ಕೊರೆಸಿದ ಬೋರ್​​ವೆಲ್​ನಲ್ಲಿ ಬಾರದ ನೀರು; ಲಕ್ಷಾಂತರ ರೂ ಸಾಲ ಮಾಡಿದ್ದ ರೈತ ಆತ್ಮಹತ್ಯೆಗೆ ಶರಣು

ಕೊರೋನಾ ಮುಗಿದ ಬಳಿಕ ಒಳ್ಳೆಯದು ಆಗಬಹುದೆಂದು ಆಶಾದಾಯಕ ಭಾವನೆಯಿಂದ ಕೊಳವೆ ಬಾವಿ ಕೊರೆಸಿದರು. 1200 ಅಡಿ ಆಳಕ್ಕೆ ತಲುಪಿದರೂ ನೀರು ಸಿಗಲಿಲ್ಲ. ಮತ್ತೆ ಎದೆ ಗುಂದದೆ ಇನ್ನೂ ಎರಡು ಕೊಳವೆ ಬಾವಿ ಕೊರೆಸಿದರು. ನೀರು ಸಿಗದೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು. ಸುಮಾರು 8 ಲಕ್ಷ ನಷ್ಟಕ್ಕೆ ಒಳಗಾದ ರೈತ ತನ್ನದೆ ರೇಷ್ಮೆ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

news18-kannada
Updated:June 1, 2020, 2:30 PM IST
ಕೊರೆಸಿದ ಬೋರ್​​ವೆಲ್​ನಲ್ಲಿ ಬಾರದ ನೀರು; ಲಕ್ಷಾಂತರ ರೂ ಸಾಲ ಮಾಡಿದ್ದ ರೈತ ಆತ್ಮಹತ್ಯೆಗೆ ಶರಣು
ಪ್ರಾತಿನಿಧಿಕ ಚಿತ್ರ.
  • Share this:
ದೊಡ್ಡಬಳ್ಳಾಪುರ(ಜೂ.01): ಆ ರೈತ ಸಾಲ-ಸೋಲ ಮಾಡಿ ಎರಡು ತಿಂಗಳಲ್ಲಿ ಮೂರು ಬೋರ್ ವೆಲ್  ಕೊರೆಸಿದ್ದ. ಆದರೆ ದುರಾದೃಷ್ಟವಶಾತ್​ ಮೂರು ಬೋರ್ ವೆಲ್​ಗಳಲ್ಲಿ ನೀರು ಬರದೇ ವಿಫಲವಾಗಿದ್ದವು. ಹೀಗಾಗಿ ಸಾಲಕ್ಕೆ  ಹೆದರಿದ ಅನ್ನದಾತ ತನ್ನ ತೋಟದಲ್ಲಿಯೇ  ವಿಷ  ಕುಡಿದು ಆತ್ಮ ಹತ್ಯೆಗೆ ಶರಣಾಗಿದ್ದಾನೆ.

ನಾಲ್ಕು ತಿಂಗಳಿಂದ ಬೆಳೆಗಳಿಗೆ ಬೆಲೆ ಇಲ್ಲ, ರೇಷ್ಮೆಗೂಡು ಮಾರಾಟ ಆಗದೆ ತಿಪ್ಪೆ ಪಾಲಾಗಿತ್ತು.  ಆದರೂ ಎದೆ ಗುಂದದೆ ಕಾಯಕದಲ್ಲಿ ತೊಡಗಿದ್ದ ರೈತನಿಗೆ ಕೊರೋನಾ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ. ಅದೆಷ್ಟೋ ರೈತರು ತಮ್ಮ ಕಾಯಕ ಬಿಡದೆ ಮಾಡುತ್ತಿದ್ದರೂ ನಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ  ಆಚಾರಲಹಳ್ಳಿಯ ರೈತ ಚಂದ್ರಶೇಖರ (41) ಆತ್ಮಹತ್ಯೆಗೆ ಶರಣಾದ ರೈತ. ಮೃತ ವ್ಯಕ್ತಿ ಒಂದೂವರೆ ಎಕರೆ  ಸ್ವಂತ ಜಮೀನು ಹಾಗೂ ಮೂರು ಎಕರೆ ಗುತ್ತಿಗೆ  ಜಮೀನಿನಲ್ಲಿ ರೇಷ್ಮೆ  ಮತ್ತು  ಹೂ ಬೆಳೆಯುತ್ತಿದ್ದರು. ಎರಡು ತಿಂಗಳ ಅಂತರದಲ್ಲಿ ಮೂರು ಬೋರ್ ವೆಲ್ ಕೊರೆಸಿದ್ದರು. ಆದರೆ ಅದೃಷ್ಟ ರೈತನ ಕೈ ಹಿಡಿಯಲಿಲ್ಲ. ಕೊರೆಸಿದ ಆ ಮೂರು ಬೋರ್ ವೆಲ್​​ಗಳಲ್ಲಿ ನೀರು ಬತ್ತಿ ಹೋಗಿತ್ತು.

2ನೇ ಅವಧಿಯ ಸಾಧನೆ ಬಗ್ಗೆ ಮೋದಿ ದೇಶದ ಪ್ರತಿಯೊಬ್ಬರಿಗೂ ಪತ್ರ ಬರೆಯುತ್ತಾರೆ; ನಳೀನ್ ಕುಮಾರ್ ಕಟೀಲ್

ಬೋರ್ ವೇಲ್  ಗಾಗಿ 3 ಲಕ್ಷ ಸೆರಿದಂತೆ ಒಟ್ಟು 8 ಲಕ್ಷ ಬ್ಯಾಂಕ್  ಮತ್ತು  ಕೈ ಸಾಲ ಮಾಡಿದ್ದರು. ವಿಫಲಗೊಂಡ ಬೋರ್ ವೆಲ್ ನಿಂದ ಸಾಕಷ್ಟು  ನೊಂದಿದ್ದ  ರೈತ, ಸಾಲಕ್ಕೆ  ಹೆದರಿ ತನ್ನ  ತೋಟದಲ್ಲಿ  ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ವ್ಯಕ್ತಿ  ಹೆಂಡತಿ ಹಾಗೂ ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ. ದೊಡ್ಡಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

ಫೆಬ್ರವರಿಯಲ್ಲಿ ಬೆಳೆದಿದ್ದ ಫಸಲು ಕಟಾವಿಗೆ ಬಂದಿತ್ತು. ಒಮ್ಮೆಲೆ ಎರಗಿದ ಕೊರೋನಾದಿಂದಾಗಿ ಕೈಗೆ ಬಂದಿದ್ದ ರೇಷ್ಮೆ, ಹೂ ಬೆಳೆ ತೋಟದಲ್ಲೆ ಕೊಳೆಯಿತು. ರೇಷ್ಮೆ ಗೂಡು ಮಾರಾಟ ಆಗದೆ ಕೆಟ್ಟು ತಿಪ್ಪೆ ಸೇರಿತ್ತು. ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತ ಎದೆಗುಂದದೆ ಕಾಯಕದಲ್ಲಿ ತೊಡಗಿದ್ದ. ಒಮ್ಮೆಲೆ‌ ಗಾಯದ ಮೇಲೆ ಬರೆ ಎಳೆದಂತೆ ಕೊಳವೆ ಬಾವಿಯಿಂದ ನೀರು ಬತ್ತಿ ಹೋಗಿತ್ತು ‌. 

ಕೊರೋನಾ ಮುಗಿದ ಬಳಿಕ ಒಳ್ಳೆಯದು ಆಗಬಹುದೆಂದು ಆಶಾದಾಯಕ ಭಾವನೆಯಿಂದ ಕೊಳವೆ ಬಾವಿ ಕೊರೆಸಿದರು. 1200 ಅಡಿ ಆಳಕ್ಕೆ ತಲುಪಿದರೂ ನೀರು ಸಿಗಲಿಲ್ಲ. ಮತ್ತೆ ಎದೆ ಗುಂದದೆ ಇನ್ನೂ ಎರಡು ಕೊಳವೆ ಬಾವಿ ಕೊರೆಸಿದರು. ನೀರು ಸಿಗದೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾದರು. ಸುಮಾರು 8 ಲಕ್ಷ ನಷ್ಟಕ್ಕೆ ಒಳಗಾದ ರೈತ ತನ್ನದೆ ರೇಷ್ಮೆ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದೆಷ್ಟೋ ರೈತರು ಇಂತಹ ಸಂಕಷ್ಟಕ್ಕೆ ತುತ್ತಾಗುತಿದ್ದಾರೆ ಆರ್ಥಿಕ ಹೊಡೆತಕ್ಕೆ ನಲುಗಿ, ಸಾಲಗಾರರಿಗೆ ಹೆದರಿ, ತಮ್ಮ ಸಂಸಾರವನ್ನೇ ಮರೆತು ಜೀವ ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ಸಾವಿನ ನಂತರ ಸಂಸಾರದ ಬಗ್ಗೆ ಯೋಚನೆ ಮಾಡಿ ಸ್ವಲ್ಪಮಟ್ಟಿಗೆ ಗಟ್ಟಿ ಮನಸ್ಸು ಮಾಡಿ ತಮ್ಮ ಜೀವವನ್ನ ತುಂಡು ಹಗ್ಗದಲ್ಲೋ, ಕ್ರಿಮಿನಾಶಕದಲ್ಲೋ ಕೊನೆಗೊಳ್ಳಬೇಡಿ. ಇದರಿಂದ ನಿಮ್ಮನ್ನೇ ನಂಬಿರುವವರ ಬಗ್ಗೆ ಯೋಚನೆ ಮಾಡಿ, ಸಾವೇ ಎಲ್ಲದಕ್ಕೂ ಉತ್ತರ ಅಲ್ಲ ಎಂಬುದು ನ್ಯೂಸ್18 ಕಳಕಳಿ. ದಯಮಾಡಿ ಯಾವೊಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮಿಂದ ದೇಶ. ತುಸು ಕಷ್ಟ ಬರಬಹುದು ಆದರೆ ದೇಶಕ್ಕೆ ಅನ್ನ ಕೊಡುವ ನೀವೆ ಎದೆ ಗುಂದಿದರೆ ದೇಶಕ್ಕೆ ದೊಡ್ಡ ಹೊಡೆತ ಎನ್ನುವುದು ಮನವರಿಕೆ ಮಾಡಿಕೊಡುವ ಪ್ರಯತ್ನ ನಮ್ಮದು.
First published: June 1, 2020, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading