ಬೆಂಗಳೂರು: ಆಕೆ ಮಾನಸಿಕವಾಗಿ (Mentally) ಕುಗ್ಗಿ ಹೋಗಿದ್ದಳು, ಸಾಂಸಾರಿಕವಾಗಿ ತೊಂದರೆಗೆ ಒಳಗಾಗಿದ್ದಳು. ಅಷ್ಟೇ ಅಲ್ಲ ಆರ್ಥಿಕವಾಗಿ (Financially) ಸಾಕಷ್ಟು ಸಂಕಷ್ಟ ಅನುಭವಿಸಿದ್ದಳು. ಅಷ್ಟರಲ್ಲಿ ಪರಿಚಯ ಆದವನೇ ಈ ಕಪಟ ಸ್ವಾಮೀಜಿ (Fake Swamiji). “ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್” (I am God, God is great) ಅಂತ ಪುಂಗಿ ಬಿಟ್ಟು, ಆಕೆಯ ಭಕ್ತಿ ಹಾಗೂ ನಂಬಿಕೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ. ಆಕೆಗೆ ಲೈಂಗಿಕ ದೌರ್ಜನ್ಯ (Harassment) ಕೊಡೋದಕ್ಕೆ ಶುರುಮಾಡಿದ್ದಾನೆ. ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ ಈ ಕಾಮಿ ಸ್ವಾಮಿಯ ಕಳ್ಳಾಟಕ್ಕೆ ಆತನ ಹೆಂಡತಿ (Wife) ಕೂಡ ಸಾಥ್ ನೀಡಿದ್ದಳು. ಹೀಗೆ ಕಳ್ಳ ಸ್ವಾಮಿ ಹಾಗೂ ಆತನ ಪತ್ನಿ ಸೇರಿಕೊಂಡು ಸಂತ್ರಸ್ಥ ಯುವತಿಗೆ ಐದಾರು ವರ್ಷಗಳಿಂದ ಕಿರುಕುಳ ನೀಡಿದ್ದಾರೆ. ಇದೀಗ ಅವರ ದೌರ್ಜನ್ಯ, ಕಿರುಕುಳದ ವಿರುದ್ಧ ಯುವತಿ ಸಿಡಿದೆದ್ದಿದ್ದಾಳೆ.
ಈ ಕಪಟ ಸ್ವಾಮಿ ಯಾರು?
ಆನಂದಮೂರ್ತಿ ಎಂಬಾತನೇ ಕಿರುಕುಳ ನೀಡಿದ ನಕಲಿ ಸ್ವಾಮಿ. ಈತನಿಗೆ ಈತನ ಪತ್ನಿ ಲತಾ ಕೂಡ ಸಾಥ್ ನೀಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಈತ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಶ್ರಮ ಒಂದನ್ನು ಮಾಡಿಕೊಂಡು, ಸ್ವಾಮೀಜಿಯಂತೆ ಪೋಸ್ ಕೊಡುತ್ತಿದ್ದ. ಅಲ್ಲಿಗೆ ನನಗೆ ಕಷ್ಟ ಇದೆ, ಪರಿಹಾರ ಕೊಡಿ ಅಂತ ಬಂದಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.
ಕಷ್ಟ ಪರಿಹರಿಸುವಾಗಿ ನಂಬಿಸಿ ದೌರ್ಜನ್ಯ
ಕಳೆದ ಐದಾರು ವರ್ಷಗಳ ಹಿಂದೆ ಸ್ನೇಹಿತೆಯ ಮನೆ ಕಾರ್ಯಕ್ರಮವೊಂದರಲ್ಲಿ ಸಂತ್ರಸ್ತೆಯನ್ನು ಆನಂದಮೂರ್ತಿ ಪರಿಚಯಿಸಿಕೊಂಡಿದ್ದ. ನಿಮ್ಮ ಜೀವನದಲ್ಲಿ ಗಂಡಾಂತರವಿದೆ. ಇದರಿಂದ ನಿಮ್ಮ ಕುಟುಂಬದ ಸದಸ್ಯರಿಗೂ ತೊಂದರೆಯಾಗಲಿದೆ, ಅದನ್ನು ನಿವಾರಿಸುವೆ ಎಂದು ಯುವತಿಯನ್ನು ನಂಬಿಸಿ, ಆಶ್ರಮಕ್ಕೆ ಕರೆಸಿಕೊಂಡಿದ್ದ.
ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಕಾರಿನ ಮೇಲೆ ಕಲ್ಲು ಎಸೆಯಲಾಗಿತ್ತಾ? ಮಾಂಸ ವಿವಾದದ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು?
ಮತ್ತು ಬರುವ ಔಷಧಿ ನೀಡಿ ಯುವತಿ ಮೇಲೆ ದೌರ್ಜನ್ಯ
ಸಂತ್ರಸ್ತ ಯುವತಿ ಕಪಟ ಸ್ವಾಮೀಜಿ ಆಶ್ರಮಕ್ಕೆ ಹೋಗಿದ್ದಳು. ಈ ವೇಳೆ ಆಕೆಯ ಮತ್ತು ಬರುವ ಪಾನೀಯ ನೀಡಿದ್ದಾನೆ. ಬಳಿಕ ಸ್ವಲ್ಪ ಹೊತ್ತಿನ ನಂತರ ಆಕೆಗೆ ಪ್ರಜ್ಞೆ ಬಂದಾಗ ಮನೆಯ ರೂಮ್ವೊಂದರಲ್ಲಿ ವಿವಸ್ತ್ರಳಾಗಿ ಇರುವುದು ಗೊತ್ತಾಗಿದೆ. ಆನಂದಮೂರ್ತಿ ಆತ್ಯಾಚಾರವೆಸಗಿದರೆ, ಆತನ ಪತ್ನಿ ಲತಾ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ. ಯಾರಿಗಾದರೂ ವಿಷಯ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರಂತೆ.
ತನ್ನ ಜೊತೆಯೇ ಇರುವಂತೆ ಒತ್ತಾಯ
ಇನ್ನು ಸ್ವಾಮೀಜಿ ಮಾಡಿದ ಕೆಲಸದಿಂದ ಭಯಗೊಂಡ ಯುವತಿ ಮನೆಯವರಿಗೆ ವಿಚಾರ ತಿಳಿಸಿರಲಿಲ್ಲ ಎನ್ನಲಾಗಿದೆ. ಇದನ್ನೇ ದುರುಪಯೋಗಪಡಿಸಿಕೊಂಡ ಕಪಟ ಸ್ವಾಮಿ ಆನಂದಮೂರ್ತಿ ಐದಾರು ವರ್ಷಗಳಿಂದ ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನೀನು ನನ್ನ ಲಕ್ಕಿ ಚಾರ್ಮ್, ನೀನು ನನ್ನ ಜೊತೆ ಇದ್ದರೆ ನನ್ನ ಅದೃಷ್ಟವೇ ಬದಲಾಗುತ್ತೆ. ಇಬ್ಬರಿಗೂ ಒಳ್ಳೆಯದಾಗುತ್ತೆ ಅಂತೆಲ್ಲ ನಂಬಿಸಿದ್ದಾನೆ.
ಫೋಟೋ ತೋರಿಸಿ ಯುವತಿ ಮದುವೆಗೆ ಅಡ್ಡಿ
ಈ ನಡುವೆ ಯುವತಿಗೆ ಮದುವೆ ಮಾಡಲು ನಿರ್ಧರಿಸಿದ ಮನೆಯವರು, ಬೇರೆ ಹುಡುಗನೊಂದಿಗೆ ಆಕೆಯ ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಈ ಬಗ್ಗೆ ತಿಳಿದ ಆನಂದಮೂರ್ತಿ, ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದ ಆಕೆಯ ಬೆತ್ತಲೆ ಫೋಟೋ, ವಿಡಿಯೋ ಕಳಿಸಿ ಬೆದರಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Bengaluru: ಟಬ್ನಲ್ಲಿ ಮುಳುಗಿಸಿ ಮಗುವನ್ನ ಕೊಂದ ತಾಯಿ, ಇತ್ತ ಸಾಲ ಕೇಳಿದ್ದಕ್ಕೆ ವ್ಯಕ್ತಿಯ ಹತ್ಯೆ, ಸ್ನೇಕ್ ಲೋಕೇಶ್ ಸಾವು
ನಕಲಿ ಸ್ವಾಮಿ ವಿರುದ್ಧ ದೂರು
ಆಕೆಗಷ್ಟೇ ಅಲ್ಲದೇ ಆಕೆಯ ಮನೆಯವರಿಗೂ ಆನಂದಮೂರ್ತಿ ಬೆದರಿಕೆ ಹಾಕಿ, ಸಾಕಷ್ಟು ಹಣ ಸುಲಿಗೆ ಮಾಡಿದ್ದಾನೆ ಅಂತ ಯುವತಿ ಆರೋಪಿಸಿದ್ದಾಳೆ. ಇದೀಗ ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಆನಂದಮೂರ್ತಿ ಹಾಗೂ ಆತನ ಪತ್ನಿ ಲತಾ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡು ಆವಲಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ