Udupi: ಬಾಲಕಿಯ ಮೃತದೇಹ ಪತ್ತೆಹಚ್ಚಿದ ಸಾಹಸಿಗ, ಇದು ಗ್ರಾಮೀಣ ಮುಳುಗುತಜ್ಞನ ಕಹಾನಿ!

ಸತತ 3 ದಿನ ಮಳೆಯ ನಡುವೆಯೂ ಸನ್ನಿಧಿಗಾಗಿ ಶೋಧ ನಡೆಸಲಾಗಿತ್ತು. ಆದರೂ ಆಕೆಯ ಸುಳಿವು ಸಿಗದಿದ್ದಾಗ ಇಡೀ ಊರು ಮಮ್ಮಲ ಮರುಗಿತ್ತು. ಆಗ ಪತ್ತೆಹಚ್ಚಿದ್ದೇ ಗ್ರಾಮೀಣ ಭಾಗದ ಪ್ರಸಿದ್ಧ ಮುಳುಗುತಜ್ಞ ಮಂಜುನಾಥ ನಾಯ್ಕ್ ಕೊಡ್ಲಾಡಿ.

ಮುಳುಗುತಜ್ಞ ಮಂಜುನಾಥ್ ನಾಯ್ಕ್​ ಕೊಡ್ಲಾಡಿ

ಮುಳುಗುತಜ್ಞ ಮಂಜುನಾಥ್ ನಾಯ್ಕ್​ ಕೊಡ್ಲಾಡಿ

  • Share this:
ಕರಾವಳಿಯಲ್ಲಿ ಮಳೆ ಎಷ್ಟೇ ಸುರಿದರೂ ಜನ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಆದರೆ ಮೊನ್ನೆ ಮೊನ್ನೆಯಷ್ಟೇ ಉಡುಪಿಯಲ್ಲಿ (Udupi) ಸುರಿದ ಮಳೆ ಪುಟಾಣಿಯ ಪ್ರಾಣ ಕಸಿದಿತ್ತು. ಶಾಲೆಯಿಂದ (School) ಮನೆಗೆ ಮರಳುವಾಗ 7 ವರ್ಷದ ಬಾಲಕಿ (Girl) ಸನ್ನಿಧಿ ನೀರುಪಾಲಾಗಿದ್ದಳು. ಸ್ನೇಹಿತರ (Friends) ಜೊತೆ ಬರುವಾಗ ಕಾಲುಸಂಕದಿಂದ ಬಿದ್ದು ಕೊಚ್ಚಿಹೋಗಿದ್ದಳು. ಪುಟಾಣಿ ಪತ್ತೆಯಾಗದೇ ಇದ್ದಾಗ ಇಡೀ ಊರೇ ಕಣ್ಣೀರಿಟ್ಟಿತು.. (Crying) ಮರುಕುಪಟ್ಟಿತು.. ನಂತರ ಸತತ 3 ದಿನಗಳ ಹುಡುಕಾಟದ (Searching) ಬಳಿಕ ಸನ್ನಿಧಿ ಶವವಾಗಿ ಪತ್ತೆಯಾಗಿದ್ದಳು. ಅನುಭವಿ ಮುಳುಗುತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಗದ ಸನ್ನಿಧಿ ಅವರೊಬ್ಬರ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದಳು.

ಸತತ 3 ದಿನ ಮಳೆಯ ನಡುವೆಯೂ ಸನ್ನಿಧಿಗಾಗಿ ಶೋಧ ನಡೆಸಲಾಗಿತ್ತು. ಆದರೂ ಆಕೆಯ ಸುಳಿವು ಸಿಗದಿದ್ದಾಗ ಇಡೀ ಊರು ಮಮ್ಮಲ ಮರುಗಿತ್ತು. ಆಗ ಬಾಲಕಿಯನ್ನು ಪತ್ತೆಹಚ್ಚಿದ್ದೇ ಗ್ರಾಮೀಣ ಭಾಗದ ಪ್ರಸಿದ್ಧ ಮುಳುಗುತಜ್ಞ ಮಂಜುನಾಥ ನಾಯ್ಕ್ ಕೊಡ್ಲಾಡಿ.

ಕೊಚ್ಚಿಹೋಗಿದ್ದ ಬಾಲಕಿ ಸನ್ನಿಧಿ

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಆಗಸ್ಟ್​ 8ರಂದು ಶಾಲೆಯಿಂದ ಮನೆಗೆ ಮರಳುವಾಗ ಬಾಲಕಿ ಸನ್ನಿಧಿ ಕಾಲುಸಂಕದಲ್ಲಿ ಕೊಚ್ಚಿಹೋಗಿದ್ದಳು. ತಕ್ಷಣ ಹುಡುಕಾಟ ನಡೆಸಿದರೂ ಸನ್ನಿಧಿ ಪತ್ತೆಯಾಗಿರಲಿಲ್ಲ. ಆ ದುರ್ಘಟನೆಗೆ ಎಲ್ಲರೂ ಕಂಬನಿ ಮಿಡಿದಿದ್ದರು. ನಂತರ ಬಾಲಕಿಗಾಗಿ ಎಲ್ಲಾ ಕಡೆ ಹುಡುಕಿದರೂ ಸಿಗದಿದ್ದಾಗ ಕುಟುಂಬದವರು, ಗ್ರಾಮಸ್ಥರು ದುಃಖಿತರಾಗಿದ್ದರು.

ಮುಳುಗುತಜ್ಞ ಮಂಜುನಾಥ್​ ಸಾಹಸ

3 ದಿನಗಳ ಕಾಲ ಸನ್ನಿಧಿಗಾಗಿ ಹುಡುಕಾಟ ನಡೆಸಲಾಯ್ತು. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ಊರಿನವರು ನಿರಂತರ ಮಳೆಯ ನಡುವೆಯೇ ಹುಡುಕಾಡಿದ್ರು. ನದಿ, ಕೊಳ್ಳದಲ್ಲೂ ಶೋಧಿಸಿದರು. ಆದರೆ ಬಾಲಕಿ ಸನ್ನಿಧಿಯ ಮೃತದೇಹ ಮಾತ್ರ ಸಿಕ್ಕಿರಲಿಲ್ಲ. ಎಲ್ಲರೂ ಕಾರ್ಯಾಚರಣೆ ನಡೆಸಿ ಬರಿಗೈಯಲ್ಲಿ ಬಂದಾಗ ನೀರಿಗೆ ಧುಮುಕಿದವರೇ ಈ ಗ್ರಾಮೀಣ ಭಾಗದ ಮುಳುಗುತಜ್ಞ ಮಂಜುನಾಥ ನಾಯ್ಕ್ ಕೊಡ್ಲಾಡಿ.

A famous diver from Udupi Manjunath Naik found the dead body
ಮುಳುಗುತಜ್ಞ ಮಂಜುನಾಥ್ ನಾಯ್ಕ್​


600 ಮೀಟರ್ ದೂರದಲ್ಲೇ ಶವ ಪತ್ತೆ!

ಬಾಲಕಿ ಸನ್ನಿಧಿ ನದಿಗೆ ಬಿದ್ದ ಕಾಲುಸಂಕದ ಜಾಗದಲ್ಲೇ ಮಂಜುನಾಥ್ ನಾಯ್ಕ್​ ಹುಡುಕೋದಕ್ಕೆ ಶುರುಮಾಡಿದ್ದಾರೆ. ಹುಡುಕುತ್ತಾ ಮುಂದೆ ಸಾಗಿದಾಗ ಬಾಲಕಿ ಬಿದ್ದ ಜಾಗದಿಂದ 600 ಮೀಟರ್‌ ದೂರದಲ್ಲೇ ಪುಟಾಣಿ ಬಾಲಕಿ ಸನ್ನಿಧಿಯ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಮಕ್ಕಳ ಕೈಯಿಂದ ರಾಖಿ ತೆಗಿಸಿದ ಶಿಕ್ಷಕರು, ಮಂಗಳೂರಿನ ಶಾಲೆಯಲ್ಲಿ ವಿವಾದ!

ಬೇರುಗಳ ನಡುವೆ ಸಿಕ್ಕಿದ್ಳು ಸನ್ನಿಧಿ!

ನದಿ ಆಳದಲ್ಲಿ ಶೋಧ ಆರಂಭಿಸಿದ ಮಂಜುನಾಥ್​ ನಾಯ್ಕ್​​ ಕೊಡ್ಲಾಡಿಯವರಿಗೆ ಬಾಲಕಿಯ ಕೈ ಗೋಚರಿಸಿದೆ. ನೋಡುವಾಗ ಸನ್ನಿಧಿ ಬೇರುಗಳ ನಡುವೆ ಸಿಲುಕಿದ್ದಳು. ಆಕೆಯನ್ನು ಮೇಲಕ್ಕೆ ಎತ್ತಿ ತಂದಾಗ ಎಲ್ಲಾ ಕಡೆ ಆಕ್ರಂದನ, ನಿಟ್ಟುಸಿರು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಿಟ್ಟುಸಿರು ಬಿಟ್ಟರೆ, ಹೆತ್ತವರ, ಕುಟುಂಬಸ್ಥರ, ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

A famous diver from Udupi Manjunath Naik found the dead body
ಸನ್ನಿಧಿ ಮೃತದೇಹ ಹುಡುಕಾಟದಲ್ಲಿ ಮಂಜುನಾಥ್


105 ಶವ ಮೇಲೆತ್ತಿರುವ ಮಂಜುನಾಥ್!

ಉಡುಪಿಯ ಬಾಂಡ್ಯ ಗ್ರಾಮದ ಕೊಡ್ಲಾಡಿ ನಿವಾಸಿ ಮಂಜುನಾಥ್‌ ನಾಯ್ಕ್ (46) ಜಿಲ್ಲೆಯ ಒಬ್ಬ ಸದ್ದಿಲ್ಲದ ಜೀವರಕ್ಷಕ. ತನ್ನ 17ನೇ ವಯಸ್ಸಿನಲ್ಲಿಯೇ ಮುಳುಗುತಜ್ಞರಾಗಿ ಮಂಜುನಾಥ್‌ ನಾಯ್ಕ್ ಗುರುತಿಸಿಕೊಂಡರು. ಈವರೆಗೆ ಮಂಜುನಾಥ್ 105 ಶವ ಮೇಲಕ್ಕೆತ್ತಿದ್ದಾರೆ. 5ಕ್ಕೂ ಹೆಚ್ಚು ಮಂದಿಯನ್ನು ನೀರಿನಿಂದ ರಕ್ಷಿಸಿದ್ದಾರೆ.

ಇದನ್ನೂ ಓದಿ: ಮಳೆಯ ಅಬ್ಬರಕ್ಕೆ ಐತಿಹಾಸಿಕ ಕೆರೆ ಏರಿ ಬಿರುಕು, ಗ್ರಾಮಗಳಲ್ಲಿ ಆತಂಕ

ಬಾವಿಗೆ ಬಿದ್ದ ಚಿರತೆಯನ್ನೂ ಮೇಲೆತ್ತಿದ್ದರು!

ನದಿಗೆ, ಕೆರೆಗೆ ಯಾರಾದರೂ ಬಿದ್ದಾಗ ಜಿಲ್ಲೆಯಲ್ಲಿ ಎಲ್ಲರಿಗೂ ನೆನಪಾಗುವ ಮುಳುಗುತಜ್ಞರೆಂದರೆ ಮಂಜುನಾಥ್ ನಾಯ್ಕ್​. ಇವರು ಮನುಷ್ಯರನ್ನು ಮಾತ್ರವಲ್ಲದೇ ಬಾವಿಗೆ ಬಿದ್ದ 2 ಚಿರತೆಯನ್ನು ಜೀವಂತವಾಗಿ ಮೇಲೆ ತಂದಿದ್ದಾರೆ.

5ನೇ ತರಗತಿ ಓದಿರುವ ಮಂಜುನಾಥ್!

ಮಂಜುನಾಥ್​ ಕೇವಲ 5 ತರಗತಿ ಓದಿದ್ದಾರೆ. ಮುಳುಗುತಜ್ಞನಾಗಿ ಮಾತ್ರ ಮಂಜುನಾಥ್ ಗುರುತಿಸಿಕೊಂಡಿಲ್ಲ. ಇವರು ಜನಪದಕ್ಕೂ ಕಾಣಿಕೆ ಕೊಟ್ಟಿದ್ದಾರೆ. ಜೊತೆಗೆ ಇವರು ಉತ್ತಮ ಕೃಷಿಕರು. ಮಂಜುನಾಥ್ ನೀರಿನ ಅವಘಡವಾದರೆ ನೆರವಾಗೋ ಆಪದ್ಬಾಂಧವ.
Published by:Thara Kemmara
First published: