ಚನ್ನಪಟ್ಟಣ, ರಾಮನಗರ: ಈಗ ಎಲ್ಲೆಡೆ ನಕಲಿ ಸ್ವಾಮೀಜಿಗಳ (Fake Swamy) ಹಾವಳಿಯೇ ಜಾಸ್ತಿಯಾಗಿದೆ. ಜನರ ಭಕ್ತಿ, ನಂಬಿಕೆ, ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುವ ನಕಲಿ ಸ್ವಾಮೀಜಿ, ಬಾಬಾಗಳು (Baba), ಬಳಿಕ ಮೋಸ ಮಾಡಿ ಎಸ್ಕೇಪ್ ಆಗುತ್ತಾರೆ. ರಾಮನಗರ (Ramanagar) ಜಿಲ್ಲೆಯ ಚನ್ನಪಟ್ಟಣದಲ್ಲಿಯೂ (Channapatna) ನಡೆದಿದೆ. ತಾನು ಪ್ರೇಮಸಾಯಿಬಾಬಾ (Prema Saibaba) ಎಂದು ನಂಬಿಸಿ, ಜನರಿಗೆ ಸುಮಾರು 1.5 ಕೋಟಿ ರೂಪಾಯಿ ವಂಚಿಸಿ ಎಸ್ಕೇಪ್ ಆಗಿದ್ದಾನಂತೆ. ಈತ ನಾನು ದೇವಮಾನವ, ಜನರ ಕಷ್ಟಗಳನ್ನು ಪರಿಹಾರ ಮಾಡುತ್ತೇನೆಂದು ನಂಬಿಸಿದ್ದಾನೆ. ಮತ್ತೊಂದೆಡೆ ಮಹಿಳೆಯೊಬ್ಬಳ ತೋಟ ತನ್ನ ಹೆಸರಿಗೆ ಬರೆದುಕೊಡುವಂತೆ ಕಿರುಕುಳ ನೀಡಿದ್ದು, ಈ ಮಹಿಳೆ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾಳೆ.
ನಕಲಿ ಬಾಬಾನಿಂದ ಜನರಿಗೆ ಮೋಸ
ನಾನು ದೇವಮಾನವ, ಕಷ್ಟಗಳನ್ನು ಪರಿಹಾರ ಮಾಡುತ್ತೇನೆಂದು ಹೇಳುತ್ತಿದ್ದ ನಕಲಿ ಬಾಬಾ ಒಬ್ಬ, ಸಾರ್ವಜನಿಕರಿಗೆ ವಂಚಿಸಿ ಎಸ್ಕೇಪ್ ಆಗಿದ್ದಾನೆ. ರಾಮನಗರದ ಚನ್ನಪಟ್ಟಣದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ವ್ಯಕ್ತಿಯಿಂದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
8 ತಿಂಗಳ ಹಿಂದೆ ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ
ಕಳೆದ 8 ತಿಂಗಳ ಹಿಂದೆ ಚನ್ನಪಟ್ಟಣಕ್ಕೆ ಬಂದಿದ್ದ ಸಚಿನ್ ಅಕಾರಾಂ ಎಂಬ ವ್ಯಕ್ತಿ ಚನ್ನಪಟ್ಟಣಕ್ಕೆ ಬಂದು, ನೆಲೆಸಿದ್ದ. ಅಲ್ಲಿ ತಾನು ಪ್ರೇಮ ಸಾಯಿಬಾಬ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Fake Swamiji: ಕಷ್ಟ ಅಂತ ಬಂದ ಯುವತಿಗೆ ಕಿರುಕುಳ, ಕಾಮಿಸ್ವಾಮಿ ಕಳ್ಳಾಟಕ್ಕೆ ಪತ್ನಿಯೇ ಸಾಥ್!
ತಾನು ಬಾಬಾನ ಅವತಾರ ಅಂತ ನಂಬಿಸಿದ್ದ ವಂಚಕ
ಈತ ತಾನು ಪ್ರೇಮ ಸಾಯಿ, ದೇವ ಮಾನವ, ಜನ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಜನರ ಮನವೊಲಿಕೆ ಮಾಡಿದ್ದ. ನಿತ್ಯ ಭಜನೆ, ಪೂಜೆ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಟ್ರಸ್ಟ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಜನರ ನಂಬಿಕೆ, ಮುಗ್ಧತೆ, ಭಕ್ತಿಯನ್ನೇ ದಾಳವಾಗಿಸಿಕೊಂಡ ಪ್ರೇಮಸಾಯಿ ಬಾಬಾ, ತನ್ನ ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಟ್ರಸ್ಟ್ ಹೆಸರಲ್ಲಿ ಸುಮಾರು 1.5 ಕೋಟಿ ರೂಪಾಯಿ ಹಣ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.
ತೋಟ ಬರೆದುಕೊಡುವಂತೆ ಮಹಿಳೆಗೆ ಕಿರುಕುಳ
ಇನ್ನು ತೋಟವನ್ನು ತನ್ನ ಹೆಸರಿಗೆ ಬರೆದುಕೊಡು ಅಂತ ಈ ಪ್ರೇಮಸಾಯಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಚನ್ನಪಟ್ಟಣ ತಾಲೂಕಿನ ಮಂಗಳವಾರ ಪೇಟೆಯ ಸಿಂಧೂ ಎಂಬುವವರ ತೋಟದ ಮನೆಯಲ್ಲಿ ಕೆಲ ದಿನಗಳ ಕಾಲ ಈತ ಭಜನೆ ಮಾಡಿಕೊಂಡಿದ್ದ. ಬಳಿಕ ತೋಟದ ಮನೆಯನ್ನ ಬರೆದುಕೊಡುವಂತೆ ಕಿರುಕುಳ ನೀಡಿದ್ದಾನಂತೆ. ಇದರಿಂದ ನೊಂದ ಮಹಿಳೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ.\
ನಕಲಿ ಬಾಬಾ ಮತ್ತು ಬೆಂಬಲಿಗರ ವಿರುದ್ಧ ದೂರು
ನೊಂದ ಮಹಿಳೆ ನಕಲಿ ಬಾಬಾ ಪ್ರೇಮಸಾಯಿ ಬಾಬಾ ಅಲಿಯಾಸ್ ಸಚಿನ್ ಅಕಾರಾಂ, ಹಾಗೂ ಆತನಿಗೆ ಸಹಕರಿಸುತ್ತಿದ್ದ ವಿನಾಯಕ ರಾಜ್, ಸಾಯಿರಾಜ್, ಜಯಂತ್, ಯಶೋದಮ್ಮ, ಉಮಾಶಂಕರ್ ಸೇರಿದಂತೆ 7 ಮಂದಿ ವಿರುದ್ಧ ದೂರು ದಾಖಲು ಮಾಡಿದ್ದಾಳೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರು ಪೊಲೀಸರು, ಹಣದ ಜೊತೆಗೆ ಎಸ್ಕೇಪ್ ಆಗಿರುವ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ರಾಮನಗರ ಎಸ್ಪಿ ಸಂತೋಷ್ ಬಾಬು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Fake Swamiji: 16ರ ಬಾಲಕಿ ಮದುವೆಯಾದ 62ರ ನಕಲಿ ಸ್ವಾಮೀಜಿ! ಮಾಟಮಂತ್ರದ ಹೆಸರಲ್ಲಿ ನೀಚಕೃತ್ಯ
ಕಷ್ಟ ಅಂತ ಬಂದ ಯುವತಿಗೆ ಕಿರುಕುಳ ನೀಡಿದ್ದ ಫೇಕ್ ಸ್ವಾಮಿ
ಇನ್ನು ಇತ್ತೀಚಿಗಷ್ಟೇ ಬೆಂಗಳೂರಲ್ಲಿ ನಕಲಿ ಸ್ವಾಮಿಯೊಬ್ಬ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ ಈ ಕಾಮಿ ಸ್ವಾಮಿಯ ಕಳ್ಳಾಟಕ್ಕೆ ಆತನ ಹೆಂಡತಿ ಕೂಡ ಸಾಥ್ ನೀಡಿದ್ದಳು. ಹೀಗೆ ಕಳ್ಳ ಸ್ವಾಮಿ ಹಾಗೂ ಆತನ ಪತ್ನಿ ಸೇರಿಕೊಂಡು ಸಂತ್ರಸ್ಥ ಯುವತಿಗೆ ಐದಾರು ವರ್ಷಗಳಿಂದ ಕಿರುಕುಳ ನೀಡಿದ್ದಾರೆ. ಇದೀಗ ಅವರ ದೌರ್ಜನ್ಯ, ಕಿರುಕುಳದ ವಿರುದ್ಧ ಯುವತಿ ಸಿಡಿದೆದ್ದಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ