HOME » NEWS » State » A DOG SAVED ANOTHER DOG BY DONATING THE BLOOD IN HUBLI KANNADA NEWS BREAKING NEWS LG

ಮಾನವೀಯತೆಗೆ ಮೆಚ್ಚುಗೆ: ಜಾಂಡೀಸ್​ನಿಂದ ಬಳಲುತ್ತಿದ್ದ ನಾಯಿಗೆ ರಕ್ತದಾನ ಮಾಡಿ ಜೀವ ಉಳಿಸಿದ ರಾಣಾ

ರಾಣಾನನ್ನು ಕರೆದೊಯ್ದು ರೋಟಿಗೆ ರಕ್ತದಾನ ಮಾಡಿಸಿದ್ದಾರೆ. 2ವರ್ಷ 8ತಿಂಗಳು ವಯಸ್ಸಿನ ರಾಣಾ 350‌ ಮಿಲಿ ಲೀಟರ್ ರಕ್ತದಾನ ಮಾಡಿ ಪ್ರಾಣಾಪಾಯದಲ್ಲಿದ್ದ ರೋಟಿಯ ಜೀವ ಉಳಿಸಿದೆ.

news18-kannada
Updated:January 22, 2020, 1:04 PM IST
ಮಾನವೀಯತೆಗೆ ಮೆಚ್ಚುಗೆ: ಜಾಂಡೀಸ್​ನಿಂದ ಬಳಲುತ್ತಿದ್ದ ನಾಯಿಗೆ ರಕ್ತದಾನ ಮಾಡಿ ಜೀವ ಉಳಿಸಿದ ರಾಣಾ
ರಕ್ತದಾನ ಮಾಡಿದ ರಾಣಾ
  • Share this:
ಹುಬ್ಬಳ್ಳಿ(ಜ.22): ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ಎಂಬ ಮಾತಿದೆ. ರಕ್ತದಾನದಿಂದ ಒಬ್ಬರ ಜೀವ ಉಳಿಸಬಹುದು. ಮನುಷ್ಯರು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿರುವ ಉದಾಹರಣೆಗಳು ಪ್ರತಿನಿತ್ಯ ನಡೆಯುತ್ತವೆ. ಆದರೆ ಹುಬ್ಬಳ್ಳಿಯಲ್ಲಿ ನಾಯಿಯೊಂದು ರಕ್ತದಾನ ಮಾಡಿ ಇನ್ನೊಂದು ನಾಯಿಯ ಜೀವ ಉಳಿಸಿದ ಅಪರೂಪದ ಘಟನೆ ನಡೆದಿದೆ.

ಹುಬ್ಬಳ್ಳಿಯ ಸುಂದರ ನಗರದ ನಿವಾಸಿಯಾಗಿರುವ ಮನೀಷ ಕುಲಕರ್ಣಿ ಎಂಬುವರ 'ರಾಣಾ' ಎನ್ನುವ ನಾಯಿ ರಕ್ತದಾನದ‌ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಾಟ್‌ವೀಲರ್ ತಳಿಯ ರಾಣಾ ರಕ್ತದ ಅವಶ್ಯಕತೆಯಿದ್ದ 'ರೋಟಿ' ಎನ್ನುವ ಮತ್ತೊಂದು ನಾಯಿಗೆ ರಕ್ತದಾನ ಮಾಡಿ ಜೀವ ಉಳಿಸಿದೆ.

ಆರೋಪಿ ಆದಿತ್ಯ ರಾವ್ ಬಂಧನ ಹಿನ್ನೆಲೆ; ವಿಚಾರಣೆಗಾಗಿ ಬೆಂಗಳೂರಿಗೆ ದೌಡಾಯಿಸಿದ ಮಂಗಳೂರು ಪೊಲೀಸರು

ಧಾರವಾಡದ ಗಣೇಶ ಎನ್ನುವವರು ಸಾಕಿರುವ ರೋಟಿ ಎನ್ನುವ ನಾಯಿ ಕಾಮಾಲೆ ರೋಗದಿಂದ ಬಳಲುತ್ತಿತ್ತು. ಜಾಂಡೀಸ್ ಹೆಚ್ಚಾಗಿ ಕರುಳಿನ ಸಮಸ್ಯೆ ಉಲ್ಭಣಿಸಿತ್ತು. ಹೀಗಾಗಿ ರೋಟಿಗೆ ರಕ್ತದ ಅವಶ್ಯಕತೆಯಿತ್ತು.‌ ವಿಷಯ ತಿಳಿದ ರಾಣಾ ಮಾಲಿಕ ಮನೀಷ್ ರಕ್ತದಾನ ಮಾಡಲು ಮುಂದಾಗಿದ್ದಾರೆ. ರಾಣಾನನ್ನು ಕರೆದೊಯ್ದು ರೋಟಿಗೆ ರಕ್ತದಾನ ಮಾಡಿಸಿದ್ದಾರೆ. 2ವರ್ಷ 8ತಿಂಗಳು ವಯಸ್ಸಿನ ರಾಣಾ 350‌ ಮಿಲಿ ಲೀಟರ್ ರಕ್ತದಾನ ಮಾಡಿ ಪ್ರಾಣಾಪಾಯದಲ್ಲಿದ್ದ ರೋಟಿಯ ಜೀವ ಉಳಿಸಿದೆ.

ನಾಯಿ ಮಾಲೀಕನ ರಕ್ತದಾನ ಜಾಗೃತಿ

ವಿದ್ಯಾರ್ಥಿಯಾಗಿರುವ ಮನೀಷ ಕುಲಕರ್ಣಿ ಸಹ ರಕ್ತದಾನಿಯಾಗಿರುವುದು ವಿಶೇಷ. ಹಲವು ಬಾರಿ ರಕ್ತದಾನ ಮಾಡಿರುವ ಮನೀಷ್, ರಕ್ತದಾನದ ಮಹತ್ವದ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಮತ್ತು ರಕ್ತದ ಅವಶ್ಯಕತೆಯಿರುವವರಿಗೆ ರಕ್ತ ಪೂರೈಸುವ ಸೇವೆ ಮಾಡುತ್ತಿದ್ದಾರೆ. ಈಗ ತಮ್ಮ ನಾಯಿಗೂ ರಕ್ತದಾನದ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಪ್ರಾಣಿಗಳಲ್ಲಿ ಮನುಷ್ಯನಿಗೆ ಬಹಳ ಹತ್ತಿರವಿರುವ ಪ್ರಾಣಿ ಅಂದರೆ ನಾಯಿ. ಮಾಲೀಕನ ಪ್ರಾಣ ರಕ್ಷಣೆಗೆ ಸದಾ ಸಿದ್ಧವಿರುವ ನಾಯಿ ಇದೀಗ ಮತ್ತೊಂದು ನಾಯಿಯ ಪ್ರಾಣ ಕಾಪಾಡಿ ಶ್ರೇಷ್ಠತೆ ಮೆರೆದಿದೆ.

ಸಿಎಎ ವಿಚಾರದಲ್ಲಿ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂಕೋರ್ಟ್​ ನಿರಾಕರಣೆ; ಕೇಂದ್ರಕ್ಕೆ ನಾಲ್ಕು ವಾರ ಗಡುವು
First published: January 22, 2020, 1:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories