರಾಮಕ್ಕೆ ಏನ್ ಮಾಡಿದ್ದೀರಿ?; ಕಾಂಗ್ರೆಸ್‌ ಶಾಸಕನಿಗೆ ರೈತನಿಂದ ಕ್ಲಾಸ್‌

ಶಾಸಕ ಅಜಯ್‌ ಸಿಂಗ್‌ಗೆ ರೈತನಿಂದ ಕ್ಲಾಸ್‌

ಶಾಸಕ ಅಜಯ್‌ ಸಿಂಗ್‌ಗೆ ರೈತನಿಂದ ಕ್ಲಾಸ್‌

ರೈತನ ಪ್ರಶ್ನೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಶಾಸಕ ಅಜಯ್ ಸಿಂಗ್ ಉತ್ತರವಿಲ್ಲದೆ ಸುಮ್ಮನೆ ನಿಂತುಕೊಂಡರು. ಆಗ ಪಕ್ಷದ ಕಾರ್ಯಕರ್ತರು ಆ ರೈತನನ್ನು ವೇದಿಕೆಯಿಂದ ಕೆಳಗೆ ಇಳಿಸಿ ದೂರ ಎಳೆದುಕೊಂಡು ಹೋಗಿ ಹಲ್ಲೆಗೆ ಮುಂದಾಗಿದ್ದಾರೆ. ಸದ್ಯ ಶಾಸಕ ಅಜಯ್ ಸಿಂಗ್ ಅವರಿಗೆ ಅಭಿವೃದ್ಧಿ ಆಗದ ಕುರಿತು ರೈತ ವೇದಿಕೆಯಲ್ಲೇ ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದೆ ಓದಿ ...
  • Share this:

ಕಲಬುರಗಿ: ಚುನಾವಣೆ ಹತ್ತಿರ ಬಂದಾಗ ಮತದಾರರ ಬಳಿ ಬಂದು ಜನಪ್ರತಿನಿಧಿಗಳು ಓಲೈಕೆ ರಾಜಕಾರಣ (Karnataka Politics) ಹೇಗೆ ಮಾಡ್ತಾರೋ, ಅದೇ ರೀತಿ ಮತದಾರರಿಂದ ಮಂಗಳಾರತಿಯನ್ನೂ ಮಾಡಿಸಿಕೊಳ್ತಾರೆ. ಚುನಾವಣೆ ನಡೆದು (Kalaburagi) ಐದು ವರ್ಷಗಳ ಕಾಲ ಜನಸಾಮಾನ್ಯರ ಬಳಿ ತಲೆ ಹಾಕದ ರಾಜಕಾರಣಿಗಳನ್ನು ಕಂಡು ಜನರು ಸಹಜವಾಗಿಯೇ ಸಿಟ್ಟಿಗೇಳ್ತಾರೆ. ಹೀಗಾಗಿ ಚುನಾವಣೆ ಗೆದ್ದ ಬಳಿಕ ದರ್ಪ ತೋರುವ ರಾಜಕಾರಣಿಗಳು ಚುನಾವಣೆ ಹತ್ತಿರ (Karnataka Assembly Election) ಬಂದಾಗ ಎಷ್ಟೇ ಉಗಿದು ಉಪ್ಪಿನಕಾಯಿ ಹಾಕಿದ್ರೂ ತಾಳ್ಮೆಯಿಂದಲೇ ಕೇಳಿಸಿಕೊಳ್ತಾರೆ. ಇದೀಗ ಇಂತಹದೇ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ.


ಕರ್ನಾಟಕದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ಹೀಗಾಗಿ ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳು ಮತ್ತೆ ಜನಸಾಮಾನ್ಯರ ಬಳಿಗೆ ಹೆಚ್ಚು ಹೆಚ್ಚು ಬರಲು ಶುರು ಮಾಡಿದ್ದಾರೆ. ಹೀಗಾಗಿ ಇತ್ತ ಕಲಬುರಗಿಯಲ್ಲಿ ಕಾಂಗ್ರೆಸ್‌ ಶಾಸಕ ಅಜಯ್ ಸಿಂಗ್ ಕೂಡ ಇಂತಹದೇ ಸಿಟ್ಟಿಗೆ ಗುರಿಯಾಗಿದ್ದಾರೆ. ವೇದಿಕೆ ಮೇಲೆಯೆ ಶಾಸಕನಿಗೆ ರೈತನೊಬ್ಬ ಕ್ಲಾಸ್‌ ತೆಗೆದುಕೊಂಡಿದ್ದು, ಇದರಿಂದ ಶಾಸಕ ತೀವ್ರ ಮುಜುಗರಕ್ಕೆ ಗುರಿಯಾದ ಪ್ರಸಂಗ ನಡೆಯಿತು.


ಇದನ್ನೂ ಓದಿ: Siddaramaiah: ‘ರಕ್ತ ಕೊಟ್ಟೇವು, ನಿಮ್ಮನ್ನು ಬಿಡೆವು’ ಕೋಲಾರದಲ್ಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಹೆಚ್ಚಿದ ಒತ್ತಡ!


ವೇದಿಕೆಗೆ ಬಂದು ಶಾಸಕನಿಗೆ ಕ್ಲಾಸ್‌!


ಅಂದ ಹಾಗೆ, ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸುಂಬುಡ್ ಗ್ರಾಮದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕೂಡ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅಭಿವೃದ್ದಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಶಾಸಕ ಅಜಯ್ ಸಿಂಗ್ ವಿರುದ್ಧ ರೈತನೊಬ್ಬ ವೇದಿಕೆ ಮೇಲೆ ಬಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆಯಿತು.


ಗ್ರಾಮದ ರೈತ ಹಣಮಂತರಾಯ ಎಂಬ ವ್ಯಕ್ತಿ ವೇದಿಕೆಯ ಮೇಲೆಯೇ ಶಾಸಕ ಅಜಯ್ ಸಿಂಗ್‌ರನ್ನು ತರಾಟಗೆ ತೆಗೆದುಕೊಂಡಿದ್ದು, ಸ್ಟೇಜ್ ಮೇಲೆ ಬಂದ ರೈತ, ನಿಮ್ಮ ಅಪ್ಪ ಮತ್ತು ನೀವು ಕಳೆದ 50 ವರ್ಷ ರಾಜಕೀಯ ಮಾಡಿದ್ದೀರಾ, ನಮ್ಮ ಗ್ರಾಮಕ್ಕೆ ನೀವು ಏನು ಕೆಲಸ ಮಾಡಿದ್ದೀರಾ? ಇಂದಿರಾ ಗಾಂಧಿ ವಸತಿ ಶಾಲೆ ಕಾಮಗಾರಿ ಆಗಿ 2 ವರ್ಷ ಆಗಿದೆ. ಇನ್ನೂ ಉದ್ಘಾಟನೆಯೇ ಆಗಿಲ್ಲ.ನೀವು ಏನ್ ಮಾಡ್ತಿದ್ದೀರಾ? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದರು.


ರೈತನ ಪ್ರಶ್ನೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಶಾಸಕ ಅಜಯ್ ಸಿಂಗ್ ಉತ್ತರವಿಲ್ಲದೆ ಸುಮ್ಮನೆ ನಿಂತುಕೊಂಡರು. ಆಗ ಪಕ್ಷದ ಕಾರ್ಯಕರ್ತರು ಆ ರೈತನನ್ನು ವೇದಿಕೆಯಿಂದ ಕೆಳಗೆ ಇಳಿಸಿದ ಶಾಸಕನ ಬೆಂಬಲಿಗರು 'ಏ ನಡಿ ಇಲ್ಲಿಂದ ನಿಂಗೇನ್ ಗೊತ್ತಾಗಲ್ಲ' ಅಂತಾ ಹೇಳಿ ದೂರ ಎಳೆದುಕೊಂಡು ಹೋಗಿ ಹಲ್ಲೆಗೆ ಮುಂದಾಗಿದ್ದಾರೆ. ಸದ್ಯ ಶಾಸಕ ಅಜಯ್ ಸಿಂಗ್ ಅವರಿಗೆ ಅಭಿವೃದ್ಧಿ ಆಗದ ಕುರಿತು ರೈತ ವೇದಿಕೆಯಲ್ಲೇ ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಸ್ಟ್‌ಗೆ ಪರ ವಿರೋಧ ಕಾಮೆಂಟ್‌ಗಳು ಬರುತ್ತಿದೆ.


ಇದನ್ನೂ ಓದಿ: Congress: ಸಿದ್ದರಾಮಯ್ಯ ನಿರ್ಧಾರ ಹಿಂದಿದ್ಯಾ ರಾಹುಲ್ ಗಾಂಧಿ ಸಲಹೆ? ರಾಜ್ಯ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್


ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ಧ


ಕಲಬುರಗಿ: ಇನ್ನು ಸಿದ್ದರಾಮಯ್ಯ ಅವರು ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡಲಿ. ಅವರು ಬರುವುದಾದರೆ ನಾನು ಕ್ಷೇತ್ರ ತ್ಯಾಗ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಬಿ ಆರ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

top videos


    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ರಾಮಯ್ಯ ಅವರು ಕಲಬುರ್ಗಿಯ ಆಳಂದಕ್ಕೆ ಬಂದು ಸ್ಪರ್ಧೆ ಮಾಡಲಿ. ನಾನು ಅವರಿಗಾಗಿ ನನ್ನ ಕ್ಷೇತ್ರ ತ್ಯಾಗ ಮಾಡಲು ಸಿದ್ದ. ಸಿದ್ದರಾಮಯ್ಯ ಅವರು ಬಂದು ನಾಮಿನೇಷನ್ ಹಾಕಿ ಹೋದ್ರೆ ಸಾಕು ಗೆಲ್ಲಿಸಿಕೊಂಡು ಬರುತ್ತೇವೆ. ಸಿದ್ರಾಮಯ್ಯ ಅವರು ಬಂದು ಸ್ಪರ್ಧೆ ಮಾಡಿದ್ರೆ, ನನ್ನಷ್ಟು ಖುಷಿ ಪಡುವವರು ಬೇರೆ ಯಾರೂ ಇಲ್ಲ ಎಂದು ಹೇಳಿದರು.

    First published: