• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೇಂದ್ರದ ವಿರುದ್ಧ ದೇಶಾದ್ಯಂತ ರೈತರ ಹೋರಾಟ ; ಹಾವೇರಿಯಲ್ಲಿ ನೀರಿನಲ್ಲಿ ಮುಳುಗಿದ್ದ ಬೆಳೆಯ ರಕ್ಷಣೆಗೆ ರೈತನ ಪರದಾಟ

ಕೇಂದ್ರದ ವಿರುದ್ಧ ದೇಶಾದ್ಯಂತ ರೈತರ ಹೋರಾಟ ; ಹಾವೇರಿಯಲ್ಲಿ ನೀರಿನಲ್ಲಿ ಮುಳುಗಿದ್ದ ಬೆಳೆಯ ರಕ್ಷಣೆಗೆ ರೈತನ ಪರದಾಟ

ಕೂಲಿ ಆಳುಗಳ ಸಹಾಯದಿಂದ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿರುವ ರೈತ

ಕೂಲಿ ಆಳುಗಳ ಸಹಾಯದಿಂದ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿರುವ ರೈತ

ಹಾವೇರಿ ತಾಲೂಕಿನ ಕೆರಿಮತ್ತಳ್ಳಿ ಗ್ರಾಮದ ಕಾಂತೇಶ್ ಪಾಟೀಲ್ ಎಂಬ ರೈತ ಮುಳುಗುತ್ತಿರುವ ತನ್ನ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಸೈ ಎನಿಸಿಕೊಂಡಿದ್ದಾನೆ

  • Share this:

ಹಾವೇರಿ(ಡಿಸೆಂಬರ್​. 08): ಕೇಂದ್ರ ಸರ್ಕಾರ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಇಡೀ ದೇಶವನ್ನೇ ರೈತ ಸಂಘಟನೆಗಳು ಹಾಗೂ ರೈತರು ಬಂದ್ ಮಾಡುವ ಮೂಲಕ ಪ್ರತಿಭಟನೆಯ ಮಾಡುತ್ತಿದ್ದರೆ, ಇತ್ತ ಹಾವೇರಿ ಜಿಲ್ಲೆಯ ರೈತನೊಬ್ಬ ನೀರಿನಲ್ಲಿ ಮುಳುಗುತ್ತಿದ್ದ ಬೆಳೆಯನ್ನ ರಕ್ಷಣೆ ಮಾಡಿಕೊಂಡು ಗ್ರಾಮದಲ್ಲಿ ಸೈ ಎನಿಸಿಕೊಂಡಿದ್ದಾನೆ. ಇಡೀ ದೇಶಾದ್ಯಂತ ರೈತವಲ ಈಗ ಬೀದಿಗಿಳಿದು ಹೋರಾಡುತ್ತಿದ್ದಾರೆ ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆ ಎಪಿಎಂಸಿ ಕಾಯ್ದೆ ವಿರೋಧಿಸಿ ಭಾರತ ಬಂದ್ ಗೆ ಕರೆ ನೀಡಿದ ಹಿನ್ನೆಲೆ ಇಂದು ಹಾವೇರಿ ಜಿಲ್ಲೆಯ ರೈತರು ಹಾಗೂ ವಿವಿಧ ಸಂಘಟನೆಗಳು ಭಾರತ್ ಬಂದ್ ಬೆಂಬಲಿಸಿ ಬೆಳಗ್ಗೆಯಿಂದ ಹಾವೇರಿ ಜಿಲ್ಲೆಯ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.


ಇತ್ತ ಹಾವೇರಿ ನಗರಕ್ಕೆ ಹೊಂದಿಕೊಂಡಿರುವ ಹಾವೇರಿ ತಾಲೂಕಿನ ಕೆರಿಮತ್ತಳ್ಳಿ ಗ್ರಾಮದ ಕಾಂತೇಶ್ ಪಾಟೀಲ್ ಎಂಬ ರೈತ ಮುಳುಗುತ್ತಿರುವ ತನ್ನ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಸೈ ಎನಿಸಿಕೊಂಡಿದ್ದಾನೆ. ಹಾವೇರಿ ನಗರಕ್ಕೆ ಕುಡಿಯುವ ನೀರನ್ನು ನೀಡುತ್ತಿರುವ ಹೆಗ್ಗೇರಿ ಕೆರೆ ಕೋಡಿ ಒಡೆದು ಕೋಡಿಯ ಹತ್ತಿರ ಇದ್ದ ಕಾಂತೇಶ್ ಪಾಟೀಲ್ ಅವರ ಜಮೀನಿಗೆ ನೀರು ನುಗ್ಗಿದ್ದು ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳದ ಬೆಳೆಯನ್ನು ನೀರು ಆವರಿಸಿತ್ತು. ಹೀಗಾಗಿ ಆತಂಕಗೊಂಡ ಕಾಂತೇಶ್ ಗ್ರಾಮದ ಕೂಲಿ ಕಾರ್ಮಿಕರ ಸಹಾಯ ಪಡೆದು ಹರಿಯುತ್ತಿರುವ ನೀರಿನಲ್ಲಿಯೇ ತಾನು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಂಡಿದ್ದಾನೆ.


ಇದನ್ನೂ ಓದಿ : Cyclone Burevi: ಬುರೇವಿ ಚಂಡಮಾರುತದ ಎಫೆಕ್ಟ್​​ : ಕೊಡಗಿನಾದ್ಯಂತ ಮೋಡಕವಿದ ವಾತಾವರಣ ಅಲ್ಲಲ್ಲಿ ಧಾರಾಕಾರ ಮಳೆ

top videos


    ಒಂದು ಕಡೆ ರೈತ ಸಂಘಟನೆಗಳು ರೈತರು  ಬೆಳೆಗಳಿಗೆ ಬೆಲೆ ಇಲ್ಲ. ಸರ್ಕಾರ ತಂದಿರುವ ಕೆಲವು ಕಾಯ್ದೆಗಳು ರೈತರ ಪರವಾಗಿಲ್ಲ ಅಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದರೆ, ಇತ್ತ ಬೆಳಗ್ಗೆಯಿಂದ ಸಂಜೆಯ ವರೆಗೂ ಹೊಲದಲ್ಲಿ ದುಡಿಯುವ ರೈತರು ಇದ್ಯಾವುದೂ ನಮಗೆ ಸಂಬಂಧವೇ ಇಲ್ಲ ಎನ್ನುವ ಹಾಗೆ ಪ್ರತಿನಿತ್ಯದಂತೆ ಇಂದು ಸಹ ತಮ್ಮ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ.


    ಅದರಲ್ಲೂ ಇಂದು ಯಾವುದೇ ಪ್ರತಿಭಟನೆಯನ್ನು ಲೆಕ್ಕಿಸದೆ ತನ್ನ ಬೆಳೆಗಳನ್ನು ರಕ್ಷಣೆ ಮಾಡಿಕೊಂಡಿದಕ್ಕೆ ನಿಜವಾದ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    First published: