• Home
  • »
  • News
  • »
  • state
  • »
  • Fake Police: ಪೊಲೀಸ್ ಕೆಲಸ ಕೊಡಿಸೋದಾಗಿ ಬಂದ ಫೇಕ್ ಆಫೀಸರ್; ಯುವಕರಿಗೆ ಹಾಕಿದ ಪಂಗನಾಮ!

Fake Police: ಪೊಲೀಸ್ ಕೆಲಸ ಕೊಡಿಸೋದಾಗಿ ಬಂದ ಫೇಕ್ ಆಫೀಸರ್; ಯುವಕರಿಗೆ ಹಾಕಿದ ಪಂಗನಾಮ!

ಫೇಕ್ ಪೊಲೀಸ್ ಜ್ಞಾನಮೂರ್ತಿ

ಫೇಕ್ ಪೊಲೀಸ್ ಜ್ಞಾನಮೂರ್ತಿ

ಮೊದಲು ತಾನು ಉಳಿದುಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ಕಿಶೋರ್ ಹಾಗೂ ಕ್ಯಾಷಿಯರ್ ಆನಂದ್ ರನ್ನ ಪರಿಚಯ ಮಾಡಿಕೊಂಡಿದ್ದ ಅಸಾಮಿ ಜ್ಞಾನಮೂರ್ತಿಯ ಅಸಲಿ ಆಟ ಶುರುವಿಟ್ಟುಕೊಂಡಿದ್ದ. ನಿಮಗೆ ಪೊಲೀಸ್ ಕೆಲಸ ಕೊಡಿಸುತ್ತೇನೆಂದು ಯುವಕರನ್ನ ನಂಬಿಸಿ ಹಣ ಪಡೆದು ವಂಚನೆ

  • Share this:

ಆನೇಕಲ್ (ಜು.07): ಅವ್ನು ಪಕ್ಕಾ ನಯವಂಚಕ. ಅಮಾಯಕ ಜನರನ್ನ ಚೀಟ್ (Cheat) ಮಾಡೋದ್ರಲ್ಲಿ ಅವ್ನು ಎಕ್ಸ್​ಪರ್ಟ್. ಅವನು ಬಲೆ ಬೀಸಿದ ಮೇಲೆ ಮಿಕಗಳು ಬೀಳಲೇಬೇಕು. ಬಡ ಹಾಗೂ ಅಮಾಯಕ ನಿರುದ್ಯೋಗಿ ಯುವಕರನ್ನ (Unemployed youth) ಟಾರ್ಗೆಟ್  ಮಾಡುತ್ತಿದ್ದ ಅಸಾಮಿ ಅವರನ್ನ ನಂಬಿಸಿ ಮೋಸ ಮಾಡೋದ್ರಲ್ಲಿ ನಿಸ್ಸೀಮ.  ನಿವೃತ್ತ ಪೊಲೀಸ್ ಅಧಿಕಾರಿ (Retired Police Officer) ಎಂದು ಯುವಕರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. 




ಮೇಲೆ ಫೋಟೋದಲ್ಲಿ ಕಾಣುತ್ತಿರುವ ಈತನನ್ನು ಒಮ್ಮೆ ಸರಿಯಾಗಿ ನೋಡ್ಕೋಳಿ. ಸದ್ಯ ಬೆಂಗಳೂರು ಹೊರವಲಯ ಆನೇಕಲ್ ಭಾಗದಲ್ಲಿ ತಾನು ನಿವೃತ್ತ ಪೊಲೀಸ್ ಅಧಿಕಾರಿ ಎಂದು ಯುವಕರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಮೂಲದ ಜ್ಞಾನಮೂರ್ತಿ ನಿವೃತ್ತ  ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ವಂಚಿಸಿದ ನಕಲಿ ಪೊಲೀಸ್ ಅಸಾಮಿಯಾಗಿದ್ದಾನೆ.


ನಿರುದ್ಯೋಗಿ ಯುವಕರೇ ಟಾರ್ಗೆಟ್


ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡುವ ನಕಲಿ ಪೋಲಿಸಪ್ಪ ಬಳಿಕ ಅಸಲಿ ಆಟವನ್ನ ಶುರುವಿಟ್ಟುಕೊಳ್ಳುತ್ತಿದ್ದ. ತಾನು ನಿವೃತ್ತ ಪೋಲೀಸ್ ಅಧಿಕಾರಿ ಎಂದು ಹೇಳಿಕೊಂಡು ಆನೇಕಲ್- ಥಳಿ ಮುಖ್ಯರಸ್ತೆಯ ಸಿಕೆ ಬಾರ್ ಅಂಡ್ ರೆಸ್ಟೋರೆಂಟ್ಗೆ ಮೇ ತಿಂಗಳಿನಲ್ಲಿ ಬಂದಿದ್ದ ನಕಲಿ ಪೋಲಿಸಪ್ಪ ಡಿಸ್ಕೌಂಟ್ ನಲ್ಲಿ ರೂಮ್ ಪಡೆದಿದ್ದ. ಆನೇಕಲ್ ಭಾಗದಲ್ಲಿ 80 ಲಕ್ಷಕ್ಕೆ ಜಮೀನು ಖರೀದಿ ಮಾಡಿದ್ದೇನೆಂದು ಪರಿಚಯ ಮಾಡಿಕೊಂಡಿದ್ದಾನೆ.


ಇದನ್ನೂ ಓದಿ: Siddaramotsava: ಸಭೆಗೆ ಬಾರದ ಡಿಕೆ ಶಿವಕುಮಾರ್​ಗೆ ಸಿದ್ದು ಆಪ್ತರ ಟಾಂಗ್; ವೇದಿಕೆ ಮೇಲೆಯೇ ತಿರುಗೇಟು ಕೊಟ್ರು ಡಿಕೆಶಿ ಬ್ರದರ್​


ಹಣ ಪಡೆದು ಯುವಕರಿಗೆ ವಂಚನೆ


ಜಮೀನು ವ್ಯವಹಾರ ಮುಗಿಯುವವರೆಗೂ ಬಂದು ಹೋಗುತ್ತೇನೆಂದು ರೂಮ್ ಬಾಡಿಗೆ ಪಡೆದಿದ್ದ ಅಸಾಮಿ ಅಮಾಯಕ ಯುವಕರಿಗೆ ಪೊಲೀಸ್ ಕೆಲಸ ಕೊಡಿಸುವುದಾಗಿ ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ಯುವಕ ಕಿಶೋರ್ ಆರೋಪಿಸಿದ್ದಾರೆ.


ರೆಸ್ಟೋರೆಂಟ್​ ಸಿಬ್ಬಂದಿಗೆ ವಂಚನೆ


ಇನ್ನೂ ಮೊದ ಮೊದಲು ತಾನು ಉಳಿದುಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ಕಿಶೋರ್ ಹಾಗೂ ಕ್ಯಾಷಿಯರ್ ಆನಂದ್ ರನ್ನ ಪರಿಚಯ ಮಾಡಿಕೊಂಡಿದ್ದ ಅಸಾಮಿ ಜ್ಞಾನಮೂರ್ತಿಯ ಅಸಲಿ ಆಟ ಶುರುವಿಟ್ಟುಕೊಂಡಿದ್ದ. ನಿಮಗೆ ಪೊಲೀಸ್ ಕೆಲಸ ಕೊಡಿಸುತ್ತೇನೆಂದು ಯುವಕರನ್ನ ನಂಬಿಸಿ ಡಿಜಿಪಿ ಪಿಎ ನನ್ನ ಸ್ನೇಹಿತರು ಅವರ ಮೂಲಕ ನಿಮಗೆ ಪೊಲೀಸ್ ಕೆಲಸ ಕೊಡಿಸುತ್ತೆನೆ ಎಂದು ಹೇಳಿದ್ದ. ಈ ನಕಲಿ ಪೊಲೀಸಪ್ಪನ ಕಳ್ಳಾಟಕ್ಕೆ ಮರುಳಾದ ಬಾರ್ ಕ್ಯಾಷಿಯರ್ ಆನಂದ್ 30 ಸಾವಿರ ಹಾಗೂ ಸಪ್ಲೇಯರ್ ಕಿಶೋರ್ ಬಳಿ 45 ಸಾವಿರ ಹಣ ಪಡೆದು ವಂಚಿಸಿದ್ದಾನೆ. ಯುವಕರಿಗೆ ನಂಬಿಕೆ ಬರಲೆಂದು ಡಿಜಿಪಿ ಪಿಎ ಎಂದು ಬೇರೊಬ್ಬ ವ್ಯಕ್ತಿಯ ಮೂಲಕ ಪೋನ್ ನಲ್ಲಿ ಮಾತನಾಡಿಸಿ ಯುವಕರು ಸಂಪೂರ್ಣ ನಂಬುವಂತೆ ಮಾಡಿದ್ದ.


ಇಷ್ಟೇ ಅಲ್ಲದೆ ಮುತ್ಯಾಲಮಡು ಪ್ರವಾಸಿ ತಾಣದಲ್ಲಿದ್ದ ಯುವಕರಿಗೂ ಮೋಸ ಮಾಡಿರುವ ಅಸಾಮಿ ಮೈಸೂರು ಕುದುರೆ ಹಾಗೂ ಪೋಲೀಸರು ಸೀಜ್ ಮಾಡಿರುವ ಪೆಟ್ಟಿ ಅಂಗಡಿಯನ್ನ ಕಡಿಮೆ ಬೆಲೆಗೆ ಕೊಡಿಸೋದಾಗಿ ನಂಬಿಸಿ ರವಿ ಎಂಬಾತನಿಂದ 75 ಸಾವಿರ ಹಣವನ್ನು ಪಡೆದು ವಂಚಿಸಿದ್ದಾನೆ. ಈ ಅಸಾಮಿ ಪೋನ್ ಮೂಲಕ ಬಣ್ಣ ಬಣ್ಣದ ಕಥೆಗಳನ್ನ ಹೇಳಿ ಮೋಸ ಮಾಡಿರುವ ಆಡಿಯೋವನ್ನ ಯುವಕರು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ.


ಇದನ್ನೂ ಓದಿ: PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ


ಒಟ್ನಲ್ಲಿ ಯುವಕರನ್ನು ವಂಚಿಸುವುದರಲ್ಲಿ ನಿಸ್ಸೀಮನಾಗಿದ್ದ ನಕಲಿ ಪೊಲೀಸಪ್ಪ ಬೆಂಗಳೂರಿಗೆ ಕರೆದೋಯ್ದ ನಾಲ್ಕೈದು ಬಿಲ್ಡಿಂಗ್ ತೋರಿಸಿ ಇದೆಲ್ಲವೂ ನಂದೆ ಎಂದು ಪೋಸ್ ಕೊಟ್ಟಿದ್ದ. ಅನುಮಾನ ಬಂದ ಯುವಕರು ಜ್ಞಾನಮೂರ್ತಿ ಬಗ್ಗೆ ಮಾಹಿತಿ ಕಲೆ ಹಾಕಿದಾಗ ನಕಲಿ ಪೊಲೀಸಪ್ಪನ ಅಸಲಿ ಕಹಾನಿ ಬಯಲಾಗಿದೆ. ಸದ್ಯ ನಕಲಿ ಪೊಲೀಸಪ್ಪ ವಂಚನೆ ಪ್ರಕರಣ ಆನೇಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿ ಸಿಕ್ಕ ಬಳಿಕ ಎಲ್ಲಿ ಯಾರ್ಯಾರಿಗೆ ಎಷ್ಟು ಹಣ ವಂಚಿಸಿದ್ದಾನೆ ಎಂಬುದರ ಬಗ್ಗೆ ತಿಳಿಯಬೇಕಿದೆ.


ವರದಿ : ಆದೂರು ಚಂದ್ರು 

Published by:Pavana HS
First published: